ಮೂಲ್ಕಿ: ಭ್ರಷ್ಟತೆಯ ವಿರುದ್ಧ ಧೈರ್ಯವಾಗಿ ಧ್ವನಿ ಎತ್ತಿ, ಸ್ವಾಭಿಮಾನಿಗಳಾಗಿ ಸಮಾಜದಲ್ಲಿ ಬದುಕಲು ಬಿಲ್ಲವ ಸಮಾಜಕ್ಕೆ ಹಿಂಜರಿಕೆ ಬೇಡ, ಮಠ ಮಂದಿರದ ಸ್ವಾಮೀಜಿಗಳು, ಜನನಾಯಕರು ಈ ಬಗ್ಗೆ ಚಿಂತನೆ ನಡೆಸಿ ಜಾಗೃತಿ ಮೂಡಿಸಬೇಕು, ಕಾಲಕಾಲಕ್ಕೆ ರೂಪಿಸುವ ಸರ್ಕಾರಿ ಯೋಜನೆಗಳನ್ನು ಜನರಿಗೆ ತಿಳಿಹೇಳುವ ಕೆಲಸ ಜಾತಿ ಸಂಘಟನೆಯ ಹೆಸರಿನಲ್ಲಿರುವ ಸಂಘ ಸಂಸ್ಥೆಗಳು ನಡೆಸಬೇಕು, ನೇರ ನಡೆ ನುಡಿಯಿಂದ ನಿಷ್ಠುರ ಆಗುತ್ತೇವೆ ಎಂಬ ಅಂಜಿಕೆಯನ್ನು ಮನದಿಂದ ದೂರ ಮಾಡಿ ಸಮಾಜದ ಶಕ್ತಿಯನ್ನು ಇನ್ನಷ್ಟು ಹೆಚ್ಚಿಸುವ ಕೆಲಸ ನಿರಂತರವಾಗಿ ನಡೆಯಬೇಕು ಎಂದು ಕೇಂದ್ರ ಮಾಜಿ ಸಚಿವ ಬಿ.ಜನಾರ್ದನ ಪೂಜಾರಿ ಅಭಿಪ್ರಾಯ ಪಟ್ಟರು.
ಮೂಲ್ಕಿಯ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಮುಖ್ಯ ಕೇಂದ್ರ ಕಚೇರಿಯನ್ನು ಭಾನುವಾರ ಲೋಕಾರ್ಪಣೆಗೊಳಿಸಿದ ಅವರು ನಂತರ ಮೂಲ್ಕಿ ಬಿಲ್ಲವ ಸಮಾಜ ಸೇವಾ ಸಂಘದ ಆವರಣದಲ್ಲಿ ನಡೆದ ಸಭಾ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು. ಮೂಲ್ಕಿ ರಾಷ್ಟ್ರೀಯ ಬಿಲ್ಲವರ ಮಹಾಮಂಡಲದ ಅಧ್ಯಕ್ಷ ಜಯ ಸಿ. ಸುವರ್ಣ ಅಧ್ಯಕ್ಷತೆಯನ್ನು ವಹಿಸಿದ್ದರು.
ವಿವಿಧ ಕ್ಷೇತ್ರದಲ್ಲಿ ಸಾಧಕರಾದ ಮುಂಬೈ ಅಕ್ಷಯ ಪತ್ರಿಕೆಯ ಗೌರವ ಸಂಪಾದಕ ಎಂ.ಬಿ.ಕುಕ್ಯಾನ್, ವಿನ್ಯಾಸಗಾರ ಮೋಹನ್‌ದಾಸ್ ಪಾವೂರು ಭಂಡಾರಮನೆ, ಹಿರಿಯ ಸದಸ್ಯರಾದ ಚಂದ್ರಶೇಖರ ಸುವರ್ಣ ಮೈಸೂರು, ಪ್ರಭಾಕರ ಬಂಗೇರ ಕಾರ್ಕಳ, ಜಯ ವಿಕ್ರಮ ಮಂಗಳೂರು, ಹರಿಕೃಷ್ಣ ಬಂಟ್ವಾಳ್ ಪದ್ಮನಾಭ ಬೆಳುವಾಯಿ, ಗಣೇಶ್ ಎಲ್. ಪೂಜಾರಿ ಬೈಂದೂರು, ಪರಮೇಶ್ವರ ಪೂಜಾರಿ, ಎಚ್.ವಿ.ಕೋಟ್ಯಾನ್, ಸದಾನಂದ ಪೂಜಾರಿ ಮಾನಂಪಾಡಿ, ಉಮೇಶ್ ಪೂಜಾರಿ ಬಡಗುಹಿತ್ಲು, ಹರೀಶ್ ನೀರುಮಾರ್ಗ, ಶಿಕ್ಷಕಿ ಪಲ್ಲವಿ ರಾಜೇಶ್ ಹಳೆಯಂಗಡಿ, ಪತ್ರಕರ್ತ ನರೇಂದ್ರ ಕೆರೆಕಾಡು, ಚೇತನ್ ಪಾಟೀಲ್, ಚಂದ್ರಶೇಖರರನ್ನು ಸನ್ಮಾನಿಸಲಾಯಿತು.
