ಕನ್ನಡ ವಾರ್ತೆಗಳು

ಬಜಾಲ್ ರೈಲ್ವೆ ಲೆವೆಲ್ ಕ್ರಾಸಿಂಗ್ ಇಕ್ಕೆಲಗಳ ರಸ್ತೆ ಶ್ರೀಘ್ರದಲ್ಲೇ ಸಿದ್ಧ

Pinterest LinkedIn Tumblr

padil_bridge_insp1

ಮಂಗಳೂರು, ಮೇ.05: ಕಂಕನಾಡಿ-ಬಜಾಲ್ ರೈಲ್ವೆ ಲೆವೆಲ್ ಕ್ರಾಸಿಂಗ್ ಸ್ಥಳದಲ್ಲಿ ರಸ್ತೆ ಬಾಕ್ಸ್ ಪುಷಿಂಗ್ ಕೆಳಸೇತುವೆ ನಿರ್ಮಾಣಗೊಂಡಿದ್ದು, ಇಕ್ಕೆಲಗಳ ರಸ್ತೆ ಅಕ್ಟೋಬರ್ ವೇಳೆ ಸಿದ್ಧಗೊಳ್ಳಲಿದೆ ಎಂದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು. ಬಜಾಲ್ ಕೆಳಸೇತುವೆ ಬಳಿ ಪ್ರಸ್ತಾವಿತ ರಸ್ತೆ ನಿರ್ಮಾಣ ಯೋಜನಾ ಸ್ಥಳಕ್ಕೆ ಶಾಸಕ ಜೆ.ಆರ್.ಲೋಬೊ, ಕಾರ್ಪೊರೇಟರ್‌ಗಳು ಹಾಗೂ ರೈಲ್ವೆ ಮತ್ತು ಮಹಾನಗರ ಪಾಲಿಕೆ ಎಂಜಿನಿಯರ್‌ಗಳೊಂದಿಗೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಅವರು ಮಾತನಾಡಿದರು.

ಮಂಗಳೂರು ಜಂಕ್ಷನ್ ರೈಲ್ವೆ ನಿಲ್ದಾಣ ಬಳಿ ವಿಶ್ವದರ್ಜೆ ರೈಲ್ವೆ ನಿಲ್ದಾಣ ಸ್ಥಾಪನೆಗೆ ರೈಲ್ವೆ ಇಲಾಖೆ ಮತ್ತು ಮಹಾನಗರ ಪಾಲಿಕೆಯಿಂದ ಜಂಟಿ ಸಮೀಕ್ಷೆ ಆರಂಭಗೊಂಡಿದೆ. ಈ ಬಗ್ಗೆ ಈಗಾಗಲೇ ಉಸ್ತು ವಾರಿ ಸಚಿವರು ಮತ್ತು ಸ್ಥಳೀಯ ಶಾಸಕರ ಜತೆ 3 ಸಭೆಗಳನ್ನು ನಡೆಸಲಾಗಿದೆ. ಸಮೀಕ್ಷೆ ವರದಿಯನ್ನು ಕೇಂದ್ರ ಸರಕಾರಕ್ಕೆ ಸಲ್ಲಿಸಲಾ ಗುವುದು ಸಂಸದ ನಳಿನ್ ಕುಮಾರ್ ಕಟೀಲ್ ಹೇಳಿದರು

padil_bridge_insp10 padil_bridge_insp2 padil_bridge_insp4 padil_bridge_insp5 padil_bridge_insp6

ಇಂತಹ ಕಾಮಗಾರಿಗಳ ಸಂದರ್ಭ ಲೋಪದೋಷಗಳು ಆಗುವುದು ಸಹಜ. ಕಾಮಗಾರಿ ಪೂರ್ಣಗೊಳಿಸಲು ಇನ್ನೂ 3-4 ತಿಂಗಳು ಬೇಕು ಎಂದು ಅಧಿಕಾರಿಗಳು ಹೇಳಿದ್ದಾರೆ. ಮುಂದೆ ಸಮಸ್ಯೆ ಆಗದಂತೆ ಗುಣಮಟ್ಟದ ಕೆಲಸ ನಡೆಸಬೇಕಾಗಿದೆ. ಇದಕ್ಕೆ ಸ್ಥಳೀಯರ ಸಹಕಾರ ಅಗತ್ಯ. 35 ವರ್ಷಗಳ ನಂತರ ಈ ಯೋಜನೆ ಆಗುತ್ತಿದ್ದು, ನಾಲ್ಕು ತಿಂಗಳು ಅವಕಾಶ ಕೊಡಿ ಎಂದು ನಳಿನ್ ಹೇಳಿದರು.

