ಮಂಗಳೂರು, ಮೇ.8: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಮೇ 29ರಂದು ನಡೆಯಲಿರುವ ಗ್ರಾಮ ಪಂಚಾಯತ್ ಚುನಾವಣೆಗೆ ಜಿಲ್ಲಾಡಳಿತ ಸಂಪೂರ್ಣ ಸಜ್ಜಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹೀಂ ತಿಳಿಸಿದ್ದಾರೆ.ಗುರುವಾರ ಪತ್ರಿಕಾಗೋಷ್ಠಿಯನ್ನು ಉದ್ದೇಶಿಸಿ ಮಾತನಾಡಿದ ಅವರು, ಜಿಲ್ಲೆಯ 5 ತಾಲೂ ಕುಗಳಲ್ಲಿ 232 ಗ್ರಾಮ ಪಂಚಾಯತ್‌ಗಳಿದ್ದು, ಆ ಪೈಕಿ ಕೋಟೆಕಾರು ಮತ್ತು ವಿಟ್ಲ ಗ್ರಾಪಂನ್ನು ಮೇಲ್ದರ್ಜೆಗೇರಿಸಲಾಗಿದ್ದರೆ, ಪುದು, ವೇಣೂರು ಹಾಗೂ ಆರಂಬೋಡಿ ಗ್ರಾಪಂಗಳ ಅವಧಿ ಮುಗಿಯದ ಕಾರಣ ಚುನಾವಣೆ ನಡೆಸಲಾಗುತ್ತಿಲ್ಲ. ಉಳಿದಂತೆ 227 ಗ್ರಾಮ ಪಂಚಾಯತ್‌ಗಳ 1,108 ವಾರ್ಡ್‌ಗಳ 3,399 ಸ್ಥಾನಗಳಿಗೆ ಚುನಾವಣೆ ನಡೆಸಲಾಗುವುದು ಎಂದರು.
ವರ್ಗವಾರು ಮೀಸಲಾತಿ: ಗ್ರಾ.ಪಂ.ಗಳ ಸದಸ್ಯ ಸ್ಥಾನಗಳ ವರ್ಗವಾರು ಮೀಸಲಾತಿ ಪಟ್ಟಿಯನ್ನೂ ತಯಾರಿಸಲಾಗಿದೆ. 3,399 ಸದಸ್ಯ ಸ್ಥಾನಗಳ ಪೈಕಿ 1,760 ಮಹಿಳೆಯರಿಗೆ ಮತ್ತು 1,639 ಸಾಮಾನ್ಯ (ಸಾಮಾನ್ಯದಲ್ಲೂ ಮಹಿಳೆಯರು ಸ್ಪರ್ಧಿಸಲು ಅವಕಾಶವಿದೆ)ರಿಗೆ ಮೀಸಲಿಡಲಾಗಿದೆ. ಆ ಪೈಕಿ ಅನುಸೂಚಿತ ಜಾತಿಗೆ (ಎಸ್ಸಿ)ನಿಗದಿಪಡಿಸಲಾದ 317 ಸ್ಥಾನಗಳಲ್ಲಿ 243 ಮಹಿಳೆಗೆ ಮೀಸಲಿಡಲಾಗಿದ್ದರೆ, ಉಳಿದ 74ಕ್ಕೆ ಅನುಸೂಚಿತ ಜಾತಿಯ ಮಹಿಳೆ ಮತ್ತು ಪುರುಷರು ಸ್ಪರ್ಧಿಸಬಹುದು. ಅನುಸೂಚಿತ ಪಂಗಡಕ್ಕೆ (ಎಸ್ಟಿ) ನಿಗದಿಪಡಿಸಲಾದ 278 ಸ್ಥಾನಗಳಲ್ಲಿ 236 ಮಹಿಳೆಗೆ ಮೀಸಲಿಡಲಾಗಿದ್ದರೆ, ಉಳಿದ 42 ಸ್ಥಾನಗಳಿಗೆ ಅನುಸೂಚಿತ ಪಂಗಡದ ಮಹಿಳೆ ಮತ್ತು ಪುರುಷರು ಸ್ಪರ್ಧಿಸಬಹುದು.