ಬ್ರಹ್ಮಶ್ರೀ ನಾರಾಯಣಗುರು ಸ್ವಾಮಿ ಕನ್ನಡ ಚಲನಚಿತ್ರದ ಸಿಡಿಯನ್ನು ಅನಾವರಣಗೊಳಿಸಲಾಯಿತು.
ಬೆಳ್ತಂಗಡಿ ಕನ್ಯಾಡಿ ಕ್ಷೇತ್ರದ ಬ್ರಹ್ಮಾನಂದ ಸರಸ್ವತಿ ಸ್ವಾಮೀಜಿ, ಶಿವಗಿರಿಯ ಸತ್ಯಾನಂದ ತೀರ್ಥ ಸ್ವಾಮೀಜಿ, ಸಚಿವರಾದ ಬಿ.ರಮಾನಾಥ ರೈ, ವಿನಯಕುಮಾರ್ ಸೊರಕೆ, ಕೆ.ಅಭಯಚಂದ್ರ ಜೈನ್, ಸಂಸದ ನಳಿನ್‌ಕುಮಾರ್ ಕಟೀಲು, ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಮಂಗಳೂರು ಉಪಮೇಯರ್ ಪುರುಷೋತ್ತಮ ಚಿತ್ರಾಪುರ, ಮುಂಬೈ ಬಿಲ್ಲವ ಅಸೋಸಿಯೇಶನ್‌ನ ನಿತ್ಯಾನಂದ ಡಿ. ಕೋಟ್ಯಾನ್, ಮೂಲ್ಕಿ ಬಿಲ್ಲವ ಸಂಘದ ಅಧ್ಯಕ್ಷ ಹರಿಶ್ಚಂದ್ರ ಸಾಲ್ಯಾನ್, ಯುವವಾಹಿನಿ ಕೇಂದ್ರ ಸಮಿತಿಯ ಅಧ್ಯಕ್ಷ ಪ್ರೇಮ್‌ನಾಥ್, ಮೂಲ್ಕಿ ಪಟ್ಟಣ ಪಂಚಾಯಿತಿ ಅಧ್ಯಕ್ಷೆ ಮೀನಾಕ್ಷಿ ಬಂಗೇರ, ಕುದ್ರೋಳಿ ಕ್ಷೇತ್ರ ಎಚ್.ಎಸ್.ಸಾಯಿರಾಂ, ಕಟಪಾಡಿ ವಿಶ್ವನಾಥ ಕ್ಷೇತ್ರದ ಅಶೋಕ್ ಸುವರ್ಣ, ಕಂಕನಾಡಿ ಗರೋಡಿಯ ಚಿತ್ತರಂಜನ್, ನಾರಾಯಣಗುರು ಅರ್ಬನ್ ಕೋ.ಬ್ಯಾಂಕ್‌ನ ಹೆಚ್.ಟಿ.ಪೂಜಾರಿ, ಗೋಕರ್ಣನಾಥ ಬ್ಯಾಂಕ್‌ನ ಗೋಪಾಲಕೃಷ್ಣ, ಉಡುಪಿ ಮೂರ್ತೆದಾರರ ಮಾಹಾಮಂಡಲದ ಪಿ.ಕೆ.ಸದಾನಂದ, ದಕ್ಷಿಣ ಕನ್ನಡದ ಸಂಜೀವ ಪೂಜಾರಿ, ಬೆಂಗಳೂರು ಬಿಲ್ಲವ ಅಸೋಸಿಯೇಶನ್‌ನ ವೇದಕುಮಾರ್, ಚಲನಚಿತ್ರ ನಟ ರಾಜಶೇಖರ್ ಕೋಟ್ಯಾನ್, ಭಾರತ್ ಬ್ಯಾಂಕ್‌ನ ಸಿ.