ಕನ್ನಡ ವಾರ್ತೆಗಳು

ಪ್ರತಿಷ್ಠಿತ ಇನ್‌ಲ್ಯಾಂಡ್ ಸಂಸ್ಥೆಯ ಡಿಸೈನ್ ಫಾರ್ ಕಂಫರ್ಟ್ ಅಪಾರ್ಟ್‌ಮೆಂಟ್ ‘ಇನ್‌ಲ್ಯಾಂಡ್ ಎಲಾನ್’ ನಾಳೆ ಉದ್ಘಾಟನೆ

Pinterest LinkedIn Tumblr

Inland_elan_Pics_1

ಮಂಗಳೂರು, ಮೇ.8: ಪ್ರತಿಷ್ಠಿತ ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ ಪ್ರೈ. ಲಿ. ಸಂಸ್ಥೆಯು ನಗರದ ಮಠದಕಣಿ ರಸ್ತೆಯ ಪಕ್ಕದಲ್ಲಿ ನಿರ್ಮಿಸಿರುವ ಡಿಸೈನ್ ಫಾರ್ ಕಂಫರ್ಟ್ ಅಪಾರ್ಟ್‌ಮೆಂಟ್ ‘ಇನ್‌ಲ್ಯಾಂಡ್ ಎಲಾನ್’ ನೂತನ ವಸತಿ ಸಮುಚ್ಚಯ ಮೇ 9ರಂದು ಉದ್ಘಾಟನೆಗೊಳ್ಳಲಿದೆ.

ಇದರಲ್ಲಿರುವ ಎಲ್ಲಾ 25 ಅಪಾರ್ಟ್‌ಮೆಂಟ್‌ಗಳು ಮಾರಾಟವಾಗಿವೆ. ಇನ್‌ಲ್ಯಾಂಡ್ ಸಂಸ್ಥೆ ಬಿಜೈ ನ್ಯೂ ರೋಡ್‌ನಲ್ಲಿ ನಿರ್ಮಿಸಿರುವ ‘ಇನ್‌ಲ್ಯಾಂಡ್ ಎಸ್ಪಾನ’ ಮತ್ತು ಬೆಂಗಳೂರಿನ ಹೆಗಡೆ ನಗರದಲ್ಲಿ ನಿರ್ಮಿಸಿರುವ ‘ಇನ್‌ಲ್ಯಾಂಡ್ ಇಮಾದ್’ ನವೀನ ಮಾದರಿಯ ವಸತಿ ಸಮುಚ್ಚಯಗಳು ಮುಂದಿನ ವಾರ ಉದ್ಘಾಟನೆಗೊಳ್ಳಲಿವೆ.

ನಗರಕ್ಕೆ ಈಗಾಗಲೇ ಆಕರ್ಷಕ ವಿನ್ಯಾಸಗಳ ಸುಂದರ ವಸತಿ ಸಮುಚ್ಚಯ ಹಾಗೂ ವಾಣಿಜ್ಯ ಸಂಕೀರ್ಣಗಳನ್ನು ನೀಡಿರುವ ‘ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ ಪ್ರೈ. ಲಿ.’ ಈ ಸಮುಚ್ಚಯಗಳನ್ನೂ ಅತ್ಯಾಧುನಿಕ ಸೌಲಭ್ಯಗಳು, ಸುಂದರ ಮತ್ತು ಆಕರ್ಷಕ ವಿನ್ಯಾಸಗಳೊಂದಿಗೆ ನಿರ್ಮಿಸಿದೆ ಎಂದು ಸಂಸ್ಥೆಯ ಮಾಲಕ ಸಿರಾಜ್ ಅಹ್ಮದ್ ಪ್ರಕಟನೆಯಲ್ಲಿ ತಿಳಿಸಿದ್ದಾರೆ.