ಈ ಆರ್ಥಿಕ ವರ್ಷದಲ್ಲಿ ಇನ್ನಷ್ಟು ರೈಲ್ವೆ ಸೇತುವೆಗಳು ನಿರ್ಮಾಣಗೊಳ್ಳಲಿವೆ. ರಾಷ್ಟ್ರೀಯ ಹೆದ್ದಾರಿ ಚತುಷ್ಪಥದ ಬೈಕಂಪಾಡಿ, ಕಣ್ಣೂರು ಮತ್ತು ಬಿ.ಸಿ.ರೋಡ್ ರೈಲ್ವೆ ಸೇತುವೆಗಳು ಮೇ ಅಂತ್ಯಕ್ಕೆ ಸಿದ್ಧಗೊಳ್ಳಲಿವೆ. ತೋಕೋರು ಲೈಓವರ್ ಸಮಸ್ಯೆ ಇತ್ಯರ್ಥ ಗೊಂಡಿದೆ. ಪಂಪ್‌ವೆಲ್ ್ಲೈಓವರ್ ಕಾಮಗಾರಿ ಶೀಘ್ರ ಆರಂಭಗೊಳ್ಳಲಿದೆ ಎಂದು ಅವರು ತಿಳಿಸಿದರು.

padil_bridge_insp7 padil_bridge_insp8 padil_bridge_insp9 padil_bridge_insp3

ಶಾಸಕ ಲೋಬೊ ಮಾತನಾಡಿ, ಪಡೀಲ್ ಕೆಳ ಸೇತುವೆ ಇಕ್ಕೆಲ ಗಳಲ್ಲಿ ರಸ್ತೆ ನಿರ್ಮಾಣಕ್ಕೆ ತಾಂತ್ರಿಕ ಸಮಸ್ಯೆ ಇದೆ. ಇದನ್ನು ಸಭೆ ನಡೆಸಿ ನಿರ್ಧರಿಸಲಾ ಗುವುದು. ನೀರಿನ ಕೊಳವೆ ಸ್ಥಳಾಂತರ ಕೂಡಾ ಮಾಡಬೇಕಾಗಿದೆ ಎಂದು ಅವರು ಹೇಳಿದರು.ಈ ರಸ್ತೆ ನಿರ್ಮಾಣ ವಿಳಂಬವಾಗುವ ಕಾರಣ, ಎಕ್ಕೂರಿನಿಂದ ನಿರ್ಮಿಸಿರುವ ಕಾಂಕ್ರಿಟ್ ರಸ್ತೆಯನ್ನು ಸಂಚಾರಕ್ಕೆ ಬಳಸ ಬಹುದು ಎಂದವರು ಹೇಳಿದರು. ಕಾರ್ಪೊರೇಟರ್‌ಗಳಾದ ಸುಧೀರ್ ಶೆಟ್ಟಿ ಕಣ್ಣೂರು, ವಿಜಯಕುಮಾರ್ ಶೆಟ್ಟಿ, ಜಿಪಂ ಉಪಾಧ್ಯಕ್ಷ ಸತೀಶ್ ಕುಂಪಲ, ವಿಧಾನ ಪರಿಷತ್ ಮಾಜಿ ಸದಸ್ಯ ಮೋನಪ್ಪ ಭಂಡಾರಿ, ಮನಪಾ ತಾಂತ್ರಿಕ ಸಲಹೆಗಾರ ಧರ್ಮರಾಜ್ ಮತ್ತಿತರರು ಉಪಸ್ಥಿತರಿದ್ದರು.

Write A Comment