ಆರ್.ಮೂಲ್ಕಿ, ಮುಂಬೈಯ ಉದ್ಯಮಿ ಚಿನ್ನಯ್ಯ ಗೌಡ, ಮಹಾಮಂಡಲದ ಉಪಾಧ್ಯಕ್ಷ ಪಿತಾಂಬರ ಹೆರಾಜೆ ಬೆಳ್ತಂಗಡಿ, ಸಹ ಕಾರ್ಯದರ್ಶಿ ಸುದರ್ಶನ್ ಉಡುಪಿ, ಕೋಶಾಧಿಕಾರಿ ಯು. ನಾರಾಯಣ ಉಡುಪಿ, ಸಹ ಕೋಶಾಧಿಕಾರಿ ಸದಾಶಿವ ಎನ್.ಆರ್.ಪುರ, ಕ್ರೀಡಾ ಸಂಚಾಲಕ ಯೋಗೀಶ್‌ಕುಮಾರ್ ಬೆಳ್ತಂಗಡಿ, ವಕ್ತಾರ ಹರಿಕೃಷ್ಣ ಬಂಟ್ವಾಳ್ ಉಪಸ್ಥಿತರಿದ್ದರು.
ಉಪಾಧ್ಯಕ್ಷ ಪ್ರಭಾಕರ ಬಂಗೇರ ಪ್ರಸ್ತಾವನೇಗೈದರು, ಚಿತ್ರಾ ಸುವರ್ಣ ಮತ್ತು ಸುಗಂದಿ ಸತೀಶ್ ಪ್ರಾರ್ಥಿಸಿದರು, ಗೌರವ ಪ್ರಧಾನ ಕಾರ್ಯದರ್ಶಿ ಮೋಹನದಾಸ್ ಪಾವೂರು ಭಂಡಾರಮನೆ ಸ್ವಾಗತಿಸಿದರು, ಸಹ ಕಾರ್ಯದರ್ಶಿ ಗಣೇಶ್ ಎಲ್. ಪೂಜಾರಿ ಬೈಂದೂರು ವಂದಿಸಿದರು, ಪತ್ರಕರ್ತ ನರೇಂದ್ರ ಕೆರೆಕಾಡು ಮತ್ತು ಪಲ್ಲವಿ ರಾಜೇಶ್ ಹಳೆಯಂಗಡಿ ಕಾರ್ಯಕ್ರಮ ನಿರೂಪಿಸಿದರು.
ಪೂಜಾರಿ ಭಾಷಣದಲ್ಲಿ….
ಜನಾರ್ದನ ಪೂಜಾರಿ ತಮ್ಮ ಭಾಷಣದಲ್ಲಿ ಕಾಂಗ್ರೇಸ್ ಪಕ್ಷದಲ್ಲಿ ತಮ್ಮ ಮೇಲಿನ ಅಶಿಸ್ತಿನ ಬಗ್ಗೆ, ಮನಪಾದ ಆಯುಕ್ತರನ್ನು ವರ್ಗಾವಣೆ ನಡೆಸುತ್ತಿರುವ ಗುತ್ತಿಗೆದಾರರ ಬಗ್ಗೆ, ಸಿದ್ಧರಾಮಯ್ಯರ ವಿವಿಧ ಯೋಜನೆಗಳು, ತಮ್ಮ ಮಾತಿನ ನಿಷ್ಠುರತೆಯನ್ನು ಎಳೆ ಎಳೆಯಾಗಿ ಬಹಿರಂಗವಾಗಿ ಹೇಳಿಕೊಂಡಿದ್ದು ವಿಶೇಷವಾಗಿತ್ತು.
ವರದಿ : ನರೇಂದ್ರ ಕೆರೆಕಾಡು