ಕನ್ನಡ ವಾರ್ತೆಗಳು

ಮೇ 29 ರಿಂದ ಪಣಂಬೂರು ಕಡಲ ಕಿನಾರೆಯಲ್ಲಿ ಕರ್ನಾಟಕ ಸರ್ಫಿಂಗ್ ಉತ್ಸವ

Pinterest LinkedIn Tumblr

Surf_Festival_manglor

ಮಂಗಳೂರು,ಮೇ.06 :ಪ್ರಥಮ ಬಾರಿಗೆ ಮಂಗಳೂರಿನ ಪಣಂಬೂರು ಕಡಲಕಿನಾರೆಯಲ್ಲಿ ಸರ್ಫಿಂಗ್ ಫೆಡೆರೇಷನ್ ಅಫ್ ಇಂಡಿಯಾ ಇವರ ಸಹಯೋಗದಲ್ಲಿ ರಾಜ್ಯ ಪ್ರವಾಸೋದ್ಯಮ ಇಲಾಖೆ ವತಿಯಿಂದ ಮೇ 29  ರಿಂದ ಮೂರು ದಿನಗಳ ರಾಷ್ಟ್ರಮಟ್ಟದ ಕರ್ನಾಟಕ ಸರ್ಫಿಂಗ್ ಉತ್ಸವವನ್ನು ಏರ್ಪಡಿಸಲಾಗಿದೆ ಎಂದು ಜಿಲ್ಲಾಧಿಕಾರಿ ಎ.ಬಿ.ಇಬ್ರಾಹಿಂ ಅವರು ಬುಧವಾರ ತಮ್ಮ ಕಚೇರಿಯಲ್ಲಿ ಈ ಸಂಬಂಧ ನಡೆದ ಪೂರ್ವಭಾವಿ ಸಭೆಯಲ್ಲಿ ತಿಳಿಸಿದರು.

ಪ್ರತಿದಿನ ಬೆಳಿಗ್ಗೆ ಸರ್ಫಿಂಗ್ ಆಟಗಳು ಸಂಜೆ ಮನರಂಜನಾ ಕಾರ್ಯಕ್ರಮಗಳು ಜರುಗಲಿವೆ. ದೇಶದ ಹಾಗೂ ವಿದೇಶಗಳ ಸರ್ಫಿಂಗ್ ಪಟುಗಳು ಈ ಉತ್ಸವದಲ್ಲಿ ಪಾಲ್ಗೊಳ್ಳಲಿದ್ದಾರೆ ಎಂದು ಸರ್ಫಿಂಗ್ ಫೆಡೆರೆಷನ್ ಅಫ್ ಇಂಡಿಯಾ ಇದರ ಉಪಾಧ್ಯಕ್ಷರಾದ ರಾಮಮೊಹನ್ ಪರಾಂಜಪೆ ತಿಳಿಸಿದ್ದಾರೆ.

ಸಭೆಯಲ್ಲಿ ಪ್ರವಾಸೋಧ್ಯಮ ಇಲಾಖೆ ಸಹಾಯಕ ನಿರ್ದೇಶಕ ಪ್ರಭಾಕರ್, ಯತೀಶ್ ಬೈಕಂಪಾಡಿ ಮುಂತಾದವರು ಇದ್ದರು. ಇಂಡಿಯಾ ಒಪನ್ ಅಫ್ ಸರ್ಫಿಂಗ್ ಕರ್ನಾಟಕ ಸರ್ಫಿಂಗ್ ಫೆಸ್ತಿವಲ್ ಚಿಹ್ನೆಯನ್ನು ಜಿಲ್ಲಾಧಿಕಾರಿಗಳು ಇದೇ ಸಂದರ್ಭದಲ್ಲಿ ಬಿಡುಗಡೆಗೊಳಿಸಿದರು.

Write A Comment