ಕನ್ನಡ ವಾರ್ತೆಗಳು

ಜೆಎಂಎಫ್‌ಸಿ ನ್ಯಾಯಾಲಯ ವತಿಯಿಂದ ಸೈಬರ್ ಅಪರಾಧ ಎಸಗಿದ ಅಪರಾಧಿಗೆ ಶಿಕ್ಷೆ

Pinterest LinkedIn Tumblr

cyber crime

ಮಂಗಳೂರು, ಮೇ 22: ಸೈಬರ್ ಅಪರಾಧ ಎಸಗಿದ ಅಪರಾಧಿಯೋರ್ವನಿಗೆ ಮಂಗಳೂರಿನ ಜೆಎಂಎಫ್‌ಸಿ ಮೂರನೆ ನ್ಯಾಯಾಲಯ ಶಿಕ್ಷೆ ವಿಧಿಸಿ ತೀರ್ಪು ನೀಡಿದೆ. 2010ರಲ್ಲಿ ಪಶ್ಚಿಮ ಬಂಗಾಳದ ದೇವರಾಜ್ ಸೇನ್ ಗುಪ್ತಾ(26) ಎಂಬಾತನ ವಿರುದ್ಧ ಸೈಬರ್ ಅಪರಾಧ ಕುರಿತಂತೆ ಕಾವೂರು ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು. ಕೊಂಚಾಡಿ ಬಳಿಯ ಫ್ಲ್ಯಾಟ್‌ನಲ್ಲಿ ಏರ್‌ಇಂಡಿಯಾದಲ್ಲಿ ಏರ್‌ಹೋಸ್ಟೆಸ್ ಆಗಿದ್ದ ಪಶ್ಚಿಮ ಬಂಗಾಳದ ಯುವತಿಯ ಮುಖದ ಚಿತ್ರವನ್ನು ಅಶ್ಲೀಲ ಚಿತ್ರಗಳಿಗೆ ಅಂಟಿಸಿ, ಆಕೆಯ ಗೆಳೆಯನ ಈ ಮೇಲ್‌ನ್ನು ಹ್ಯಾಕ್ ಮಾಡಿ ಆ ಮೂಲಕ ಇತರರಿಗೆ ಕಳುಹಿಸಿದ ಆರೋಪವನ್ನು ಈತ ಎದುರಿಸುತ್ತಿದ್ದ.

ಇದೀಗ ಈತನ ವಿರುದ್ಧ ಆರೋಪ ಸಾಬೀತಾದ ಹಿನ್ನೆಲೆಯಲ್ಲಿ ಸಾದಾ ಶಿಕ್ಷೆ , 50 ಸಾವಿರ ರೂ. ದಂಡ ಮತ್ತು ಒಂದು ವರ್ಷ ಸಾದಾ ಶಿಕ್ಷೆ ಹಾಗೂ ಒಂದು ಲಕ್ಷ ರೂ. ದಂಡ ವಿಧಿಸಿ ಜೆಎಂಎಫ್‌ಸಿ ಮೂರನೆ ನ್ಯಾಯಾಲಯದ ನ್ಯಾಯ್ಯಾಧೀಶರು ತೀರ್ಪು ನೀಡಿದ್ದಾರೆ. ಅಲ್ಲದೆ ದಂಡದ ಒಂದು ಲಕ್ಷ ರೂ. ಮೊತ್ತವನ್ನು ಸಂತ್ರಸ್ತ ಮಹಿಳೆಗೆ ನೀಡುವಂತೆ ನ್ಯಾಯಾಲಯ ಆದೇಶಿಸಿದೆ.

Write A Comment