ಕನ್ನಡ ವಾರ್ತೆಗಳು

ಉಳ್ಳಾಲ ದರ್ಗಾ ಸಮಿತಿ ವತಿಯಿಂದ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕ ವಿತರಣೆ

Pinterest LinkedIn Tumblr

ullalla_book_relsce_1

ಉಳ್ಳಾಲ. ಮೇ 28 : ಶಿಕ್ಷಣ ಪಡೆಯುವ ಬಡ ವಿದ್ಯಾರ್ಥಿಗಳಿಗೆ ಉಚಿತ ಪುಸ್ತಕಗಳನ್ನು ಪ್ರತಿ ವರ್ಷ ದರ್ಗಾ ವತಿಯಿಂದ ವಿತರಿಸುತ್ತಿದ್ದು, ಈ ಬಾರಿ 3,200 ವಿದ್ಯಾರ್ಥಿಗಳಿಗೆ ಪುಸ್ತಕ ವಿತರಿಸಲಾಗುವುದು ಎಂದು ಉಳ್ಳಾಲ ಜುಮಾ ಮಸೀದಿ ಮತ್ತು ಸಯ್ಯಿದ್ ಮದನಿ ದರ್ಗಾ ಸಮಿತಿ ಅಧ್ಯಕ್ಷ ಹಾಜಿ ಯು.ಎಸ್. ಹಂಝ ಅವರು ಹೇಳಿದರು.

ಅವರು ಕೇಂದ್ರ ಜುಮಾ ಮಸೀದಿ ಮತ್ತು ಉಳ್ಳಾಲ ದರ್ಗಾ ಸಮಿತಿ ಆಶ್ರಯದಲ್ಲಿ ಉಳ್ಳಾಲ ಮದನಿ ಹಾಲ್‌ನಲ್ಲಿ ಗುರುವಾರ ನಡೆದ ಉಚಿತ ಪುಸ್ತಕ ವಿತರಣಾ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.

ullalla_book_relsce_2 ullalla_book_relsce_3 ullalla_book_relsce_4 ullalla_book_relsce_5 ullalla_book_relsce_6 ullalla_book_relsce_7 ullalla_book_relsce_8

ದರ್ಗಾ ಆಸುಪಾಸಿನ ಮತ್ತು ಹೊರನಾಡಿನ ಬಡ ಕುಟುಂಬದ ವಿದ್ಯಾರ್ಥಿಗಳಿಗೆ ಅವರ ಶಿಕ್ಷಣಕ್ಕೆ ಪ್ರೋತ್ಸಾಹ ನೀಡಿ ಶಾಲಾಶುಲ್ಕ, ಪುಸ್ತಕ ಸೇರಿದಂತೆ ಶಿಕ್ಷಣಕ್ಕೆ ಬೇಕಾದ ಸವಲತ್ತುಗಳನ್ನು ದರ್ಗಾ ಸಮಿತಿ ಒದಗಿಸುತ್ತದೆ ಬಡ ವಿದ್ಯಾರ್ಥಿಗಳ ಶಿಕ್ಷಣಕ್ಕೆ ಒತ್ತು ಕೊಡುವ ದೃಷ್ಟಿಯಿಂದ ಈ ಯೋಜನೆ ಹಾಕಿಕೊಂಡಿದ್ದೇವೆ ಎಂದರು.
ಕಾರ್ಯಕ್ರಮದಲ್ಲಿ ದರ್ಗಾ ಅಧ್ಯಕ್ಷರಾದ ಹಾಜಿ ಯು.ಎಸ್ ಹಂಝ, ಉಪಾಧ್ಯಕ್ಷ ಅಶ್ರಫ್ ರೈಟ್‌ವೇ, ಕಾರ್ಯದರ್ಶಿ ಯು.ಟಿ. ಇಲ್ಯಾಸ್, ಜತೆ ಕಾರ್ಯದರ್ಶಿ ಫಾರೂಕ್ ಮಾರ್ಗತಲೆ, ಲೆಕ್ಕಪರಿಶೋದಕ ಹಮೀದ್ ಕಲ್ಲಾಪು, ದರ್ಗಾ ಸಮಿತಿ ಸದಸ್ಯರು ಸೇರಿದಂತೆ ಹಲವರು ಉಪಸ್ಥಿತರಿದ್ದರು.

Write A Comment