ಕನ್ನಡ ವಾರ್ತೆಗಳು

ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಾಟಕ ಪುಸ್ತಕ ಮತ್ತು ಬ್ಯಾರಿ ಹಾಡುಗಳ ಸಿಡಿ ಬಿಡುಗಡೆ.

Pinterest LinkedIn Tumblr

beary_book_relase_1

ಮಂಗಳೂರು,ಎಪ್ರಿಲ್.28 : ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ವತಿಯಿಂದ ನಗರದಲ್ಲಿ ಸೋಮವಾರ ಇಸ್ಮಾಯಿಲ್‌ ಮೂಡುಶೆಡ್ಡೆ ಅವರ “ಎರಂಟೆ’ ಎರಡು ನಾಟಕ ಪುಸ್ತಕ ಹಾಗೂ ಬಶೀರ್‌ ಅಹ್ಮದ್‌ ಕಿನ್ಯಾ ರಚಿತ “ಕೊತ್ತಿಪ್ಪೂ’ (ನಕ್ಷತ್ರ ಹೂ) ಬ್ಯಾರಿ ಹಾಡುಗಳ ಸಿಡಿ ಬಿಡುಗಡೆ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು.

ಬ್ಯಾರಿ ಹಾಗೂ ಇತರ ಭಾಷೆಗಳಿಗಿರುವ ಬಹಳಷ್ಟು ಅನ್ಯೋನ್ಯತೆ ಮತ್ತು ಸಾಮ್ಯತೆ ಇದೆ. ಅಲ್ಲದೆ ಕರ್ನಾಟಕದಲ್ಲಿ ಬ್ಯಾರಿ ಸಂಸ್ಕೃತಿಯನ್ನು ಹೆಚ್ಚಿನ ರೀತಿಯಲ್ಲಿ ಗುರುತಿಸುವ ಕಾರ್ಯವಾಗಬೇಕು. ಹಿಂದಿನ ಸಂಸ್ಕೃತಿ ಇಂದಿಗೂ ಉಳಿದ ಕಾರಣ ತನ್ನ ಅಸ್ತಿತ್ವ ರೂಪಿಸಿಕೊಳ್ಳಲು ಸಾಧ್ಯವಾಗಿದೆ.ಯಾವುದೇ ಭಾಷೆ ಬಗ್ಗೆ ಮಡಿವಂತಿಕೆ ತೋರಿಸದೆ, ಎಲ್ಲ ಮೂಲಗಳಿಂದ ಶಬ್ದಗಳನ್ನು ಸ್ವೀಕರಿಸಿದರೆ ಮಾತ್ರ ಭಾಷೆ ಅಭಿವೃದ್ಧಿ ಹೊಂದಲು ಸಾಧ್ಯ, ಸುಪ್ತ ಪ್ರತಿಭೆಗಳಿಗೆ ಪ್ರೇರಣೆ ನೀಡುವ ಉದ್ದೇಶದಿಂದ ಅಕಾಡೆಮಿಯಲ್ಲಿ ಸಾಹಿತ್ಯ, ಸಂಸ್ಕೃತಿ ಕುರಿತ ಹೆಚ್ಚು ಕಾರ್ಯಕ್ರಮ ನಡೆಯಬೇಕು ಎಂದು ಮಾಜಿ ಸಚಿವ ಬಿ.ಎ. ಮೊಯ್ದಿನ್ ಈ ಸಂಧರ್ಭದದಲ್ಲಿ ಹೇಳಿದರು.

beary_book_relase_2 beary_book_relase_3 beary_book_relase_4 beary_book_relase_5 beary_book_relase_6 beary_book_relase_7 beary_book_relase_8 beary_book_relase_9 beary_book_relase_10 beary_book_relase_11 beary_book_relase_12 beary_book_relase_13 beary_book_relase_14 beary_book_relase_15 beary_book_relase_16

ಈ ಸಂದರ್ಭ ಸಂಗೀತ ನಿರ್ದೇಶಕ ಕಮರುದ್ದೀನ್‌ ಕೀಚೇರಿ, ಬಹುಭಾಷಾ ಕವಿ ಬಶೀರ್‌ ಅಹ್ಮದ್‌ ಕಿನ್ಯಾ , ಮ.ನ.ಪಾ ಮೇಯರ್‌ ಜೆಸಿಂತಾ ವಿಜಯಾ ಆಲ್ಫೆಡ್‌ ಅವರನ್ನು ಸಮ್ಮಾನಿಸಲಾಯಿತು. .

ಕರ್ನಾಟಕ ಬ್ಯಾರಿ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಬಿ.ಎ. ಮುಹಮ್ಮದ್‌ ಹನೀಫ್‌, ಹಿರಿಯ ರಂಗ ನಿರ್ದೇಶಕ ವಿ.ಜಿ. ಪಾಲ್‌, ಕೊಡಗು ಬ್ಯಾರೀಸ್‌ ವೆಲ್ಫೆರ್‌ ಟ್ರಸ್ಟ್‌ನ ಅಧ್ಯಕ್ಷ ಬಿ. ಶಂಶುದ್ದೀನ್‌ ಮಡಿಕೇರಿ, ದ.ಕ. ಜಿಲ್ಲಾ ಸಮನ್ವಯ ಮುಸ್ಲಿಂ ಶಿಕ್ಷಕರ ಸಂಘದ ಅಧ್ಯಕ್ಷ ಬಿ.ಎ. ಮುಹಮ್ಮದ್‌ ತುಂಬೆ, ಪತ್ರಕರ್ತ ಹಂಝ ಮಲಾರ್‌, ಬಹುಭಾಷಾ ಕಲಾವಿದ ಇಸ್ಮಾಯಿಲ್‌ ಮೂಡುಶೆಡ್ಡೆ, ಪಾಲಿಕೆ ಸದಸ್ಯ ಲತೀಫ್‌, ಅಹಿಂದ ಮುಖಂಡ ವಾಸುದೇವ ಬೋಳೂರು ಮೊದಲಾದವರು ಉಪಸ್ಥಿತರಿದ್ದರು.

ಅಕಾಡೆಮಿ ರಿಜಿಸ್ಟ್ರಾರ್‌ ಉಮರಬ್ಬ ಸ್ವಾಗತಿಸಿ, ಸದಸ್ಯ ಯೂಸುಫ್‌ ವಕ್ತಾರ್‌ ವಂದಿಸಿದರು. ಹಮೀದ್‌ ಗೋಳ್ತಮಜಲು ನಿರೂಪಿಸಿದರು.

Write A Comment