ಕನ್ನಡ ವಾರ್ತೆಗಳು

ದ.ಕ.ಜಿಲ್ಲೆಗೆ ಶೀಘ್ರದಲ್ಲೇ 300 ಶಿಕ್ಷಕರ ನೇಮಕಾತಿ : ವಾಲ್ಟರ್ ಡಿಮೆಲ್ಲೊ

Pinterest LinkedIn Tumblr

Zp_meet_photo_1

ಮಂಗಳೂರು, ಜೂ.10 : ದಕ್ಷಿಣ ಕನ್ನಡ ಜಿಲ್ಲೆಯ ಸರಕಾರಿ ಶಾಲೆಗಳಲ್ಲಿ ಶೀಘ್ರದಲ್ಲೇ 300 ಶಿಕ್ಷಕ ರನ್ನು ನೇಮಕ ಮಾಡಲಾಗುವುದು. ಇದ ರಿಂದ ಶಾಲೆಗಳಲ್ಲಿನ ಶಿಕ್ಷಕರ ಕೊರತೆ ಸಮಸ್ಯೆ ಬಹುತೇಕವಾಗಿ ಬಗಹರಿಯಲಿದೆ ಎಂದು ಸಾರ್ವಜನಿಕ ಶಿಕ್ಷಣ ಇಲಾಖೆಯ ಉಪ ನಿರ್ದೇಶಕ ವಾಲ್ಟರ್ ಡಿಮೆಲ್ಲೊ ಹೇಳಿದ್ದಾರೆ.

ಜಿಲ್ಲಾ ಪಂಚಾಯತ್‌ನ ನೇತ್ರಾವತಿ ಸಭಾಂ ಗಣದಲ್ಲಿ ಅಧ್ಯಕ್ಷೆ ಆಶಾ ತಿಮ್ಮಪ್ಪ ಗೌಡ ಅಧ್ಯಕ್ಷತೆ ಯಲ್ಲಿ ಇಂದು ನಡೆದ ಸಾಮಾನ್ಯ ಸಭೆಯಲ್ಲಿ ಶಿಕ್ಷಕರ ಸಮಸ್ಯೆ ಕೊರತೆ ಕುರಿತಂತೆ ಸದಸ್ಯರ ಪ್ರಶ್ನೆಯೊಂದಕ್ಕೆ ಅವರು ಈ ಉತ್ತರ ನೀಡಿದರು. ಶಾಲೆಗಳಲ್ಲಿ ಮಕ್ಕಳ ಸಂಖ್ಯೆಗೆ ಅನುಗುಣವಾಗಿ ಶಿಕ್ಷಕರ ನೇಮಕ ಮಾಡಬೇಕೆಂದು ಸಭೆಯಲ್ಲಿ ಸದಸ್ಯ ಎಂ.ಎಸ್.ಮುಹಮ್ಮದ್‌ರ ಆಗ್ರಹಕ್ಕೆ ಪ್ರತಿಕ್ರಿಯಿಸಿದ ಡಿಡಿಪಿಐ, ಏಕ ಶಿಕ್ಷಕರಿರುವ ಶಾಲೆ ಸೇರಿದಂತೆ ಆಯಾ ಶಾಲೆಗಳಿಗೆ ಶಿಕ್ಷಕರನ್ನು ನಿಯೋಜಿಸಲು ಸರಕಾರದಿಂದ ನಿರ್ದೇಶನ ದೊರಕಿದೆ. ಅದರಂತೆ ಕೌನ್ಸೆಲಿಂಗ್ ನಡೆಸಿ ಅಗತ್ಯಕ್ಕಿಂತ ಹೆಚ್ಚಿನ ಸಂಖ್ಯೆಯಲ್ಲಿದ್ದ ಶಿಕ್ಷಕರನ್ನು ಬೇರೆ ಶಾಲೆಗಳಿಗೆ ಸ್ಥಳ ನಿಯುಕ್ತಿಗೊಳಿಸಿ ಕ್ರಮ ವಹಿಸಲಾಗಿದೆ. ಒಟ್ಟು 103 ಶಿಕ್ಷಕರನ್ನು ಹೆಚ್ಚು ವರಿ ಎಂದು ಪರಿಗಣಿಸಿ ಬೇರೆ ಶಾಲೆಗಳಿಗೆ ನಿಯುಕ್ತಿ ಗೊಳಿಸಲಾಗಿದೆ. ಆ ಪ್ರಕಾರ ಮಂಗಳೂರು ಉತ್ತರ 3, ಮಂಗಳೂರು ದಕ್ಷಿಣ 33, ಬಂಟ್ವಾಳ 14, ಪುತ್ತೂರು 22, ಬೆಳ್ತಂಗಡಿ 6, ಮೂಡುಬಿದಿರೆ 3 ಹಾಗೂ ಸುಳ್ಯದಲ್ಲಿ 22 ಹೆಚ್ಚುವರಿ ಶಿಕ್ಷಕರಿದ್ದರು. ಮುಖ್ಯ ಶಿಕ್ಷಕರ ಹುದ್ದೆ ಕೌನ್ಸೆಲಿಂಗ್ ಮೂಲಕವೇ ಭರ್ತಿ ಮಾಡಬೇಕಾಗಿದ್ದು, ಎಪ್ರಿಲ್ 6ರಂದು ನಡೆದ ಕೌನ್ಸೆಲಿಂಗ್‌ನಲ್ಲಿ ಹುದ್ದೆ ಭರ್ತಿಗೆ ಕ್ರಮವಾಗಿದೆ. ಆಗಸ್ಟ್‌ನಲ್ಲಿ ನೇಮಕಾತಿ ಪ್ರಕ್ರಿಯೆ ಮುಗಿದು ಶಿಕ್ಷಕರ ನೇಮಕವಾಗಲಿದೆ ಎಂದು ಡಿಡಿಪಿಐ ಮಾಹಿತಿ ನೀಡಿದರು.

