ಕನ್ನಡ ವಾರ್ತೆಗಳು

ಬೆಂಕಿ ದುರಂತ: ಅಗ್ನಿ ಶಾಮಕ ದಳದ ಸುಧೀರ್ ಜಿ. ಅಮೀನ್ ಸಹಿತ ಇಬ್ಬರು ಅಧಿಕಾರಿಗಳಿಗೆ ಗಂಭೀರ ಗಾಯ

Pinterest LinkedIn Tumblr

Sudhir_Gopal_fire

ವರದಿ : ದಿನೇಶ್ ಕುಲಾಲ್ ಮತ್ತು ಈಶ್ವರ ಎಂ. ಐಲ್

ಮುಂಬಯಿ : ಕಲ್ಬಾದೇವಿಯಲ್ಲಿ ದುರಸ್ತಿ ಹಂತದಲ್ಲಿದ್ದ ನಾಲ್ಕು ಮಹಡಿಯ ಹಳೆಯ ಕಟ್ಟಡಕ್ಕೆ ಮೆ. 9 ರಂದು ಬೆಂಕಿ ತಗಲಿ ಬೆಂಕಿಯನ್ನು ಹತೋಟಿಗೆ ತರಲು ಮತ್ತು ಕಟ್ಟಡದಲ್ಲಿದ್ದವರನ್ನು ರಕ್ಷಿಸಲು ಅಗ್ನಿಶಾಮಕ ದಳದ ನೇತೃತ್ವವನ್ನು ಕನ್ನಡಿಗ, ಅಗ್ನಿ ಶಾಮಕ ದಳದ ಡೆಪ್ಯೂಟಿ ಚೀಪ್ ಫಯರ್ ಅಧಿಕಾರಿ ಸುಧೀರ್ ಜಿ. ಅಮೀನ್ ವಹಿಸಿದ್ದರು.

ಕಟ್ಟಡದ ತಳಮಹಡಿಯಲ್ಲಿ ರಕ್ಷಣಾ ಕಾರ್ಯದಲ್ಲಿ ನಿರತರಾಗಿದ್ದಾಗ ಹೊತ್ತಿ ಹುರಿದ ಕಟ್ಟಡದ ಒಂದು ಬಾಗ ಕುಸಿದು ಬಿದ್ದು ಅವಶೇಷದಡಿ ಸಿಲುಕಿದ ಇಬ್ಬರು ರಕ್ಷಣಾ ಅಧಿಕಾರಿಗಳನ್ನು ಒಂದು ತಾಸಿನ ಬಳಿಕ ಹೊರತೆಗೆಯಲಾಗಿತ್ತು. ಇವರಿಬ್ಬರ ಪೈಕಿ ತುಳು-ಕನ್ನಡಿಗ ಸುಧೀರ್ ಅಮೀನ್ ಒಬ್ಬರು.

ಶೇಕಡಾ 90ರಷ್ಟು ಸುಟ್ಟ ಗಾಯಗೊಂಡಿರುವ ಇವರನ್ನು ಐರೋಲಿಯ ನ್ಯಾಶನಲ್ ಬರ್ನ್ ಆಸ್ಪತ್ರೆಗೆ ಸೇರಿಸಲಾಯಿತು. ಅಮೀನ್ ಅವರ ಪರಿಸ್ಥಿತಿ ಗಂಬೀರವಾಗಿದ್ದು ಮಹಾರಾಷ್ಟ್ರ ಮುಖ್ಯಮಂತ್ರಿಯವರ ಪ್ರತಿನಿಧಿ ಆಸ್ಪ್ರತ್ರೆಗೆ ಬೇಟಿ ನೀಡಿ ಅಮೀನ್ ಅವರಿಗೆ ಅಗತ್ಯ ಚಿಕಿತ್ಸೆನೀಡಲು ಅಧಿಕಾರಿಗಳಿಗೆ ಸೂಚಿಸಿದ್ದಾರೆ.

ಕಾರ್ಕಳದ ನಿಟ್ಟೆ ದಡ್ಡೋಡಿಯವರಾದ ಸುಧೀರ್ ಅಮೀನ್ ಮೇ13 ರಂದು ಪರಿವಾರ ಸಮೇತ ಊರಿಗೆ ಪ್ರಯಾಣಿಸುವವರಿದ್ದರು. 26/11 ರ ಮುಂಬಯಿ ದಾಳಿಯಲ್ಲಿ ಕೊಲಬಾದ ತಾಜ್ ಹೋಟೇಲಿನಲ್ಲಿ ತನ್ನ ಸಾಹಸದಿಂದ ನೂರಾರು ಜನರನ್ನು ರಕ್ಷಿಸಿ ಹಲವು ಪದಕ, ಪುರಸ್ಕಾರಗಳನ್ನು ಗಳಿಸಿದರಲ್ಲದೆ ಅಂತರಾಷ್ಟ್ರೀಯ ಮಟ್ಟದಲ್ಲೂ ಪರಿಚಯಿಸಲ್ಪಟ್ಟಿದ್ದಾರೆ.

ಈಗಾಗಲೇ ಅವಿಭಜಿತ ಜಿಲ್ಲೆ ಹಾಗೂ ಮುಂಬಯಿಯಲ್ಲಿ ಅಮೀನ್ ರು ಚೇತರಿಸುವ ಬಗೆ ಪ್ರಾರ್ಥನೆ, ಪೂಜೆಗಳು ನಡೆಯುತ್ತಿದ್ದು ತನ್ನ ಜೀವನದ ಹಂಗು ತೊರೆದು ಗಕ್ಷಣಾ ಕಾರ್ಯದಲ್ಲಿ ಮುನ್ನುಗ್ಗುತ್ತಿರುವ ಸುಧೀರ್ ಜಿ. ಅಮೀನ್ ರು ಶ್ರೀಘ್ರ ಗುಣ ಮುಖಗೊಳ್ಳಲಿ ಎಂಬುದೇ ನಮ್ಮೆಲ್ಲರ ಪ್ರಾರ್ಥನೆ.

Write A Comment