ಹಿಂದುಳಿದ ವರ್ಗ‘ಅ’ಕ್ಕೆ ನಿಗದಿಪಡಿಸಲಾದ 783 ಸ್ಥಾನಗಳ ಪೈಕಿ 455 ಮಹಿಳೆಗೆ ಮೀಸಲಿ ಡಲಾಗಿದ್ದರೆ ಉಳಿದ 328 ಸ್ಥಾನಗಳಿಗೆ ‘ಅ’ ವರ್ಗದ ಮಹಿಳೆ ಮತ್ತು ಪುರುಷರು ಸ್ಪರ್ಧಿಸಬಹುದಾಗಿದೆ. ಹಿಂದುಳಿದ ವರ್ಗ ‘ಬ’ಕ್ಕೆ ನಿಗದಿಪಡಿಸಲಾದ 197 ಸ್ಥಾನಗಳಲ್ಲಿ 96 ಮಹಿಳೆಗೆ ಮೀಸಲಾಗಿದ್ದರೆ, ಉಳಿದ 101 ಸ್ಥಾನಗಳಿಗೆ ಮಹಿಳೆ ಮತ್ತು ಪುರುಷರು ಸ್ಪರ್ಧಿಸಬಹುದಾಗಿದೆ. ಸಾಮಾನ್ಯ ವರ್ಗಕ್ಕೆ ನಿಗದಿಪಡಿಸಲಾದ 1,824 ಸ್ಥಾನಗಳಲ್ಲಿ 728 ಮಹಿಳೆಗೆ ಮೀಸಲಿಡಲಾಗಿದ್ದರೆ, ಉಳಿದ 1,096 ಸ್ಥಾನಗಳಿಗೆ ಮಹಿಳೆ ಮತ್ತು ಪುರುಷ ಸ್ಪರ್ಧಿಸಬಹುದಾಗಿದೆ. ಇದರೊಂದಿಗೆ ಮಹಿಳೆಯರಿಗೆ ಶೇ.50ಕ್ಕೆ ಕಡಿಮೆಯಿರದಂತೆ ಸ್ಥಾನ ಮೀಸಲಿಟ್ಟಂತಾಗಿದೆ.
ಮತದಾರರು: ಮಂಗಳೂರು ತಾಲೂಕಿನ 55 ಗ್ರಾಮ ಪಂಚಾಯತ್‌ಗಳಲ್ಲ್ಲಿ 1,51,295 ಪುರುಷರು ಮತ್ತು 1,61,761 ಮಹಿಳೆಯರು ಸಹಿತ 3,13,056 ಮತದಾರರಿದ್ದಾರೆ. ಬಂಟ್ವಾಳ ತಾಲೂಕಿನ 57 ಗ್ರಾಮ ಪಂಚಾಯತ್‌ನಲ್ಲಿ 1,36,189 ಪುರುಷರು ಮತ್ತು 1,34,598 ಮಹಿಳೆಯರ ಸಹಿತ 2,70,786 ಮತದಾರರಿದ್ದಾರೆ. ಬೆಳ್ತಂಗಡಿ ತಾಲೂಕಿನ 46 ಗ್ರಾಪಂಗಳಲ್ಲಿ 99,298 ಪುರುಷರು ಮತ್ತು 96,597 ಮಹಿಳೆಯರ ಸಹಿತ 1,95,896 ಮತದಾರರಿದ್ದಾರೆ. ಪುತ್ತೂರು ತಾಲೂಕಿನ 41 ಗ್ರಾಮ ಪಂಚಾಯತ್‌ಗಳಲ್ಲಿ 89,454 ಪುರುಷರು ಮತ್ತು 87,641 ಮಹಿಳೆಯರ ಸಹಿತ 1,77,095 ಮತದಾರರಿದ್ದಾರೆ. ಸುಳ್ಯ ತಾಲೂಕಿನ 28 ಗ್ರಾಮ ಪಂಚಾಯತ್‌ಗಳಲ್ಲಿ 48,361 ಪುರುಷರು ಮತ್ತು 45,547 ಮಹಿಳೆಯರ ಸಹಿತ 95,908 ಮತದಾರರಿದ್ದಾರೆ. ಜಿಲ್ಲೆಯಲ್ಲಿ ಒಟ್ಟು 5,24,597 ಪುರುಷರು ಮತ್ತು 5,28,144 ಮಹಿಳೆಯರ ಸಹಿತ 10,52,741 ಮತದಾರರಿದ್ದಾರೆ.
