ಕನ್ನಡ ವಾರ್ತೆಗಳು

ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ಪ್ರತಿಭಟನೆ

Pinterest LinkedIn Tumblr

Petrol_hike_protest_1

ಉಳ್ಳಾಲ, ಮೇ.05:  ಅಂತಾರಾಷ್ಟ್ರೀಯ ಮಟ್ಟದಲ್ಲಿ ತೈಲ ಬೆಲೆ ಇಳಿಕೆಯಾದರೂ , ಕೇಂದ್ರದ ಬಿಜೆಪಿ ಸರಕಾರ ಡೀಸೆಲ್, ಪೆಟ್ರೋಲ್ ದರದ ಬೆಲೆ ಏರಿಕೆಯನ್ನು ಮಾಡುವ ಮೂಲಕ ಜನರನ್ನು ಸಂಕಷ್ಟಕ್ಕೆ ಸಿಲುಕಿಸುತ್ತಿದೆ ಎಂದು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಈಶ್ವರ್ ಉಳ್ಳಾಲ್ ಹೇಳಿದ್ದಾರೆ. ಅವರು ಉಳ್ಳಾಲ ಬ್ಲಾಕ್ ಕಾಂಗ್ರೆಸ್ ಮತ್ತು ಮಂಗಳೂರು ವಿಧಾನಸಭಾ ಕ್ಷೇತ್ರದ ಯೂತ್ ಕಾಂಗ್ರೆಸ್ ವತಿಯಿಂದ ಕೇಂದ್ರ ಸರಕಾರದ ವಿರುದ್ಧ ಪೆಟ್ರೋಲ್- ಡೀಸೆಲ್ ಬೆಲೆ ಏರಿಕೆಯನ್ನು ಖಂಡಿಸಿ ತೊಕ್ಕೊಟ್ಟು ಜಂಕ್ಷನ್ನಿನಲ್ಲಿ ಹಮ್ಮಿಕೊಳ್ಳಲಾಗಿದ್ದ ಪ್ರತಿಭಟನೆಯಲ್ಲಿ ಭಾಗವಹಿಸಿ ಮಾತನಾಡಿದರು.

ಕೇಂದ್ರ ಸರಕಾರದಲ್ಲಿ ಜೇಟ್ಲಿ, ಅಮಿತ್ ಷಾ ಮತ್ತು ಮೋದಿ ಮಾತ್ರ ಕಾರ್‍ಯ ನಿರ್ವಹಿಸುತ್ತಿದ್ದಾರೆ. ಉಳಿದ ಸಚಿವರುಗಳು ನಾಪತ್ತೆಯಾಗಿದ್ದಾರೆ. ರಾಹುಲ್ ಗಾಂಧಿ ಬಗ್ಗೆ ಮಾತನಾಡುವವರು ಸ್ವತ: ಅವರನ್ನು ಪ್ರಶ್ನಿಸಬೇಕಿದೆ ಎಂದ ಅವರು ತೈಲ ಬೆಲೆ ಇಳಿಕೆ ಮಾಡದೇ ಇದ್ದಲ್ಲಿ ಮುಂದೆ ತೀವ್ರ ತರದ ಹೋರಾಟ ಮುಂದುವರಿಸುತ್ತೇವೆ ಎಂದರು. ಈ ಸಂದರ್ಭ ಮಂಗಳೂರು ವಿಧಾನಸಭಾ ಕ್ಷೇತ್ರದ ಯುವ ಕಾಂಗ್ರೆಸ್ ಅಧ್ಯಕ್ಷ ನಝರ್ ಷಾ ಪಟ್ಟೋರಿ ಮಾತನಾಡಿ ತೈಲ ಬೆಲೆ ಇಳಿಕೆ ಮಾಡದೇ ಇದ್ದಲ್ಲಿ, ಮುಂದೆ ರೈಲು ಮತ್ತು ರಾಷ್ಟ್ರೀಯ ಹೆದ್ದಾರಿಯಲ್ಲಿ ರಸ್ತೆ ತಡೆ ನಡೆಸಿ ಉಗ್ರ ಹೋರಾಟ ನಡೆಸುವುದಾಗಿ ಹೇಳಿದರು.

