ಕನ್ನಡ ವಾರ್ತೆಗಳು

ರಾಮಕೃಷ್ಣ ಮಿಷನ್‌ ವತಿಯಿಂದ 16 ನೇ ವಾರದ ಸ್ವಚ್ಚ ಭಾರತ ಅಭಿಯಾನ.

Pinterest LinkedIn Tumblr

Swach_abiyn_photo_1

ಮಂಗಳೂರು,ಮೇ.18: ರಾಮಕೃಷ್ಣ ಮಿಷನ್‌ಮುಂದಾಳುತನದಲ್ಲಿ 40 ವಾರಗಳ ಸ್ವಚ್ಚ ಭಾರತಕ್ಕಾಗಿ ಸ್ವಚ್ಚ ಮಂಗಳೂರು ಅಭಿಯಾನದ 16ನೇ ವಾರದ ಸ್ವಚ್ಚತಾ ಕಾರ್ಯವನ್ನು  ಮಂಗಳೂರಿನ ಲೇಡಿಹಿಲ್ ಮತ್ತುಚಿಲಿಂಬಿ ಪರಿಸರದಲ್ಲಿ‌ ಆಯೋಜಿಸಲಾಗಿತ್ತು. ಲೇಡಿಹಿಲ್ ವೃತ್ತದಲ್ಲಿ ಕಾರ್ಯಕ್ರಮಕ್ಕೆ ಚಾಲನೆ ನೀಡಲಾಯಿತು.

ಆಶ್ರಮದ ಮುಖ್ಯಸ್ಥರಾದ ಸ್ವಾಮಿ ಜಿತಕಾಮಾನಂದಜಿಯವರ‌ ಉಪಸ್ಥಿತಿಯಲ್ಲಿ ಗುಜರಾತಿನ ರಾಜ್‌ಕೋಟ್‌ ರಾಮಕೃಷ್ಣ ಮಿಷನ್ನಿನ ಸ್ವಾಮಿ ಯತಿಧರ್ಮಾನಂದಜಿ ಹಾಗೂ ಎಸ್‌ಸಿ‌ಎಸ್ ಆಸ್ಪತ್ರೆಯ ಮುಖ್ಯಸ್ಥರಾದ ಡಾ. ಜೀವರಾಜ್ ಸೊರಕೆ ಜಂಟಿಯಾಗಿ 16ನೇ ಅಭಿಯಾನಕ್ಕೆ ಹಸಿರು ನಿಶಾನೆ ತೋರಿಸಿದರು.

ಸ್ವಾಮಿಜಿತಕಾಮಾನಂದಜಿ ಹಾಗೂ ಸ್ವಾಮಿ ಯತಿಧರ್ಮಾನಂದಜಿ ಲೇಡಿಹಿಲ್ ವೃತ್ತದ ಬಳಿಯಿರುವ ಪುಟ್ ಪಾಥ್‌ ಸ್ವಚ್ಛಗೊಳಿಸಿದರು. ಆಶ್ರಮದ ಬ್ರಹ್ಮಚಾರಿಗಳು ಸ್ವಯಂ ಸೇವಕ ರೊಡಗೂಡಿ ಚಿಲಿಂಬಿ ಪರಿಸರದಲ್ಲಿ ಸ್ವಚ್ಛತಾ ಕೈಂಕರ್ಯ ನಡೆಸಿದರು. ಅಭಿಯಾನದ ಮಾರ್ಗದರ್ಶಿ ಕ್ಯಾ. ಗಣೇಶ್‌ಕಾರ್ಣಿಕ ನೇತೃತ್ವದಲ್ಲಿ ಹಿರಿಯ ಸ್ವಯಂಸೇವಕರು ಲೇಡಿಹಿಲ್ ವೃತ್ತದ ಸುತ್ತಮುತ್ತ ಶುಚಿಗೊಳಿಸಿ ಗೊಳಿಸಿದರು.

