ಕನ್ನಡ ವಾರ್ತೆಗಳು

ರಾಜ್ಯದಂತ ಸಿಇಟಿ ಪರೀಕ್ಷೆ ಅರಂಭ : ದ.ಕ ಜಿಲ್ಲೆಯಲ್ಲಿ 11.696 ವಿದ್ಯಾರ್ಥಿಗಳ ಹೆಸರು ನೊಂದಣೆ.

Pinterest LinkedIn Tumblr

Cet_Exam_Start_1

ಮಂಗಳೂರು, ಮೇ 12: ಕರ್ನಾಟಕ ರಾಜ್ಯ ವೃತ್ತಿಪರ ಶಿಕ್ಷಣದ ಸಾಮಾನ್ಯ ಪ್ರವೇಶ ಪರೀಕ್ಷೆ (ಸಿಇಟಿ) ಮಂಗಳವಾರ ರಾಜ್ಯದ ವಿವಿಧ ಕೇಂದ್ರಗಳಲ್ಲಿ ಪ್ರಾರಂಭಿಸಿಲಾಗಿದೆ. ವಿದ್ಯಾರ್ಥಿಗಳು ತಮ್ಮ ಪರೀಕ್ಷೇ ಪೂರ್ವ ತಯಾರಿಗಾಗಿ ಆಯಾ ಪರೀಕ್ಷಾ ಕೇಂದ್ರಗಳ ಹೊರಗೆ ತಮ್ಮ ಓದಿನಲ್ಲಿ ನಿರತರಾಗಿದ್ದಾರೆ.

ಬಯಾಲಜಿ ಮತ್ತು ಗಣಿತ ಪರೀಕ್ಷೆ ಇಂದು ನಡೆಯಲಿದ್ದು, ಭೌತಶಾಸ್ತ್ರ ಮತ್ತು ರಸಾಯನಶಾಸ್ತ್ರ ಬುಧವಾರ ಮೇ 13 ರಂದು ನಡೆಯಲಿದೆ ಎಂದು ಸೈಂಟ್ ಆಗ್ನೆಸ್ ಪಿಯು ಕಾಲೇಜಿನ ಪ್ರಾಂಶುಪಾಲ ಎಸ್.ಆರ್.ಎಂ ಶಮಿತಾ, ಹೇಳಿದರು.

Cet_Exam_Start_2 Cet_Exam_Start_3 Cet_Exam_Start_4 Cet_Exam_Start_5 Cet_Exam_Start_6 Cet_Exam_Start_7 Cet_Exam_Start_8 Cet_Exam_Start_9

ಇದೇ ಮೊದಲ ಬಾರಿಗೆ ದೊಡ್ಡಬಳ್ಳಾಪುರ, ರಾಮನಗರ, ಚನ್ನಪಟ್ಟಣ, ಬಳ್ಳಾರಿ, ಹೊಸಪೇಟೆ, ಬೆಳಗಾವಿ, ಅಥಣಿ, ಗೋಕಾಕ್, ಬಾಗಲಕೋಟೆ, ಜಮಖಂಡಿ, ಬಿಜಾಪುರ, ಬೀದರ್, ಬಸವ ಕಲ್ಯಾಣ, ಭಾಲ್ಕಿ, ದಾವಣಗೆರೆ, ಚಿತ್ರದುರ್ಗ, ಚಿಕ್ಕಮಗಳೂರು, ಗದಗ, ಹಾವೇರಿ, ಹುಬ್ಬಳ್ಳಿ, ಧಾರವಾಡ, ಗುಲ್ಬರ್ಗ, ಯಾದಗಿರಿ, ಹಾಸನ, ಚಿಕ್ಕಬಳ್ಳಾಪುರ, ಕೋಲಾರ, ಕೆಜಿಎಫ್, ಚಾಮರಾಜನಗರ, ಕೊಳ್ಳೇಗಾಲ, ಮೈಸೂರು, ಮಂಡ್ಯ, ಕೃಷ್ಣರಾಜಪೇಟೆ, ಉತ್ತರ ಕನ್ನಡ, ಶಿರಸಿ, ಕುಮಟಾ, ಧಾಂಡೇಲಿ, ಕೊಪ್ಪಳ, ರಾಯಚೂರು, ದಕ್ಷಿಣ ಕನ್ನಡ, ಪುತ್ತೂರು, ಮೂಡಲಗಿ, ಉಜಿರೆ, ಕುಂದಾಪುರ, ಕಾರ್ಕಳ, ಶಿವಮೊಗ್ಗ , ಭದ್ರಾವತಿ, ಸಾಗರ, ತುಮಕೂರು, ತಿಪಟೂರು ಮತ್ತು ಮಡಿಕೇರಿಯಲ್ಲಿ ಸಿಇಟಿ ನಡೆಯಿತು.

ಕಳೆದ ವರ್ಷ ಅನೇಕ ವಿದ್ಯಾರ್ಥಿಗಳು ಜೀವಶಾಸ್ತ್ರ ಪರೀಕ್ಷೆ ಹಾಜರಾಗದ್ದೆ ಪರೀಕ್ಷೆ ಹಾಲ್ ಖಾಲಿ ಖಾಲಿಯಾಗಿತ್ತು. ಕರ್ನಾಟಕ ಪರೀಕ್ಷೆ ಪ್ರಾಧಿಕಾರ ನಡೆಸಿದ ಸಿಇಟಿ ಪ್ರವೇಶ ಪರೀಕ್ಷೆಯ ಈಗಾಗಲೇ ದಾಖಲಾತಿಯಾಗಿದ್ದು. ಈ ವರ್ಷ ಸಿಇಟಿ ಪ್ರವೇಶ ಪರೀಕ್ಷೆಯನ್ನು 22 ಕೇಂದ್ರಗಳಲ್ಲಿ ನಡೆಸಲಾಗುತ್ತದೆ. ದಕ್ಷಿಣ ಕನ್ನಡ ಜಿಲ್ಲೆಯ 11.696 ಅಭ್ಯರ್ಥಿಗಳು,ಮಂಗಳೂರಿನಲ್ಲಿ 11 , ಪುತ್ತೂರು 3 , ಮೂಡಬಿದ್ರೆ,ಉಜಿರೆ 2  ಒಟ್ಟು 4.080 ವಿಧ್ಯಾರ್ಥಿಗಳು ಸಿಇಟಿ ಪರೀಕ್ಷೆಗೆ ಹೆಸರು ನೊಂದಾಯಿಸಿ ದ್ದಾರೆ.

Write A Comment