Zp_meet_photo_2 Zp_meet_photo_3 Zp_meet_photo_4 Zp_meet_photo_5

ಬಳಿಕ ಐವನ್ ಡಿಸೋಜ, ರಾಷ್ಟ್ರೀಯ ಮಾಧ್ಯ ಮಿಕ ಶಿಕ್ಷಣ ಯೋಜನೆಯಡಿ ಕೈಗೊಳ್ಳಲಾದ ಕಾಮಗಾರಿಗಳ ಬಗ್ಗೆ ಅಧಿಕಾರಿಗಳು ಉತ್ತರ ನೀಡಲು ಕೋರಿದರು. ಅಧಿಕಾರಿಗಳು ನೀಡಿದ ಮಾಹಿತಿ ಬಗ್ಗೆ ಸದಸ್ಯರು ಅಸಮಾಧಾನ ವ್ಯಕ್ತ ಪಡಿಸಿದರು. ರಾಷ್ಟ್ರೀಯ ಮಾಧ್ಯಮಿಕ ಶಿಕ್ಷಣ ಯೋಜನೆಯಡಿ ಕಾಮಗಾರಿ ಮಾಡದವರನ್ನು ಕಪ್ಪು ಪಟ್ಟಿಗೆ ಸೇರಿಸಬೇಕೆಂದು ಸೂಚಿಸಿದರು. ಅಧ್ಯಕ್ಷರು ಈ ಬಗ್ಗೆ ಸರಕಾರದ ಗಮನ ಸೆಳೆ ಯುವಂತೆ ವಿಧಾನ ಪರಿಷತ್ ಸದಸ್ಯರನ್ನು ಕೋರಿದರು. ಇದಕ್ಕೆ ಪ್ರತಿಕ್ರಿಯಿಸಿದ ಐವನ್ ಡಿಸೋಜ, ಈ ಬಗ್ಗೆ ಜಿಲ್ಲಾ ಉಸ್ತುವಾರಿ ಸಚಿವರು ಪರಿಶೀಲನಾ ಸಭೆ ನಡೆಸುವಂತೆ ಕೋರುವುದಾಗಿ ಮತ್ತು ಈಗಾಗಲೇ ಆರಂಭಗೊಂಡಿರುವ ಕಾಮಗಾರಿ ಯನ್ನು ಪೂರ್ಣಗೊಳಿಸಲು ಸರಕಾರಕ್ಕೆ ಒತ್ತಡ ಹೇರುವುದಾಗಿ ನುಡಿದರು.

ಸಭೆಯಲ್ಲಿ ಸ್ಥಾಯಿ ಸಮಿತಿಗಳ ಅಧ್ಯಕ್ಷರಾದ ಮೀನಾಕ್ಷಿ ಮಂಜುನಾಥ್, ಸಿ.ಕೆ.ಚಂದ್ರಕಲಾ, ಬಾಲಕೃಷ್ಣ ಸುವರ್ಣ ಉಪಸ್ಥಿತರಿದ್ದರು.

Write A Comment