Swach_abiyn_photo_2 Swach_abiyn_photo_3 Swach_abiyn_photo_4 Swach_abiyn_photo_5 Swach_abiyn_photo_6 Swach_abiyn_photo_7 Swach_abiyn_photo_8 Swach_abiyn_photo_9 Swach_abiyn_photo_10 Swach_abiyn_photo_11 Swach_abiyn_photo_12 Swach_abiyn_photo_13 Swach_abiyn_photo_14 Swach_abiyn_photo_15

ಸುಲ್ತಾನ ಬತ್ತೇರಿ ರಸ್ತೆ ಫಲಕಗಳ ನವೀಕರಣ ಹಾಗೂ ಸ್ಠಳಾಂತರ- ಪ್ರವಾಸಿ ತಾಣವಾಗಿರುವ ಸುಲ್ತಾನ ಬತ್ತೇರಿ ಮಾರ್ಗ ಸೂಚಿಸುವ‌ ಎರಡು ಫಲಕಗಳು ಸಂಪೂರ್ಣವಾಗಿ ಬಣ್ಣ ಕಳೆದುಕೊಂಡು ನಿರುಪಯುಕ್ತವಾಗಿದ್ದವು. ಅವೆರಡೂ ಮಾರ್ಗದರ್ಶಿ ಫಲಕಗಳನ್ನು ಅಂದಗೊಳಿಸಿ ಸುಂದರವಾಗಿ ಬರೆಯಲಾಗಿದೆ.

ಮತ್ತೊಂದು ಮಾರ್ಗಸೂಚಿಸುವ ಫಲಕವನ್ನು‌ಅವೈಜ್ಞಾನಿಕವಾಗಿ ಹಾಕಲಾಗಿತ್ತು.ಅದನ್ನು‌ ಅಲ್ಲಿಂದ ತೆರವುಗೊಳಿಸಿ ಸರಿಯಾದ ಜಾಗೆಯಲ್ಲಿ ಅಳವಡಿಸಲಾಗಿದೆ. ಅಲ್ಲದೇ ಲೇಡಿಹಿಲ್ 1ನೇ ಆಡ್ಡ ರಸ್ತೆಯಲ್ಲಿರುವ ರಸ್ತೆ ಫಲಕವನ್ನು ನವೀಕರಿಸಲಾಗಿದೆ. ಕೊಟ್ಟಾರದಿಂದ ಲೇಡಿಹಿಲ್ ಬರುವರಸ್ತೆಯ ಕೊನೆಗೆ ಶಿಷ್ಠಾಚಾರಕ್ಕೆಂಬಂತೆ 3 ಬೋರ್ಡುಗಳನ್ನು ಒಂದರ ಮೇಲೊಂದರಂತೆ ಅಳವಡಿಸಲಾಗಿತ್ತು. ಅದನ್ನೂ ತೆಗೆದು ‌ಉಪಯುಕ್ತ ಸ್ಥಳದಲ್ಲಿ ಹಾಕಲಾಗಿದೆ.

ರಸ್ತೆ ಬದಿಯ ರೇಲಿಂಗ್ ಸೌಂದರ್ಯೀಕರಣ- ಲೇಡಿಹಿಲ್ ವೃತ್ತದ ಪುಟ್ ಪಾಥ್ ಬಳಿಯಿರುವ ರೇಲಿಂಗನ್ನು ಶುಚಿಗೊಳಿಸಿ ಹಳದಿ ಕಪ್ಪು ಬಣ್ಣ ಬಳಿದು ಸುಂದರಗೊಳಿ ಸಲಾಗಿದೆ. ಅಲ್ಲದೇ ಸುತ್ತಮುತ್ತ‌ ಅಪಾರವಾಗಿ ಬೆಳೆದಿದ್ದ ಹುಲ್ಲುಕಸವನ್ನು ಯಂತ್ರದ ಮೂಲಕ ತೆಗೆದು ಸ್ವಚ್ಛ ಗೊಳಿಸಲಾಗಿದೆ.

Swach_abiyn_photo_16 Swach_abiyn_photo_17 Swach_abiyn_photo_18 Swach_abiyn_photo_19 Swach_abiyn_photo_20 Swach_abiyn_photo_21 Swach_abiyn_photo_22 Swach_abiyn_photo_23 Swach_abiyn_photo_24 Swach_abiyn_photo_25

