ಕನ್ನಡ ವಾರ್ತೆಗಳು

ತೊಕ್ಕೊಟ್ಟು, ಮಂಗಳೂರು ಒನ್ ಶಾಲೆಯ ಸಿಬ್ಬಂದಿಯ ಲೈಂಗಿಕ ದೌರ್ಜನ್ಯ ಪ್ರಕರಣ : ಸ್ವತಂತ್ರ ಸತ್ಯ ಶೋಧನಾ ಸಮಿತಿ ವರದಿ ಸಲ್ಲಿಕೆ – ತನಿಖೆ ಚುರುಕುಗೊಳಿಸಲು ಆಗ್ರಹ

Pinterest LinkedIn Tumblr

Muslim_sanga_manavi_1

ಮಂಗಳೂರು : ಉಳ್ಳಾಲ- ತೊಕ್ಕೊಟ್ಟಿನಲ್ಲಿ ಕಾರ್ಯನಿರ್ವಾಹಿಸುತ್ತಿರುವ ಮಂಗಳೂರು ಒನ್ ಶಾಲೆಯ ವಾಹನ ಸಿಬ್ಬಂದಿಯಿಂದ ಅಪ್ರಾಪ್ತ ಬಾಲಕಿ ವಿದ್ಯಾರ್ಥಿನಿಯ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯ ಪ್ರಕರಣದ ತನಿಖೆಯನ್ನು ಮುಂದುವರಿಸ ಬೇಕೆಂದು ಆಗ್ರಹಿಸಿ ಗುರುವಾರ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದ ನಿಯೋಗವು ದ.ಕ.ಜಿಲ್ಲಾಧಿಕಾರಿಗಳಿಗೆ ಮನವಿ ಸಲ್ಲಿಸಿದೆ.

ಸಂಬಂಧಪಟ್ಟ ಬಾಲಕಿಯ ತಂದೆ-ತಾಯಿಯವರು ನ್ಯಾಯಕ್ಕಾಗಿ ಆಗ್ರಹಿಸುತ್ತಿದ್ದಾರೆ. ಆದರೆ ವೈದ್ಯಕೀಯ ತಪಾಸಣಾ ವರದಿಯು ಅವರಿಗೆ ಲಭ್ಯವಾಗಿಲ್ಲ. ಈ ಪ್ರಕರಣದ ಆರೋಪಿಯಾಗಿರುವ ಮಂಗಳೂರು ಒನ್ ವಿದ್ಯಾ ಸಂಸ್ಥೆಯ ಕಾರ್ಯವೈಖರಿಯ ಕುರಿತು ತನಿಖೆ ನಡೆದು ಕ್ರಮ ಕೈಗೊಳ್ಳುವ ಸೂಚನೆಗಳು ಕಾಣುತ್ತಿಲ್ಲ. ಈ ಹಿನ್ನೆಲೆಯಲ್ಲಿ ಪ್ರಕರಣದ ತನಿಖೆಯನ್ನು ಚುರುಕುಗೊಳಿಸಲು ಆಗ್ರಹಿಸಲಾಗಿದೆ. ಜೊತೆಗೆ ದ.ಕ. ಜಿಲ್ಲಾ ಮುಸ್ಲಿಂ ಸಂಘಟನೆಗಳ ಒಕ್ಕೂಟದಿಂದ ರಚಿಸಲಾದ ಸ್ವತಂತ್ರ ಸತ್ಯ ಶೋಧನಾ ಸಮಿತಿಯು ಈಗಾಗಲೇ ತನ್ನ ವರದಿಯನ್ನು ಸಲ್ಲಿಸಿದ್ದು, ಅದರ ಪ್ರತಿಯನ್ನು ಕೂಡ ಮನವಿಯ ಜೊತೆ ಲಗತ್ತೀಕರಿಸಲಾಗಿದೆ ಎಂದು ನಿಯೋಗದ ನೇತೃತ್ವ ವಹಿಸಿದ್ದ ವಿವಿಧ ಮುಸ್ಲಿಂ ಸಂಘಟನೆಯ ಒಕ್ಕೂಟದ ಅಧ್ಯಕ್ಷರು ಮತ್ತು ಮಾಜಿ ಮೇಯರ್ ಅಶ್ರಫ್ ಕೆ. ಇವರು ತಿಳಿಸಿದ್ದಾರೆ.

