ಮಂಗಳೂರು,ಮೇ.13: ನಗರದ ಕಂಕನಾಡಿ ಕಾರ್ಮೆಲ್ ಮಠದ ಸಹಸ್ಥಾಪಕಿ ಪುನಿತೆ ಮೇರಿ ಬೊವಾರ್ಡಿ ಅವರ ಸಂತ ಪದವಿ ಸೇರ್ಪಡೆಯ ಸಿದ್ಧತಾ ಕಾರ್ಯಕ್ರಮಕ್ಕೆ ವೆಲೆನ್ಸಿಯಾ ಚರ್ಚ್ ಧರ್ಮಗುರು ವಂ| ಜೇಮ್ಸ್ ಡಿ’ಸೋಜಾ ಚಾಲನೆ ನೀಡಿದರು. ಸತತ ಎರಡು ವರ್ಷಗಳಿಂದ ಕಂಕನಾಡಿ ಕಾರ್ಮೆಲ್ ಭಗಿನಿ ಮಠದಲ್ಲಿ ವಾಸಿಸುತ್ತಿದ್ದ ಸಹ ಸ್ಥಾಪಕಿ ಪುನಿತೆ ಮೇರಿ ಬೊವಾರ್ಡಿ ಅವರನ್ನು ಪೋಪ್ ಫ್ರಾನ್ಸಿಸ್ ಅವರು ರೋಮ್‌ನ ವ್ಯಾಟಿಕನ್ ನಗರದಲ್ಲಿ ಮೇ 17ರಂದು ಸಂತರೆಂದು ಘೋಷಿಸಲಿದ್ದಾರೆ ಎಂದು ಈ ಸಂಧರ್ಭದಲ್ಲಿ ಧರ್ಮಗುರು ವಂ| ಜೇಮ್ಸ್ ಡಿ’ಸೋಜಾ ಹೇಳಿದರು.
ಹಲವು ಧರ್ಮಗುರುಗಳು ಧರ್ಮ ಭಗಿನಿಯರು ಹಾಗೂ ಸಾವಿರಾರು ಭಕ್ತರು ಈ ಕಾರ್ಯಕ್ರಮದಲ್ಲಿ ಪಾಲ್ಗೊಳಲಿದ್ದಾರೆ.ಇದರ ಪೂರ್ವ ಸಿದ್ಧತೆಯಾಗಿ ಮೇ |4ರಿಂದ 16ರ ವರೆಗೆ ಕಂಕನಾಡಿ ಕಾರ್ಮೆಲ್ ಮಠದ ದೇವಾಲಯದಲ್ಲಿ ಬಲಿಪೂಜೆ ಮತ್ತು ನವೇನಾ ನಡೆಯಲಿದ್ದು ನಂತರ ಸಭಾ ಕಾರ್ಯಕ್ರಮ ಜರಗಲಿದೆ.
ಭಗಿನಿ ಶಾಲಿನಿ, ಫೂರ್ ವಿಂಡ್ಸ್ ಕಮ್ಯುನಿಕೇಶನ್ ಸಂಸ್ಥೆಯ ನಿರ್ದೇಶಕ ಎಲಿಯಾಸ್ ಫೆರ್ನಾಂಡಿಸ್, ಪ್ರಚಾರ ಸಂಚಾಲಕ ಸ್ಟ್ಯಾನ್ಲಿ ಬಂಟ್ವಾಳ ಉಪಸ್ಥಿತರಿದ್ದರು. ಶೆಲ್ವನ್ ಕ್ರಾಸ್ತಾ ಕಾರ್ಯಕ್ರಮ ನಿರೂಪಿಸಿದರು.







