ಕನ್ನಡ ವಾರ್ತೆಗಳು

ಆಕಾಶವಾಣಿಯ ಹರ್ಷ ವಾರದ ಅತಿಥಿ ಡಾ.ಎಂ.ಎನ್ ರಾಜೇಂದ್ರಕುಮಾರ್

Pinterest LinkedIn Tumblr

Dr_MNR_Redio_1

ಮಂಗಳೂರು ಆಕಾಶವಾಣಿಯ ಹರ್ಷ ವಾರದ ಅತಿಥಿಯ 191ನೇ ಕಾರ್ಯಕ್ರಮದಲ್ಲಿ ಜೂನ್ರಂ14ದು ಬೆಳಿಗ್ಗೆ 8.50ಕ್ಕೆ ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್ ಅಧ್ಯಕ್ಷರಾದ ಡಾ.ಎಂ.ಎನ್ ರಾಜೇಂದ್ರ ಕುಮಾರ್ ಭಾಗವಹಿಸಲಿದ್ದಾರೆ.

ದಕ್ಷಿಣ ಕನ್ನಡ ಜಿಲ್ಲಾ ಕೇಂದ್ರ ಸಹಕಾರಿ ಬ್ಯಾಂಕ್‌ನಲ್ಲಿ 1987 ರಿಂದ ನಿರ್ದೇಶಕರಾಗಿ 1994 ರಿಂದ 21 ವರ್ಷಗಳ ಧೀರ್ಘ ಅವಧಿಯಲ್ಲಿ ಅಧ್ಯಕ್ಷರಾಗಿ ಬ್ಯಾಂಕಿನ ಸರ್ವತೋಮುಖ ಅಭಿವೃದ್ಧಿ ಗೆ ಶ್ರಮಿಸಿದ ಇವರು ಬ್ಯಾಂಕಿನ ಶತಮಾನೋತ್ಸವ ಆಚರಣೆಯ ಸಂದರ್ಭದಲ್ಲಿ 100 ಶಾಖೆಗಳನ್ನು ತೆರೆದವರು.

ಬ್ಯಾಂಕಿನ ಠೇವಣಾತಿ 2568.83 ಕೋಟಿಗಳ 2447 ಕೋಟಿ ರೂ.ಸಾಲ ವಿತರಿಸಿದುದಲ್ಲದೆ 22.73 ಕೋಟಿ ರೂ. ಲಾಭಗಳಿಸಿದೆ. ಉತ್ಕೃಷ್ಟ ಸಹಕಾರಿ ಸೌಧದ ಮೂಲಕ ದೇಶದಲ್ಲಿ ಅತ್ಯಾಧುನಿಕ ಸೌಲಭ್ಯ ಹೊಂದಿದ ಸಹಕಾರಿ ಕ್ಷೇತ್ರದ ಬ್ಯಾಂಕ್ ಎಂಬ ಕೀರ್ತಿಗೆ ಭಾಜನವಾಗಿದೆ.

Dr_MNR_Redio_2

 

ನವೋದಯ ಸ್ವಸಹಾಯ ಗುಂಪುಗಳ ಮೂಲಕ ಆರ್ಥಿಕ ಸಾಮಾಜಿಕ ಪ್ರಗತಿಗೆ ನಾಂದಿ ಹಾಡಿದ ರಾಜೇಂದ್ರ ಕುಮಾರ್ ಅವರು ಸಾಂಸ್ಕೃತಿಕ ರಂಗಕ್ಕೂ ಕೊಡುಗೆ ಸಲ್ಲಿಸಿದವರು. ತಮ್ಮ ಜೀವನದ ಸಾಧನೆಯ ಹೆಜ್ಜೆಗಳನ್ನು ಸಂದರ್ಶನದಲ್ಲಿ ತಿಳಿಸಿದ್ದಾರೆ.

ಇವರನ್ನು ಕಾರ್‍ಯಕ್ರಮ ನಿರ್ವಾಹಕರಾದ ಡಾ.ಸದಾನಂದ ಪೆರ್ಲ ಸಂದರ್ಶಿಸಿದ್ದಾರೆ. ಮುಂದಿನ ವಾರದ ಅತಿಥಿಯಾಗಿ ಮಹಾರಾಷ್ಟ್ರ ಘಟಕದ ಕನ್ನಡ ಸಾಹಿತ್ಯ ಪರಿಷತ್ ಅಧ್ಯಕ್ಷರಾದ ಶ್ರೀ ಎಚ್.ಬಿ.ಎಲ್ ರಾ ಭಾಗವಹಿಸಲಿದ್ದಾರೆ.

Write A Comment