ಕನ್ನಡ ವಾರ್ತೆಗಳು

ಹೊಸ ದಿಗಂತ ಪತ್ರಿಕೆಯ ಹೊಸ ಮುದ್ರಣ ಯಂತ್ರಕ್ಕೆ ಚಾಲನೆ

Pinterest LinkedIn Tumblr

Hosa_digantha_open_1

ಮಂಗಳೂರು, ಮೇ 26: ಯೆಯ್ಯಡಿಯ ಕೈಗಾರಿಕಾ ಪ್ರಾಂಗಣದಲ್ಲಿರುವ ದಿಗಂತ ಮುದ್ರಣ ಸಂಸ್ಥೆಯಲ್ಲಿ 3.ಕೋ.ರೂ.ವೆಚ್ಚದಲ್ಲಿ ಸ್ಥಾಪಿಸಲಾದ ಹೊಸ ದಿಗಂತ ಪತ್ರಿಕೆಯ ಹೊಸ ಮುದ್ರಣ ಯಂತ್ರದ ಉದ್ಘಾಟನೆ ಸೋಮವಾರ ನೆರವೇರಿತು. ನೂತನ ಮುದ್ರಣ ಯಂತ್ರಕ್ಕೆ ಚಾಲನೆ ನೀಡಿ ಮಾತನಾಡಿದ ಆಳ್ವಾಸ್ ಶಿಕ್ಷಣ ಪ್ರತಿಷ್ಠಾನದ ಅಧ್ಯಕ್ಷ ಡಾ.ಎಂ.ಮೋಹನ್ ಆಳ್ವ, ಹೊಸ ದಿಗಂತ ದೇಶೀಯ ವಿಚಾರಗಳು, ವೌಲ್ಯಗಳಿಗೆ ಆದ್ಯತೆ ನೀಡುತ್ತಿರುವ ಪತ್ರಿಕೆ ಎಂದರು.

ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಅಖಿಲ ಭಾರತೀಯ ವ್ಯವಸ್ಥಾಪಕ ಪ್ರಮುಖ್ ಮಂಗೇಶ್ ಭೇಂಡೆ ಶುಭಾಂಸನೆಗೈದರು. ಸಂಸದ ನಳಿನ್ ಕುಮಾರ್ ಕಟೀಲ್ ಅಧ್ಯಕ್ಷತೆ ವಹಿಸಿದ್ದರು. ಜ್ಞಾನ ಭಾರತಿ ಪ್ರಕಾಶನದ ನಿರ್ದೇಶಕ ನಿರ್ಮಲ್ ಕುಮಾರ್, ಸುರಾನಾ ಗೌರವ ಅತಿಥಿಗಳಾಗಿದ್ದರು.

Hosa_digantha_open_2 Hosa_digantha_open_3 Hosa_digantha_open_4 Hosa_digantha_open_5 Hosa_digantha_open_6 Hosa_digantha_open_7 Hosa_digantha_open_8 Hosa_digantha_open_9

 

Hosa_digantha_open_10

ಇದೇ ಸಂದರ್ಭ ದಿಗಂತ ಮುದ್ರಣ ಸಂಸ್ಥೆಯ ಹಿರಿಯ ಸಿಬ್ಬಂದಿ ಉಮೇಶ್ ಭಂಡಾರಿ, ಭಾಸ್ಕರ ಸಾಲಿಯಾನ್ ಮತ್ತು ಗಣೇಶ್ ಕೋಟ್ಯಾನ್‌ರನ್ನು ಸನ್ಮಾನಿಸಲಾಯಿತು.

ದಿಗಂತ ಮುದ್ರಣ ಸಂಸ್ಥೆಯ ಅಧ್ಯಕ್ಷ ಡಾ.ಪಿ.ವಾಮನ ಶೆಣೈ ಉಪಸ್ಥಿತರಿದ್ದರು. ಹೊಸ ದಿಗಂತ ಪತ್ರಿಕೆಯ ಮುಖ್ಯ ಕಾರ್ಯನಿರ್ವಹಣಾಕಾರಿ ಪ್ರಕಾಶ್ ಪಿ.ಎಸ್. ಪ್ರಾಸ್ತಾವಿಕವಾಗಿ ಮಾತನಾಡಿ ಸ್ವಾಗತಿಸಿದರು. ದಿಗಂತ ಮುದ್ರಣ ಸಂಸ್ಥೆಯ ಮಹಾ ಪ್ರಬಂಧಕ ಮಿಥುನ್ ಎ.ಎಸ್. ವಂದಿಸಿದರು. ರಾಜೇಶ್ ಕಾರ್ಯಕ್ರಮ ನಿರೂಪಿಸಿದರು.

Write A Comment