ಕನ್ನಡ ವಾರ್ತೆಗಳು

ಮಣಿಪಾಲದಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತ್ತಿದ್ದ ಇಬ್ಬರು ಯುವಕರ ಬಂಧನ; ಡಿಸಿಐಬಿ ಪೊಲೀಸರ ಕಾರ್ಯಾಚರಣೆ

Pinterest LinkedIn Tumblr

ಉಡುಪಿ: ಮಣಿಪಾಲ ಎಂ.ಐ.ಟಿ ಕಾಲೇಜ್ ರಸ್ತೆಯ ಬಳಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಗಾಂಜಾವನ್ನು ಮಾರಾಟ ಮಾಡುತ್ತಿದ್ದ ಇಬ್ಬರು ಯುವಕರನ್ನು ಉಡುಪಿ ಡಿಸಿಐಬಿ ಪೊಲೀಸರು ಬಂಧಿಸಿದ್ದಾರೆ.

ಶಿರ್ವಾದ ಮಟ್ಟಾರು ನಿವಾಸಿ ರಂಜಿತ್ ( 23) ಹಾಗೂ ಶಿರ್ವಾದ ಮೂಡುಮಟ್ಟಾರು ನಿವಾಸಿ  ಶಿವರಾಜ ಆಚಾರ್ಯ (19) ಬಂಧಿತ ಆರೋಪಿಗಳಾಗಿದ್ದು, ಬಂಧಿತರಿಂದ ಒಟ್ಟು 1 ಕೆ.ಜಿ 240 ಗ್ರಾಂ ಗಾಂಜಾ, ನಗದು 1,390/- ರೂಪಾಯಿ, 2 ಮೊಬೈಲ್ ಫೋನ್, ಹಾಗೂ 2 ದ್ವಿಚಕ್ರ ವಾಹನಗಳನ್ನು ವಶಪಡಿಸಿಕೊಳ್ಳಲಾಗಿದೆ. ಇವುಗಳ ಒಟ್ಟು ಮೌಲ್ಯ  1,36,590/-ರೂಪಾಯಿ ಆಗಿದೆ.

Udp_DCIB_Crime

ಘಟನೆ ವಿವರ:   ರಂಜಿತ್ ಹಾಗೂ ಶಿವರಾಜ್ ಎಂಬಿಬ್ಬರು ಯುವಕರು ಎಂ.ಐ.ಟಿ ಕಾಲೇಜ್ ರಸ್ತೆಯ ಬಳಿ ದ್ವಿಚಕ್ರ ವಾಹನ ನಿಲ್ಲಿಸಿಕೊಂಡು ಗಾಂಜಾವನ್ನು ಮಾರಾಟ ಮಾಡುತ್ತಿರುವ ಬಗ್ಗೆ ಖಚಿತ ವರ್ತಮಾನ ಬಂದ ಮೇರೆಗೆ  ಉಡುಪಿ ಡಿ.ಸಿ.ಐ.ಬಿ ಇನ್ಸ್ ಪೆಕ್ಟರ್ ಟಿ.ಆರ್ ಜೈಶಂಕರ್ ಅವರು ಸಿಬ್ಬಂಧಿಗಳೊಂದಿಗೆ ದಾಳಿ ನಡೆಸಿ ಇಬ್ಬರು ಆರೋಪಿಗಳ ಸಮೇತ ಗಾಂಜಾ ಮೊದಲಾದ ಸೊತ್ತು ವಶಪಡಿಸಿಕೊಂಡಿದ್ದಾರೆ.

ಆರೋಪಿಗಳಿಬ್ಬರನ್ನು ಸ್ವತ್ತುಗಳೊಂದಿಗೆ ಮಣಿಪಾಲ ಠಾಣೆಗೆ ಹಸ್ತಾಂತರಿಸಿದ್ದು ಆರೋಪಿಗಳ ವಿರುದ್ದ ಪ್ರಕರಣ ದಾಖಲಾಗಿರುತ್ತದೆ.

ಕಾರ್ಯಾಚರಣೆಯಲ್ಲಿ: ಉಡುಪಿ ಜಿಲ್ಲಾ ಪೊಲೀಸ್ ಅಧೀಕ್ಷಕ ಕೆ. ಅಣ್ಣಾಮಲೈ ನಿರ್ದೇಶನದಲ್ಲಿ, ಹೆಚ್ಚುವರಿ ಪೊಲೀಸ್ ಅಧೀಕ್ಷಕ ಸಂತೋಷ ಕುಮಾರ್ ಅವರ ಮಾರ್ಗದರ್ಶನದಲ್ಲಿ, ಉಡುಪಿ ಡಿ.ಸಿ.ಐ.ಬಿ ಇನ್ಸ್ ಪೆಕ್ಟರ್ ಟಿ.ಆರ್ ಜೈಶಂಕರ, ಎಎಸ್‌ಐ ರೊಸಾರಿಯೊ ಡಿ’ಸೋಜ, ಸಂತೋಷ ಪುತ್ತೂರು, ಚಂದ್ರ ಶೆಟ್ಟಿ, ಸಂತೋಷ ಕುಂದರ್, ಸುರೇಶ, ರಾಮು ಹೆಗ್ಡೆ, ರಾಘವೇಂದ್ರ ಉಪ್ಪುಂದ, ಪ್ರವೀಣ, ಥೊಮ್ಸನ್ ಮತ್ತು ವಾಹನ ಚಾಲಕ ಚಂದ್ರಶೇಖರ್ ಪಾಲ್ಘೊಂಡಿದ್ದರು.

Write A Comment