ಸೇವಾ ಮತದಾರರು: ವಿವಿಧ ಗ್ರಾಮಗಳ ಸಾಮಾನ್ಯ ನಿವಾಸಿಯಾಗಿದ್ದುಕೊಂಡು ದೇಶದ ಸೇನೆಯಲ್ಲಿ ವಿವಿಧ ಹುದ್ದೆಗಳಲ್ಲಿರುವ 682 ಪುರುಷರು ಮತ್ತು 177 ಮಹಿಳೆಯರ ಸಹಿತ 859 ಮಂದಿಯನ್ನು ಸೇವಾ ಮತದಾರರು ಎಂದು ಪರಿಗಣಿಸಲಾಗಿದೆ. ಆ ಪೈಕಿ ಮಂಗಳೂರು ತಾಲೂಕಿನಲ್ಲಿ 225 ಪುರುಷರು ಮತ್ತು 55 ಮಹಿಳೆಯರ ಸಹಿತ 280, ಬಂಟ್ವಾಳದಲ್ಲಿ 67 ಪುರುಷರು ಮತ್ತು 27 ಮಹಿಳೆಯರ ಸಹಿತ 94, ಬೆಳ್ತಂಗಡಿ ತಾಲೂಕಿನಲ್ಲಿ 102 ಪುರುಷರು ಮತ್ತು 39 ಮಹಿಳೆಯರ ಸಹಿತ 141, ಪುತ್ತೂರು ತಾಲೂಕಿನಲ್ಲಿ 138 ಪುರುಷರುಮತ್ತು 43 ಮಹಿಳೆಯರ ಸಹಿತ 181, ಸುಳ್ಯದಲ್ಲಿ 150 ಪುರುಷರು ಮತ್ತು 13 ಮಹಿಳೆಯರ ಸಹಿತ 163 ಮತದಾರರಿದ್ದಾರೆ.
ಮತಗಟ್ಟೆ: ಮಂಗಳೂರಿನಲ್ಲಿ 391, ಬಂಟ್ವಾಳದಲ್ಲಿ 341, ಬೆಳ್ತಂಗಡಿಯಲ್ಲಿ 234, ಪುತ್ತೂರಿನಲ್ಲಿ 221, ಸುಳ್ಯದಲ್ಲಿ 122 ಮತಗಟ್ಟೆಗಳು ಸೇರಿದಂತೆ ಜಿಲ್ಲೆಯಲ್ಲಿ 1,309 ಮತಗಟ್ಟೆಗಳಿವೆ. ಆ ಪೈಕಿ ಮಂಗಳೂರಿನಲ್ಲಿ 49 ಸೂಕ್ಷ್ಮ ಮತ್ತು 34 ಅತಿ ಸೂಕ್ಷ್ಮ, ಬಂಟ್ವಾಳದಲ್ಲಿ 63 ಸೂಕ್ಷ್ಮ ಮತ್ತು 57 ಅತಿಸೂಕ್ಷ್ಮ, ಬೆಳ್ತಂಗಡಿಯಲ್ಲಿ 51 ಸೂಕ್ಷ್ಮ ಮತ್ತು 61 ಅತಿಸೂಕ್ಷ್ಮ, ಪುತ್ತೂರಿನಲ್ಲಿ 15 ಸೂಕ್ಷ್ಮ ಮತ್ತು 42 ಅತಿ ಸೂಕ್ಷ್ಮ, ಸುಳ್ಯದಲ್ಲಿ 48 ಸೂಕ್ಷ್ಮ ಮತ್ತು 10 ಅತಿಸೂಕ್ಷ್ಮ ಮತಟ್ಟೆಗಳಿವೆ.
ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿ ಚುನಾವಣಾ ಪ್ರಕ್ರಿಯೆ ನಡೆಸಲು 229 ಚುನಾವಣಾಧಿಕಾರಿಗಳು ಹಾಗೂ 249 ಸಹಾಯಕ ಚುನಾವಣಾಧಿಕಾರಿಗಳ ಸಹಿತ 478 ಅಧಿಕಾರಿಗಳನ್ನು ನೇಮಿಸಲಾಗಿದೆ. ಆ ಪೈಕಿ ಮಂಗಳೂರಿನಲ್ಲಿ 57 ಚುನಾವಣಾಧಿಕಾರಿಗಳು ಮತ್ತು 67 ಸಹಾಯಕ ಚುನಾವಣಾಧಿಕಾರಿಗಳು, ಬಂಟ್ವಾಳದಲ್ಲಿ 57 ಚುನಾವಣಾಧಿಕಾರಿಗಳು ಮತ್ತು 63 ಸಹಾಯಕ ಚುನಾವಣಾಧಿಕಾರಿಗಳು, ಬೆಳ್ತಂಗಡಿಯಲ್ಲಿ 46 ಚುನಾವಣಾಧಿಕಾರಿಗಳು ಮತ್ತು 50 ಸಹಾಯಕ ಚುನಾವಣಾಧಿಕಾರಿಗಳು, ಪುತ್ತೂರಿನಲ್ಲಿ 41 ಚುನಾವಣಾಧಿಕಾರಿಗಳು ಮತ್ತು 41 ಸಹಾಯಕ ಚುನಾವಣಾಧಿಕಾರಿಗಳು, ಸುಳ್ಯದಲ್ಲಿ 28 ಚುನಾವಣಾಧಿಕಾರಿಗಳು ಮತ್ತು 28 ಸಹಾಯಕ ಚುನಾವಣಾಧಿಕಾರಿಗಳಿದ್ದಾರೆ.
ನಾಮಪತ್ರ ಸಲ್ಲಿಕೆ/ಠೇವಣಿ: ಅಭ್ಯರ್ಥಿ ಗಳು ಮೇ 11ರಿಂದ 18ರೊಳಗೆ ಗ್ರಾಮ ಪಂಚಾಯತ್‌ಗಳಲ್ಲಿ ಚುನಾವಣಾಧಿಕಾರಿ/ಸಹಾಯಕ ಚುನಾವಣಾಧಿಕಾರಿಯಿಂದ ನಾಮಪತ್ರದ ನಮೂನೆ ಪಡೆದು ಭರ್ತಿ ಮಾಡಿ ಸಲ್ಲಿಸಬೇಕು. ಪ್ರತಿಯೊಂದು ನಾಮಪತ್ರಕ್ಕೆ ಮತದಾರರ ಪಟ್ಟಿಯ ಭಾಗ ಸಂಖ್ಯೆ ಮತ್ತು ಕ್ರಮ ಸಂಖ್ಯೆಯನ್ನು ನಮೂದಿಸಿ ಅಭ್ಯರ್ಥಿಗೆ ಸೂಚಕರಾಗಿ ಪ್ರಸ್ತಾವಿಸಿರುವ ಬಗ್ಗ್ಗೆ ಸಹಿ ಹಾಕಿ ದೃಢೀಕರಿಸಬೇಕು. ಚುನಾವಣೆಯು ಪಕ್ಷಾತೀತವಾಗಿ ನಡೆಯಲಿರುವುದರಿಂದ ಅಭ್ಯ ರ್ಥಿಯು ಮುಕ್ತ ಚಿಹ್ನೆಗಳ ವಿವರ ಪಡೆದು ನಾಮ ಪತ್ರದಲ್ಲಿ 3 ಮುಖ್ಯ ಚಿಹ್ನೆಗಳನ್ನು ಕೋರಬೇಕು. ಒಂದು ವೇಳೆ ಅಭ್ಯರ್ಥಿ ಚಿಹ್ನೆ ಕೋರದಿದ್ದರೆ.
