ಕನ್ನಡ ವಾರ್ತೆಗಳು

ಮಕ್ಕಳ ಶಿಕ್ಷ್ಣಣದೊಂದಿಗೆ ಕ್ರೀಡೆಗೂ ಹೆತ್ತವರ ಪ್ರೋತ್ಸಾಹ ಅಗತ್ಯ : ಜಾವಗಲ್ ಶ್ರೀನಾಥ್ .

Pinterest LinkedIn Tumblr

cricket_shreenath_1

ಮಂಗಳೂರು,ಮೇ.30 : ದ.ಕ.ಜಿಲ್ಲಾ ಕ್ರಿಕೆಟ್ ಅಸೋಸಿಯೇಷನ್ ವತಿಯಿಂದ ನಗರದ ಮೋತಿಮಹಲ್ ನಲ್ಲಿ ಮಕ್ಕಳಿಗೆ ಪ್ರಶಸ್ತಿ ಮತ್ತು ಅರ್ಹತಪತ್ರ ವಿತರಣೆ ಕಾರ್ಯಕ್ರಮ  ಎರ್ಪಡಿಸಲಾಗಿದ್ದು ಕಾರ್ಯಕ್ರಮದ ಮುಖ್ಯ ಅಥಿತಿಯಾಗಿ ಭಾಗವಹಿಸಿದ ಖ್ಯಾತ ಕ್ರಿಕೆಟಿಗೆ ಜಾವಗಲ್ ಶ್ರೀನಾಥ್,  ಮಕ್ಕಳಿಗೆ ಶಿಕ್ಷಣ ಮತ್ತು ಕ್ರೀಡೆಯ ಮಹತ್ವವನ್ನು ಹೆತ್ತವರು ತಿಳಿ ಹೇಳುವಂತೆ ಆಗಬೇಕು ಎಂದು ಹಿತನುಡಿದರು.

ಕ್ರಿಕೆಟ್ ಆಡಲು ಮನೆಯವರ ಪ್ರೋತ್ಸಾಹ ಬೇಕು. ಕ್ರೀಕೆಟ್ ನಲ್ಲಿ ಕೇವಲ 11 ಜನ ಮಾತ್ರ ಆಡಲು ಸಾಧ್ಯ ಎಲ್ಲರಿಗೂ ಅವಕಾಶ ಸಿಗುವುದಿಲ್ಲ. ಈ ಅಂಶವನ್ನು ಗಮನದಲ್ಲಿಟ್ಟುಕೊಳ್ಳಬೇಕೆಂದರು. ಅಷ್ಟೆ ಅಲ್ಲದೇ ಮಂಗಳೂರ ಮಕ್ಕಳಿಗೆ ಕ್ರಿಕೆಟ್ ಆಡಲು ಪ್ರೋತ್ಸಾಹಿಸಬೇಕು ಎಂದೂ ಶ್ರೀನಾಥ್ ನುಡಿದರು.

cricket_shreenath_2 cricket_shreenath_3 cricket_shreenath_4 cricket_shreenath_5 cricket_shreenath_6 cricket_shreenath_7 cricket_shreenath_8 cricket_shreenath_9 cricket_shreenath_10 cricket_shreenath_11 cricket_shreenath_13

ನಿಟ್ಟೆ ಯುನಿವರ್ಸಿಟಿ ಉಪಕುಲಪತಿ ಡಾ. ಶಾಂತಾರಾಮ ಶೆಟ್ಟಿ, ಯುವಜನಸೇವೆ ಖಾತೆ ಸಚಿವ ಅಭಯಚಂದ್ರ ಜೈನ್, ಉದ್ಯಮಿ ಎನ್ ವಿನಯ್ ಹೆಗ್ಡೆ, ಸದಾನಂದ ಶೆಟ್ಟಿ, ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜ, ಶ್ರೀಧರ್ ಕಾಮ್ತ, ಗೋಪಾಲ್ ಕಾಮತ್ ಮೊದಲಾದವರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಕ್ರಿಕೆಟ್ ಅಸೋಸಿಯೇಷನ್ ಅಧ್ಯಕ್ಷ ಮಹಾಬಲ ಮಾರ್ಲ ಸ್ವಾಗತಿಸಿದರು.

Write A Comment