ಕನ್ನಡ ವಾರ್ತೆಗಳು

ಜೂನ್ 9 : ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಮಂಗಳಮುಖಿ ಮನಬಿ ಬಂಡೋಪಾಧ್ಯಾಯ ಅಧಿಕಾರ ಸ್ವೀಕಾರ.

Pinterest LinkedIn Tumblr

Manabi_bandopadya_photo

ಕೋಲ್ಕತ್ತಾ,ಮೇ.27  : ಭಾರತದ, ಬಹುಶಃ ವಿಶ್ವದ ಕೂಡ ಮೊದಲ ಮುಂಗಳಮುಖಿ ಪ್ರಿನ್ಸಿಪಾಲ್‌ ಆಗಿ ಮನಬಿ ಬಂಡೋಪಾಧ್ಯಾಯ ನೇಮಕವಾಗಿದ್ದಾರೆ. ಪಶ್ಚಿಮ ಬಂಗಾಳದ ಕೃಷ್ಣನಗರ ಮಹಿಳಾ ಕಾಲೇಜಿನ ಪ್ರಿನ್ಸಿಪಾಲ್ ಆಗಿ ಮಂಗಳಮುಖಿ ಮನಬಿ ಬಂಡೋಪಾಧ್ಯಾಯ ಜೂನ್‌ 9 ರಂದು ಅಧಿಕಾರ ಸ್ವೀಕರಿಸಲಿದ್ದಾರೆ. ಪ್ರಸ್ತುತ ಮನಬಿ, ವಿವೇಕಾನಂದ ಸತೊಬರ್ಶಿಕಿ ಮಹಾವಿದ್ಯಾಲಯದಲ್ಲಿ ಸಹಾಯಕ ಪ್ರಾಂಶುಪಾಲರಾಗಿ ಕೆಲಸ ಮಾಡುತ್ತಿದ್ದಾರೆ.

‘ಕಾಲೇಜು ಸೇವಾ ಆಯೋಗ ಈ ನಿರ್ಧಾರ ಕೈಗೊಂಡಿದೆ. ಅವರ ನಿರ್ಧಾರದಲ್ಲಿ ನಾನು ಹಸ್ತಕ್ಷೇಪ ಮಾಡುವುದಿಲ್ಲ. ಅವರು ತಮ್ಮ ವಿಶಾಲ ಮನಸ್ಥಿತಿಯಿಂದ ಜಾಗೃತರಾಗಿದ್ದಾರೆ. ಈ ನಿರ್ಧಾರದ ಬಗ್ಗೆ ನನಗೆ ಖುಷಿ ಇದೆ’ ಎಂದು ಈ ಬಗ್ಗೆ ಪ್ರತಿಕ್ರಿಯಿಸಿದ ಪಶ್ಚಿಮ ಬಂಗಾಳ ರಾಜ್ಯ ಶಿಕ್ಷಣ ಸಚಿವೆ ಪಾರ್ಥ ಚಟರ್ಜಿ ಹೇಳಿದ್ದಾರೆ.

‘ಕಾಲೇಜನ್ನು ಸುಗಮವಾಗಿ ನಡೆಸಲು ನಮಗೆ ಒಬ್ಬ ಸದೃಢ ವ್ಯಕ್ತಿತ್ವವಿರುವವರು ಬೇಕಾಗಿದ್ದರು’ ಎಂದು ಈ ಕಾಲೇಜು ಆಡಳಿತ ಮಂಡಳಿಯ ಅಧ್ಯಕ್ಷರೂ ಆಗಿರು ತಾಂತ್ರಿಕ ಶಿಕ್ಷಣ ಸಚಿವ ಉಜ್ಜಲ್‌ ಬಿಸ್ವಾಸ್‌ ಹೇಳಿದ್ದಾರೆ.

ಮಂಗಳವಾರ ಮನಬಿ, ತಮ್ಮ ದತ್ತು ಪುತ್ರ ದೇಬಶಿಶ್‌ ಮನಬಿಪುತ್ರೊ ಹಾಗೂ ಮಂಗಳಮುಖಿ ಗೆಳೆತಿ ಜ್ಯೋತಿ ಸಮಂತಾ ಜೊತೆ ಕಾಲೇಜಿಗೆ ಭೇಟಿ ನೀಡಿದ್ದರು. ಈ ವೇಳೆ ಸ್ಫೋರ್ಟಿ ಲುಕ್‌ನ ರೆಬಾನ್‌ ಗ್ಲಾಸ್‌ ಧರಿಸಿದ್ದರು.

Write A Comment