ಚುನಾವಣಾಧಿಕಾರಿಯು ಚಿಹ್ನೆ ಹಂಚಿಕೆ ಮಾಡುವ ಸಂದರ್ಭ ಚಿಹ್ನೆಯನ್ನು ನೀಡಲಿದ್ದಾರೆ. ಅಭ್ಯ ರ್ಥಿಯು ರೂ.200 ನಗದು (ಅನುಸೂಚಿತ ಜಾತಿ/ ಪಂಗಡ/ಮಹಿಳೆಯರು ರೂ.100) ಠೇವಣಿ ಇಡಬೇಕು. ಮೀಸಲಾತಿ ಸ್ಥಾನಗಳಿಗೆ ಸ್ಪರ್ಧಿಸುವ ಅಭ್ಯರ್ಥಿಗಳು ತಮ್ಮ ಜಾತಿ ಪ್ರಮಾಣ ಪತ್ರವನ್ನು ಲಗತ್ತಿಸಬೇಕು. ಮಹಿಳೆಯರು ತಾವು ನಾಮಪತ್ರ ಸಲ್ಲಿಸುವ ಸಂದರ್ಭ ‘ಮಹಿಳೆ’ ಎಂದು ದೃಢೀಕರಿಸಬೇಕು.
ಮೇ 10ರಿಂದ ಜೂ.7ರವರೆಗೆ ನೀತಿ ಸಂಹಿತೆ ಜಾರಿ:
ಮೇ 10ರಿಂದ ಜೂ.7ರವರೆಗೆ ನೀತಿ ಸಂಹಿತೆ ಜಾರಿಯಲ್ಲಿರುತ್ತದೆ. ತಾ.ಪಂ.ಮತ್ತು ಜಿ.ಪಂ. ಸಾಮಾನ್ಯ ಸಭೆಯನ್ನು ನಡೆಸಬಹುದಾ ದರೂ ಕೂಡ ಯಾವುದೇ ಹೊಸ ಯೋಜನೆಗಳ ಅನುಷ್ಠಾನದ ಬಗ್ಗೆ ತೀರ್ಮಾನ ತೆಗೆದುಕೊಳ್ಳುವಂತಿಲ್ಲ. ಈಗಾಗಲೇ ಆರಂಭಿಸಲಾದ ಯೋಜನೆಗಳ ಮುಂದುವರಿಕೆಗೆ ಅಡ್ಡಿಯಿಲ್ಲ. ಬರಪೀಡಿತ ಪ್ರದೇಶದಲ್ಲಿ ಕುಡಿಯುವ ನೀರು ಮತ್ತು ಇದಕ್ಕೆ ಸಂಬಂಧಿಸಿದ ಕಾಮಗಾರಿಗಳನ್ನು ಅನುಷ್ಠಾನಗೊಳಿಸಲು ಅಡ್ಡಿಯಿಲ್ಲ. ಆದರೆ ಈ ಬಗ್ಗೆ ಸಾರ್ವಜನಿಕ ಸಮಾರಂಭ ಮತ್ತು ರಾಜಕೀಯ ನಾಯಕರ ಉಪಸ್ಥಿತಿಯಲ್ಲಿ ಸಭೆ ನಡೆಸುವುದನ್ನು ನಿಷೇಧಿಸಲಾಗಿದೆ.
ಜಿ.ಪಂ/ತಾ.ಪಂ. ಅಧ್ಯಕ್ಷ/ಉಪಾಧ್ಯಕ್ಷರಿಗೆ ಮತ್ತು ಎಪಿಎಂಸಿ ಅಧ್ಯಕ್ಷರಿಗೆ ನೀಡಲಾದ ಸರಕಾರಿ ವಾಹನಗಳನ್ನು ಹಿಂದಕ್ಕೆ ಪಡೆಯಲಾಗುತ್ತದೆ. ರಾಜಕೀಯ ಪಕ್ಷಗಳ ಚಿಹ್ನೆ ಮತ್ತು ರಾಜಕೀಯ ಮುಖಂಡರ ಭಾವಚಿತ್ರವನ್ನು ಉಪಯೋಗಿಸಿ ಪ್ರಚಾರ ಮಾಡುವಂತಿಲ್ಲ. ಒಂದು ವೇಳೆ ಹಾಗೆ ಪ್ರಚಾರ ಮಾಡಿದರೆ ಮುದ್ರಿಸಲಾದ ಕರಪತ್ರ, ಪೋಸ್ಟರ್, ಪ್ರಚಾರ ಸಾಮಗ್ರಿಗಳನ್ನು ಮುಟ್ಟುಗೋಲು ಹಾಕಲಾಗುತ್ತದೆ.
