ಕನ್ನಡ ವಾರ್ತೆಗಳು

ಸೂರ್ಯ ನಮಸ್ಕಾರ ಮಾಡಿದ್ರೆ ಕೆಡುಕಾಗುತ್ತಂತೆ !

Pinterest LinkedIn Tumblr

9885n-SURYA-NAMASKAR-large570ಒಂದೆಡೆ ಪ್ರಧಾನಿ ಮೋದಿ ಯೋಗದ ಪ್ರಾಮುಖ್ಯತೆಯನ್ನು ಸಾರುವ ಮೂಲಕ ಆರೋಗ್ಯಕರ ಸಮಾಜದ ನಿರ್ಮಾಣದ ಚಿಂತನೆ ನಡೆಸುತ್ತಿದ್ದರೆ ಹಿಂದೂಗಳು ಮಾಡುವ ಸೂರ್ಯ ನಮಸ್ಕಾರ ಮುಸ್ಲಿಮರ ವಿರುದ್ಧವಾಗಿದೆ ಎಂದು ಆಲ್ ಇಂಡಿಯಾ ಮುಸ್ಲಿಂ ಪರ್ಸನಲ್ ಲಾ ಬೋರ್ಡ್ ಸದಸ್ಯ ಕಮಲ್ ಫಾರೂಖಿ ಹೇಳಿಕೆ ನೀಡಿದ್ದಾರೆ.

ಯಾವುದೇ ಕಾರಣಕ್ಕೂ ಸರ್ಕಾರಿ ಶಾಲೆಗಳಲ್ಲಿ ಸೂರ್ಯ ನಮಸ್ಕಾರವನ್ನು ಕಡ್ಡಾಯವಾಗಿ ಮಾಡಬಾರದು ಎಂದಿರುವ ಫಾರೂಖಿ, ಮುಸ್ಲಿಮರು ಕೇವಲ ಅಲ್ಲಾನಿಗೆ ಮಾತ್ರ ತಲೆಬಾಗುವುದು. ಅಲ್ಲದೇ  ಸೂರ್ಯನಮಸ್ಕಾರ ಮಾಡಿದರೆ ಕೆಡುಕುಂಟಾಗುತ್ತದೆ. ಹೀಗಾಗಿ ಬೋರ್ಡ್ ಈ ಆಚರಣೆ ವಿರುದ್ಧ ಕೋರ್ಟ್ ಮೆಟ್ಟಿಲೇರಲಿದೆ ಎಂದು ತಿಳಿಸಿದ್ದಾರೆ.

ಯೋಗ ಹಾಗೂ ಸೂರ್ಯ ನಮಸ್ಕಾರದ ಬಗೆಗೆ ನಡೆಯುತ್ತಿರುವ ಚರ್ಚೆಯ ಬೆನ್ನ ಹಿಂದೆಯೇ ದಾರುಲ್ ಉಲೂಮ್ ನಡ್‍ವತುಲ್ ಉಲೆಮಾದಲ್ಲಿ 51 ಸದಸ್ಯರ ಸಭೆ ನಡೆದಿದ್ದು ಸೂರ್ಯ ನಮಸ್ಕಾರ ಸೇರಿದಂತೆ ಹಲವು ವಿಚಾರಗಳ ಬಗ್ಗೆ ಈ ಮುಸ್ಲಿಂ ಬೋರ್ಡ್ ಚರ್ಚಿಸಿ ಇದಕ್ಕೆ ವಿರೋಧ ವ್ಯಕ್ತಪಡಿಸುವ ನಿರ್ಣಯವನ್ನು ಕೈಗೊಂಡಿದ್ದಾರೆ ಎಂಬ ಮಾಹಿತಿ ಲಭ್ಯವಾಗಿದೆ.

Write A Comment