ಕನ್ನಡ ವಾರ್ತೆಗಳು

ಮೇ .29 : ಮಾಜಿ ಕ್ರಿಕೆಟ್ ಆಟಗಾರ ಜಾವಗಲ್ ಶ್ರೀನಾಥ್‌ಗೆ ರೋಟರಿ ವಂದನಾ ಪ್ರಶಸ್ತಿ ಪ್ರಧಾನ

Pinterest LinkedIn Tumblr

javagal_srinath_photo

ಮಂಗಳೂರು, ಮೇ 26: ಮಾಜಿ ಅಂತಾರಾಷ್ಟ್ರೀಯ ಕ್ರಿಕೆಟ್ ಆಟಗಾರ ಮೈಸೂರು ಎಕ್ಸ್‌ಪ್ರೆಸ್ ಎಂದು ಖ್ಯಾತಿಗಳಿಸಿದ ಜಾವಗಲ್ ಶ್ರೀನಾಥ್ ಅವರು ಅಂತಾರಾಷ್ಟ್ರೀಯ ಕ್ರಿಕೆಟ್ ಕ್ರೀಡಾ ಕ್ಷೇತ್ರದಲ್ಲಿ ಸಾಸಿದ ಗಮನಾರ್ಹ ಜೀವಮಾನ ಸಾಧನೆಯನ್ನು ಪರಿಗಣಿಸಿ ಅವರನ್ನು ಈ ಸಾಲಿನ ರಾಜ್ಯ ಮಟ್ಟದ ಪ್ರತಿಷ್ಠಿತ ರೋಟರಿ ವಂದನಾ ಪ್ರಶಸ್ತಿಗೆ ಆಯ್ಕೆ ಮಾಡಲಾಗಿದೆ.

ಪ್ರಶಸ್ತಿಯನ್ನು ನಗರದ ರೋಟರಿ ಮಂಗಳೂರು ಸೆಂಟ್ರಲ್ ಮತ್ತು ರೋಟಾರೆಕ್ಟ್ ಮಂಗಳೂರು ಸಿಟಿ ಜಂಟಿಯಾಗಿ ಪ್ರಾಯೋಜಿಸಿದ್ದು, ಈ ಸಂಸ್ಥೆಗಳ ಆಶ್ರಯದಲ್ಲಿ ಮೇ 29ರ ರಾತ್ರಿ 8 ಗಂಟೆಗೆ ನಗರದ ಹೊಟೇಲ್ ದೀಪಾ ಕಂರ್ಟ್ಸ್‌ನಸಭಾಂಗಣದಲ್ಲಿ ಜರಗುವ ವರ್ಣರಂಜಿತ ಸಮಾರಂಭದಲ್ಲಿ ಶ್ರೀನಾಥ್‌ರವರನ್ನು ಗೌರವಿಸಿ, ಪ್ರಶಸ್ತಿ ಪ್ರದಾನ ಮಾಡಲಾಗುವುದು. ಶ್ರೀನಾಥ್ ಅವರು ರಾಷ್ಟ್ರ ಮಟ್ಟದ ಅರ್ಜುನ ಪ್ರಶಸ್ತಿ ಪುರಸ್ಕೃತರಾಗಿದ್ದಾರೆ.

ಮಂಗಳೂರು ವಿಶ್ವ ವಿದ್ಯಾನಿಲಯದ ಉಪಕುಲಪತಿ ಪ್ರೊ.ಡಾ.ಕೆ. ಬೈರಪ್ಪಅವರು ಮುಖ್ಯ ಅತಿಥಿಯಾಗಿ, ಹಾಗೂ ರೋಟರಿ ಜಿಲ್ಲಾ ಸಹಾಯಕ ಗವರ್ನರ್ ಸತೀಶ್ ಬೋಳಾರ್ ಮತ್ತು ರೋಟರೆಕ್ಟ್ ಜಿಲ್ಲಾ ಪ್ರತಿನಿ ರಝಾಕ್ ಕಬಕರ್ಸ್ ಅವರು ಗೌರವ ಅತಿಥಿಗಳಾಗಿ ಸಮಾರಂಭದಲ್ಲಿ ಪಾಲ್ಗೊಳ್ಳಲಿದ್ದಾರೆ.

ಬೌಲಿಂಗ್ ಸಾಧನೆ: 67 ಟೆಸ್ಟ್ ಪಂದ್ಯಗಳು – 236 ವಿಕೆಟ್ಸ್, ಅಂತಾರಾಷ್ಟ್ರೀಯ ಏಕ ದಿನ 229 ಪಂದ್ಯದಲ್ಲಿ 315 ವಿಕೆಟ್ಸ್, 4 ವಿಶ್ವ ಕಪ್‌ನ ಪಂದ್ಯಗಳಲ್ಲಿ 44 ವಿಕೆಟ್ಸ್‌ಗಳನ್ನು ಗಳಿಸಿದ್ದಾರೆ. ಅವರು 1997 ರಲ್ಲಿ ಜಿಂಬಾಬ್ವೆ ರಾಷ್ಟ್ರದ ಪರ್ಲ್ ಕ್ರಿಕೆಟ್ ಕ್ರೀಡಾಂಗಣದಲ್ಲಿ ಜರಗಿದ ಪಂದ್ಯದಲ್ಲಿ ಪ್ರತಿ ಗಂಟೆಗೆ 157 ಕಿ. ಮೀ. ಅತ್ಯಂತ ವೇಗದ ಎಸೆತವನ್ನು ದಾಖಲಿಸಿದ್ದಾರೆ ಮತ್ತು ಪ್ರಥಮ ದರ್ಜೆ ಕ್ರಿಕೆಟ್ ಪಂದ್ಯಗಳಲ್ಲಿ 500 ಕ್ಕೂ ಮಿಕ್ಕಿ ವಿಕೆಟ್‌ಗಳನ್ನು ಗಳಿಸಿದ್ದಾರೆ.

Write A Comment