Inland_elan_Pics_2

ಇನ್‌ಲ್ಯಾಂಡ್ ಸಂಸ್ಥೆ ಪುತ್ತೂರು ಹಾಗೂ ಕೂಳೂರು- ಕಾವೂರು ರಸ್ತೆಯ ಪಕ್ಕದಲ್ಲಿ ವಾಣಿಜ್ಯ ಹಾಗೂ ವಸತಿ ಸಮುಚ್ಚಯದ ನಿರ್ಮಾಣ ಕಾರ್ಯಕ್ಕೆ ಶೀಘ್ರದಲ್ಲಿ ಶಿಲಾನ್ಯಾಸ ನೆರವೇರಿಸಲಿದೆ. ಬೆಂಗಳೂರಿನ ಯಲಹಂಕ ನ್ಯೂಟೌನ್‌ನ ‘ಇನ್‌ಲ್ಯಾಂಡ್ ಎಡಿಲೀನ್’ ವಸತಿ ಸಮುಚ್ಚಯ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ.

ಇದಲ್ಲದೆ ನಿರ್ಮಾಣ ಹಂತದಲ್ಲಿರುವ ವಸತಿ ಹಾಗೂ ವಾಣಿಜ್ಯ ಸಮುಚ್ಚಯಗಳಾದ ಇನ್‌ಲ್ಯಾಂಡ್ ಎವಿನ್ಸ್ (ಕದ್ರಿ), ಇನ್‌ಲ್ಯಾಂಡ್ ಎಸ್ಶೋರಿಯಾ (ವೆಲೆನ್ಸಿಯಾ), ಇನ್‌ಲ್ಯಾಂಡ್ ಸಿಯೋನ್(ಫಳ್ನೀರ್) ಮತ್ತು ಇನ್‌ಲ್ಯಾಂಡ್ ಇಂಪಾಲ(ಉಳ್ಳಾಲ)ದ ಕಾಮಗಾರಿ ತ್ವರಿತಗತಿಯಲ್ಲಿ ನಡೆಯುತ್ತಿದೆ ಎಂದವರು ಪ್ರಕಟನೆಯಲ್ಲಿ ತಿಳಿಸಿದ್ದಾರೆ.

ಉತ್ಕೃಷ್ಟತೆಯ ಪರಂಪರೆ ಪ್ರತಿಷ್ಠಿತ ಇನ್‌ಲ್ಯಾಂಡ್ ಸಂಸ್ಥೆಯು 1986ರಲ್ಲಿ ಮಂಗಳೂರಿನಲ್ಲಿ ಪ್ರಾರಂಭವಾಗಿದ್ದು, ಕಟ್ಟಡ ನಿರ್ಮಾಣ ಕ್ಷೇತ್ರದಲ್ಲಿ ತನ್ನದೇ ಆದ ಛಾಪನ್ನು ಮೂಡಿಸಿದೆ. ಇನ್‌ಲ್ಯಾಂಡ್ ಇನ್‌ಫ್ರಾಸ್ಟ್ರಕ್ಚರ್ ಡೆವಲಪರ್ಸ್‌ ಪ್ರೈ. ಲಿ. ಐಎಸ್‌ಒ 9001: 2008 ಪ್ರಮಾಣಿತ ಸಂಸ್ಥೆಯಾಗಿದೆ. ಹೆಚ್ಚಿನ ಮಾಹಿತಿಗಾಗಿ www.inlandbuilders.net ವಿಳಾಸವನ್ನು ಸಂಪರ್ಕಿಸಬಹುದಾಗಿದೆ.

ಇನ್‌ಲ್ಯಾಂಡ್ ಎಲಾನ್‌ನ ವಿಶೇಷತೆಗಳು : ‍*25 ಡಿಸೈನ್ ಅಪಾರ್ಟ್‌ಮೆಂಟ್‌ಗಳು. *8 ಮಂದಿ ಸಾಮರ್ಥ್ಯದ ಎಲಿವೇಟರ್ *ವಾಸ್ತು ಪ್ರಕಾರ ಫ್ಲಾಟ್‌ಗಳ ನಿರ್ಮಾಣ

Write A Comment