Petrol_hike_protest_3 Petrol_hike_protest_2

ಜಿಲ್ಲಾ ಪಂಚಾಯಿತಿ ಸದಸ್ಯ ಎನ್.ಎಸ್.ಕರೀಂ, ಉಳ್ಳಾಲ ನಗರಸಭೆ ಅಧ್ಯಕ್ಷೆ ರಝಿಯಾ ಇಬ್ರಾಹಿಂ ತಾ.ಪಂ ಸದಸ್ಯರುಗಳಾದ ಸುರೇಖಾ ಚಂದ್ರಹಾಸ್, ಮಹಮ್ಮದ್ ಮೋನು ನಕ್ಕರೆ ಬಾವಾ, ಕ್ಲೇರಾ ಕುವೆಲ್ಲೋ , ಜಿಲ್ಲಾ ಯುವಕಾಂಗ್ರೆಸ್ ಉಪಾಧ್ಯಕ್ಷ ಲುಕ್‌ಮಾನ್ ಬಂಟ್ವಾಳ, ಉಳ್ಳಾಲ ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷ ಮಹಮ್ಮದ್ ಮುಕ್ಕಚ್ಚೇರಿ, ಜಿಲ್ಲಾ ಕಾಂಗ್ರೆಸ್ ನ ವಕ್ತಾರ ಫಾರುಕ್ ಉಳ್ಳಾಲ್, ಟಿ.ಎಸ್.ಅಬ್ದುಲ್ಲಾ , ಅಬ್ದುಲ್ ರೆಹಮಾನ್ ಕೋಡಿಜಾಲ್, ನಗರಸಭೆ ಸದಸ್ಯರಾದ ದಿನೇಶ್ ರೈ, ಬಾಝಿಲ್ ಡಿಸೋಜಾ, ಉಸ್ಮಾನ್ ಕಲ್ಲಾಪು, ಯು.ಎ.ಇಸ್ಮಾಯಿಲ್, ಮುಸ್ತಾಫ, ಭಾರತಿ, ಜೀನ್ ಶಾಂತಿ ಡಿಸೋಜಾ, ಹಮೀದ್ ಹಸನ್ ಮಾಡೂರು, ಮುನ್ನೂರು ಪಂಚಾಯಿತಿ ಅಧ್ಯಕ್ಷ ಅಬ್ದುಲ್ ರೆಹಮಾನ್, ಆಲ್ವಿನ್ ಡಿಸೋಜಾ, ಕಿನ್ಯಾ ಗ್ರಾಮ ಪಂಚಾಯಿತಿ ಅಧ್ಯಕ್ಷ ಹಮೀದ್ ಕಿನ್ಯಾ , ಸಿರಾಜ್ ಕಿನ್ಯಾ, ಶರೀಫ್ ಪಟ್ಟೋರಿ, ಇಲ್ಯಾಸ್ ಮಂಜನಾಡಿ , ಜಮಾಲ್ ಕೆ.ಸಿ.ರೋಡು, ಚಂದ್ರಹಾಸ್ ರೈ ಪಿಲಾರು, ಟಿ.ಯಸ್.ನಾಸಿರ್, ಪುಷ್ಟಿ ಮಹಮ್ಮದ್, ಎಂ.ಎಸ್.ಮಹಮ್ಮದ್ ಪಂಜಾಳ, ಅಭಿಷೇಕ್ ಉಳ್ಳಾಲ್ , ಭಾಗ್ಯ ತಲಪಾಡಿ , ಹೇಮಾ ತೊಕ್ಕೊಟ್ಟು, ಶೈನಿ ತೊಕ್ಕೊಟ್ಟು ಮೊದಲಾದವರು ಉಪಸ್ಥಿತರಿದ್ದರು.
ಆರೀಫ್ ಕಲ್ಲಕಟ್ಟ_

Write A Comment