Muslim_sanga_manavi_2

ಸ್ವತಂತ್ರ ಸತ್ಯ ಶೋಧನಾ ಸಮಿತಿಯ ಮುಖ್ಯಸ್ಥರಾದ, ಮಂಗಳೂರು ವಿಶ್ವವಿದ್ಯಾನಿಲಯ ಕಾಲೇಜು ಪ್ರಾಧ್ಯಾಪಕರಾದ ಶ್ರೀ ಪಟ್ಟಾಭಿರಾಮ ಸೋಮಯಾಜಿ, ಸಮಿತಿ ಸದಸ್ಯರಾದ ಹ್ಯೂಮನ್ ರೈಡ್ಸ್‌ಫೆಢರೇಶನ್ ಕಾರ್ಯದರ್ಶಿ ಮತ್ತು ವಕೀಲರಾದ ಮೊಹಮ್ಮದ್ ಹನೀಫ್ ಯು., ದ.ಕ. ಜಿಲ್ಲಾ ಜೆ.ಡಿ.ಎಸ್. ಮೀನುಗಾರಿಕಾ ಘಟಕದ ಕಾರ್ಯಾಧ್ಯಕ್ಷರಾದ ಹೆಚ್. ಇಸ್ಮಾಯಿಲ್ ಶಾಫಿ ಬಬ್ಬುಕಟ್ಟೆ, ದ.ಕ. ಜಿಲ್ಲಾ, ಎಸ್.ಡಿ.ಪಿ.ಐ.ನ ಕಾರ್ಯದರ್ಶಿ ಶ್ರೀ ರಿಯಾಝ್ ಫರಂಗಿಪೇಟೆ, ಭಾರತೀಯ ರೆಡ್‌ಕ್ರಾಸ್ ಸದಸ್ಯರಾದ ಶ್ರೀ ವಿಷ್ಣುಮೂರ್ತಿ ಭಟ್, ಜಮಾತ್ ಇಸ್ಲಾಮ್ ಹ್ಯುಮನಿಟೇರಿಯನ್ ರಿಲೀಫ್ ಸೊಸೈಟಿಯ ಅಧ್ಯಕ್ಷರಾ ಶ್ರೀಮತಿ ರಹಮತ್ ಮನ್ಸೂರ್, ಅನುಪಮ ಮಹಿಳಾ ಮಾಸಿಕ ಸಂಪಾಧಕಿಯಾದ ಶ್ರೀಮತಿ ಶಹನಾಝ್ ಎಂ., ಜಮಾತ್ ಇಸ್ಲಾಮ್ ಹಿಂದ್ ಮಹಿಳಾ ಘಟಕದ ಅಧ್ಯಕ್ಷರಾದ ಶ್ರೀಮತಿ ಶಹನಾಝ್ ಎಂ., ಪತ್ರಕರ್ತ ಹರ್ಷದ್ ವರ್ಕಾಡಿ, ಸಮಾಜ ಸೇವಕರಾದ ಶ್ರೀ ಹಮೀದ್ ಕುದ್ರೋಳಿ, ಮಂಗಳೂರು ಮುಸ್ಲಿಂ ಸೆಂಟ್ರಲ್ ಕಮಿಟಿಯ ಶ್ರೀ ಎಂ. ಆಲಿ ಹಸನ್, ಬಂದರು ಮುಸ್ಲಿಂ ಒಕ್ಕೂಟದ ಸದಸ್ಯರಾದ ನೌಶಾದ್ ಬಂದರ್, ಕ್ಯಾಂಪಸ್ ಪ್ರಂಟ್‌ಆಫ್ ಇಂಡಿಯಾದ ಸದಸ್ಯರಾದ ನೌಫಲ್ ಕಾವೂರು ಮತ್ತು ಸುಹೈಬ್ ಕಣ್ಣೂರು ಮುಂತಾದವರು ಉಪಸ್ಥಿತರಿದ್ದರು,

Write A Comment