ಸಾಂಸ್ಕೃತಿಕ ಮತ್ತು ಧಾರ್ಮಿಕ ಸಭೆಗಳನ್ನು ನಡೆಸಬಹುದಾಗಿದೆ. ಆದರೆ ರಾಜಕೀಯ ವ್ಯಕ್ತಿಗಳು ಪಾಲ್ಗೊಂಡು ನೀತಿ ಸಂಹಿತೆಗೆ ಬಾಧಕವಾಗುವ ರೀತಿಯಲ್ಲಿ ಮತದಾರರ ಮೇಲೆ ಪರಿಣಾಮ ಬೀರುವ ಘೋಷಣೆ, ಹೇಳಿಕೆ, ಭರವಸೆ ನೀಡುವಂತಿಲ್ಲ. ಶಾಸಕರು/ಸಂಸದರು ಚುನಾವಣಾ ಸಂಬಂಧ ಸಭೆಗಳನ್ನು ನಡೆಸಲು ಸರಕಾರಿ ವಾಹನ ಬಳಸಿದರೆ ಅದನ್ನು ವಶಪ ಡಿಸಿಕೊಳ್ಳಲಾಗುತ್ತದೆ. ಜಿಲ್ಲಾ/ತಾಲೂಕು ಮಟ್ಟದಲ್ಲಿ ಪಡಿತರ ಚೀಟಿ ವಿತರಣೆ, ಗ್ರಾಮೀಣ ಭಾಗಗಳಿಗೆ ಅಭಿವೃದ್ಧಿ ಕಾಮಗಾರಿಗಳ ಅನುಷ್ಠಾನದಂತಹ ವಿಷಯದ ಮೇಲೆ ತೀರ್ಮಾನ ತೆಗೆದುಕೊಳ್ಳುವ ಸಭೆಗಳನ್ನು ಶಾಸಕರು/ಸಚಿವರು/ಅಧಿಕಾರಿಗಳು ನಡೆಸುವಂತಿಲ್ಲ. ಜನಸ್ಪಂದನ ಸಭೆ ನಡೆಸುವಂತಿಲ್ಲ ಎಂದು ಜಿಲ್ಲಾಧಿಕಾರಿ ತಿಳಿಸಿದರು.
ಪತ್ರಿಕಾಗೋಷ್ಠಿಯಲ್ಲಿ ಅಪರ ಜಿಲ್ಲಾಧಿಕಾರಿ ಸದಾಶಿವ ಪ್ರಭು, ಜಿ.ಪಂ.ಸಿಇಒ ಶ್ರೀವಿದ್ಯಾ ಉಪಸ್ಥಿತರಿದ್ದರು.
ಮೇ 29ಕ್ಕೆ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ :
*5,24,597 ಪುರುಷ, 5,28,144 ಮಹಿಳೆಯರ ಸಹಿತ 10,52,741 ಮತದಾರರು / ಒಟ್ಟು 227 ಗ್ರಾಪಂಗೆ ಚುನಾವಣೆ / ಒಟ್ಟು ವಾರ್ಡ್ 1,108, ಒಟ್ಟು ಸ್ಥಾನ 3,399 / ಒಟ್ಟು ಮತಗಟ್ಟೆ 1,309, ಸೂಕ್ಷ್ಮ-ಅತಿಸೂಕ್ಷ್ಮ 440 /ಮೇ 10ರಿಂದ ಜೂ.7ರವರೆಗೆ ನೀತಿ ಸಂಹಿತೆ ಜಾರಿ /ಮೇ 11ರಿಂದ 18ರವರೆಗೆ ನಾಮಪತ್ರ ಸಲ್ಲಿಕೆಗೆ ಅವಕಾಶ /ಮೇ 19ಕ್ಕೆ ನಾಮಪತ್ರ ಪರಿಶೀಲನೆ /ಮೇ 21ಕ್ಕೆ ನಾಮಪತ್ರ ವಾಪಸ್‌ಗೆ ಅವಕಾಶ / ಮೇ 29ಕ್ಕೆ ಬೆಳಗ್ಗೆ 7ರಿಂದ ಸಂಜೆ 5ರವರೆಗೆ ಚುನಾವಣೆ / ಜೂ. 5ಕ್ಕೆ ಫಲಿತಾಂಶ ಪ್ರಕಟ.