ಸೌಂದರ್ಯ ಹಾಗೂ ಜಾಗೃತಿ :ಕಳೆದ ವಾರದಂತೆ ‌ಇಂದೂ ರಸ್ತೆ ಮತ್ತು ಪುಟ್ ಪಾಥ್ ವಿಭಾಜಕವನ್ನು ಅಂದ ಗೊಳಿಸಿತದ ನಂತರ ವಿಶೇಷವಾಗಿ ಸ್ವಚ್ಛಭಾರತ ಹಾಗೂ ಸ್ವಚ್ಛತೆಯ ಸಂದೇಶಗಳುಳ್ಳ ಅತ್ತ್ಯುತ್ತಮ ಗ್ರಾಫಿಕ್ಸ್ ಹೊಂದಿರುವ‌ ಇಪ್ಪತ್ತು ಪೋಸ್ಟರ್‌ಗಳನ್ನು ಅಳವಡಿಸಿ ಸುಂದರಗೊಳಿಸಲಾಗಿದೆ. ಅಲ್ಲದೇ ರಾಮಕೃಷ್ಣ ಮಿಷನ್ ಬಾಲಕಾಶ್ರಮದ ವಿದ್ಯಾರ್ಥಿಗಳು ಗಾಂಧಿನಗರ ಚಿಲಿಂಬಿ ಲೇಡಿಹಿಲ್ ಪರಿಸರದಲ್ಲಿರುವ ಮನೆಗಳಿಗೆ ತೆರಳಿ ಸ್ವಚ್ಛತಾ ಜಾಗೃತಿಕರಪತ್ರ ನೀಡಿದರು.

ನಾಳೆಯೂ ಅಭಿಯಾನ -ಪ್ರತಿನಿತ್ಯ ನೂರಾರುಜನ ಸಂಚರಿಸುವ ಲೇಡಿಹಿಲ್ ವೃತ್ತದಲ್ಲಿರುವ ಬಸ್ ತಂಗುದಾಣವನ್ನು ಸಂಪರ್ಕಿಸುವ ಪುಟ್‌ಪಾಥ್‌ ಕಿತ್ತುಹೋಗಿದೆ. ಇಂಟರ್‌ಲಾಕ್ ಬಳಸಿ ಅದನ್ನು ಸರಿಪಡಿಸುವ ಕಾರ್ಯ ನಾಳೆಯಿಂದ ನಡೆಯಲಿದೆ.  ಮಂಗಳೂರಿನ ನಾಗರಿಕರು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಿದ್ದು ಈ ಬಾರಿಯ ವಿಶೇಷವಾಗಿತ್ತು. ಮಂಗಳೂರು ವಿಶ್ವವಿದ್ಯಾನಿಲಯದ‌ ಎನ್‌ಎಸ್‌ಎಸ್ ಸಂಯೋಜಕಿ ಪ್ರೋ. ವಿನಿತಾರೈ, ಪ್ರೊ. ಶೇಷಪ್ಪ‌ಅಮೀನ್, ಆಯುರ್ವೇದತಜ್ಞೆಡಾ. ಮೀರಾ, ಶ್ರಿ ಸುರೇಶ್ ಶೆಟ್ಟಿ. ಆಶ್ರಮದ ಭಕ್ತರಾದ ಶ್ರಿ ವಿಠಲದಾಸ್ ಪ್ರಭು, ಸ್ವಚ್ಛ ಮಂಗಳೂರುಸಂಚಾಲಕ ಶ್ರೀದಿಲ್‌ರಾಜ್ ಆಳ್ವ ಮತ್ತಿತರು‌ಅಭಿಯಾನದಲ್ಲಿತಮ್ಮನ್ನುತಾವು ತೊಡಗಿಸಿಕೊಂಡರು. ಎಂಆರ್‌ಪಿಲ್ ಈ ಅಭಿಯಾನದ ಪ್ರಾಯೋಜಕತ್ವವನ್ನು ವಹಿಸಿಕೊಂಡು ಪ್ರೋತ್ಸಾಹಿಸುತ್ತಿದೆ.

16ನೇ ವಾರದ ಸ್ವಚ್ಚ ಮಂಗಳೂರು ಅಭಿಯಾನದ ಕೆಲವು ಚಿತ್ರಗಳನ್ನು ಲಗತ್ತಿಸಿದ್ದೇವೆ. ದಯಮಾಡಿ ಈ ಮೇಲ್ಕಂಡ ಸುದ್ದಿಯನ್ನು ಪ್ರಕಟಿಸಿ ಪರೋಕ್ಷವಾಗಿ ನೀವೂ ಈ ಸ್ವಚ್ಚ ಮಂಗಳೂರು ಅಭಿಯಾನದಲ್ಲಿ ಕೈಜೋಡಿಸಿ ಪ್ರೋತ್ಸಾಹಿಸಬೇಕೆಂದು ಕೇಳಿಕೊಳ್ಳುವೆವು.

Write A Comment