ಕನ್ನಡ ವಾರ್ತೆಗಳು

ಖಾಸಗಿ ಶಿಕ್ಷಣ ಸಂಸ್ಥೆಗಳ ಡೊನೇಷನ್ ಹಾವಳಿಯ ವಿರುದ್ದ ಸೂಕ್ತ ಕ್ರಮಕೈಗೊಳ್ಳಲ್ಲು ಒತ್ತಾಯಿಸಿ ಎಸ್‍ಎಫ್‍ಐಯಿಂದ ಪ್ರತಿಭಟನೆ

Pinterest LinkedIn Tumblr

Student_protest_photo_1

ಮಂಗಳೂರು,ಎಪ್ರಿಲ್.29 : ಖಾಸಗಿ ಶಾಲಾ ಕಾಲೇಜುಗಳು ಕರ್ನಾಟಕ ಶಿಕ್ಷಣ ಕಾಯ್ದೆಯನ್ನು ಉಲ್ಲಂಘಿಸಿ ಅತ್ಯಧಿಕ ಡೊನೇಷನ್ ಸಂಗ್ರಹಿಸುತ್ತಿದ್ದು, ಇಂತಹ ಶಾಲಾ ಕಾಲೇಜಿನ ವಿರುದ್ಧ ಸರಕಾರ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿ ಎಸ್‍ಎಫ್‍ಐ ಜಿಲ್ಲಾಧಿಕಾರಿಗಳ ಕಚೇರಿ ಮುಂದೆ ಪ್ರತಿಭಟನೆ ನಡೆಸಿತು. ಸರಕಾರಿ ಶಾಲೆ ಕಾಲೇಜಿಗಿಂತ ಅತ್ಯಧಿಕವಾಗಿ ಖಾಸಗಿ ಶಾಲಾ ಕಾಲೇಜುಗಳಿದ್ದು ಜಿಲ್ಲೆ ಶಿಕ್ಷಣ ರಂಗಕ್ಕೆ ಹೆಸರು ಪಡೆದಿರುವ ಕಾರಣ ದೇಶದ ಬೇರೆ ಬೇರೆ ಭಾಗದಿಂದ ವಿದ್ಯಾರ್ಥಿಗಳು ಬರುತ್ತಿದ್ದಾರೆ. ಆದರೆ ಇದೆಲ್ಲದರ ಲಾಭ ಪಡೆಯುತ್ತಿರುವ ಕೆಲವೊಂದು ಶಾಲಾ ಕಾಲೇಜು, ವಿದ್ಯಾರ್ಥಿ ಹೆತ್ತವರನ್ನು ದೋಚುವ ಕೆಲಸ ನಡೆಸುತ್ತಿದೆ ಎಂದು ಎಸ್‍ಎಫ್‍ಐ ಆರೋಪಿಸಿದೆ.

Student_protest_photo_2 Student_protest_photo_3

ನಾಯಿಕೊಡೆಗಳಂತೆ ತಲೆ ಎತ್ತಿರುವ ಖಾಸಗೀ ಶಿಕ್ಷಣ ಸಂಸ್ಥೆಗಳಿಂದಾಗಿ ಬಡ ಮಕ್ಕಳೂ ಇದೆನ್ನೇ ಆಶ್ರಯಿಸಬೇಕಾದ ಅನಿವಾರ್ಯತೆಗೆ ಒಳಗಾಗಿದ್ದಾರೆ. ಆದರೆ ಖಾಸಗೀ ಶಾಲಾ ಕಾಲೇಜಿನ ಡೊನೇಷನ್ ಹಾವಳಿಯಿಂದಾಗಿ ಬಡ ಮಕ್ಕಳು ಶಿಕ್ಷಣ ವಂಚಿತರಾಗುತ್ತಿದ್ದಾರೆ ಎಂದು ಎಸ್‍ಎಫ್‍ಐ ಆರೋಪಿಸಿದೆ. ಕರ್ನಾಟಕ ಶಿಕ್ಷಣ ಕಾಯ್ದೆ ಮತ್ತು ಕರ್ನಾಟಕ ಶಿಕ್ಷಣ ಸಂಸ್ಥೆಗಳ ಕಾಯ್ದೆ ಪ್ರಕಾರ ಅನುದಾನಿತ ಶಿಕ್ಷಣ ಸಂಸ್ಥೆ ಕೇವಲ 500 ರೂ. ಮತ್ತು ಅನುದಾನ ರಹಿತ ಶಿಕ್ಷಣ ಸಂಸ್ಥೆ 600 ಅಭಿವೃದ್ಧಿ ಶುಲ್ಕ ಪಡೆಯಲು ಅವಕಾಶ ಇದೆ. ಆದರೆ ಇಂದು ಅದೆಲ್ಲವನ್ನೂ ಗಾಳಿಗೆ ತೂರಿ ಶಿಕ್ಷಣವನ್ನು ವ್ಯವಹಾರ ಮಾಡಲಾಗುತ್ತಿದೆ ಎಂದು ಆರೋಪಿಸಿದ ಎಸ್‍ಎಫ್‍ಐ ಕಾನೂನು ಮೀರುವ ಶಿಕ್ಷಣ ಸಂಸ್ಥೆಗಳ ವಿರುದ್ಧ ಕ್ರಮಕೈಗೊಳ್ಳುವಂತೆ ಒತ್ತಾಯಿಸಿದೆ.

Write A Comment