ಕನ್ನಡ ವಾರ್ತೆಗಳು

ಇಸ್ಲಾಂನ ಸಂದೇಶವನ್ನು ಅನುಕರಣೆ ಮಾಡಿ ಜೀವಿಸುವವರಿಗೆ ಮಾತ್ರ ಸ್ವರ್ಗ ಮೀಸಲು : ಅಲ್ ಬುಖಾರಿ ಬಾಯಾರ್

Pinterest LinkedIn Tumblr

ullala_urur_APUsthad_1

ಉಳ್ಳಾಲ.ಎ.24 : ಕುರಾನ್ ಮತ್ತು ಹದೀಸ್‌ನ್ನು ಕಲಿತು ಇಸ್ಲಾಂನ ಸಂದೇಶವನ್ನು ಅನುಕರಣೆ ಮಾಡಿ ಜೀವಿಸುವವರಿಗೆ ಮಾತ್ರ ಸ್ವರ್ಗ ಮೀಸಲಿಟ್ಟಿದೆ. ಇದನ್ನು ವಿರೋಧಿಸಿ ನಡೆಯುವ ಕೂಟ ನಮ್ಮದಲ್ಲ ಎಂದು ಪ್ರವಾದಿಯವರು ಈ ಹಿಂದೆಯೇ ಹೇಳಿದ್ದರು. ಪ್ರಸಕ್ತ ಪ್ರವಾದಿಯವರ ಕುಟುಂಬಕ್ಕೆ ವಿರುದ್ಧವಾಗಿ ನಡೆಯುವವರು ಇದ್ದಾರೆ. ಸಾದಾತ್‌ಗಳನ್ನು ಪಂಡಿತರನ್ನು ಅವಹೇಳನ ಮಾಡಿಬೇಡಿ ಅವರ ಜೀವದಲ್ಲಿ ವಿಷವಿದೆ, ಅಂತಹ ಕೆಲಸ ಮಾಡುವವರಿಗೆ ಪರಲೋಕದಲ್ಲಿ ರಕ್ಷಣೆ ಸಿಗದು ಎಂದು ಅಸ್ಸಯ್ಯದ್ ಅಬ್ದುಲ್ ರಹ್ಮಾನ್ ಇಂಬಿಚ್ಚಿಕೋಯ ತಂಙಳ್ ಅಲ್ ಬುಖಾರಿ ಬಾಯಾರ್ ಹೇಳಿದರು. ಅವರು ಉಳ್ಳಾಲ ಉರೂಸ್ ಪ್ರಯುಕ್ತ ಬುಧವಾರ ನಡೆದ ಧಾರ್ಮಿಕ ಉಪನ್ಯಾಸ ನೀಡಿ ಮಾತನಾಡಿದರು.

ಇಸ್ಲಾಂ ಧರ್ಮದ ಸಂದೇಶ ಸಾರಲು ಲಕ್ಷಾಂತರ ಪ್ರವಾದಿಗಳು ಭೂಲೋಕಕ್ಕೆ ಬಂದಿದ್ದರು. ಅದರಲ್ಲಿ ಕೊನೆಯ ಪ್ರವಾದಿ ಆಗಿದ್ದಾರೆ. ಪ್ರವಾದಿ ಮಹಮ್ಮದ್‌ರವರಾಗಿದ್ದರು. ಅವರು ಕೊನೆ ಗಳಿಗೆಯಲ್ಲಿ ಸಾರಿದ ಸಂದೇಶ ಈಗ ವಿಶ್ವಕ್ಕೆ ತಲುಪಿದೆ. ಅದನ್ನು ಅರ್ಥೈಸಿಕೊಂಡು ಅದರ ಪ್ರಕಾರ ಜೀವಿಸುವ ಕರ್ತವ್ಯ ನಮ್ಮದಾಗಿದೆ. ಮುಸ್ಲಿಂ ಮಹಿಳೆಯವರು ಪ್ರವಾದಿಯವರ ಸಂದೇಶವನ್ನು ಮೀರಿ ಪ್ರಸಕ್ತ ನಡೆಯುತ್ತಿದ್ದಾರೆ. ಇದು ಎಂದಿಗೂ ಸಲ್ಲದು ಎಂದರು. ಪೇರೋಡ್ ಅಬ್ದುಲ್ ರಹ್ಮಾನ್ ಸಖಾಫಿ ಧಾರ್ಮಿಕ ಉಪನ್ಯಾಸ ನೀಡಿದರು.

ullala_urur_APUsthad_2 ullala_urur_APUsthad_3 ullala_urur_APUsthad_4 ullala_urur_APUsthad_5 ullala_urur_APUsthad_6

ಉಳ್ಳಾಲ ಖಾಝಿಫಝಲ್ ಕೋಯಮ್ಮ ತಂಙಳ್ ಅಧ್ಯಕ್ಷತೆ ವಹಿಸಿದ್ದರು. ಉಳ್ಳಾಲ ದರ್ಗಾ ಅಧ್ಯಕ್ಷ ಅತಿಥಿಗಳನ್ನು ಸ್ವಾಗತಿಸಿದರು.ಅಹ್ಮದ್ ಬಾವಾ ಮುಸ್ಲಿಯಾರ್ ದುವಾ ನೆರವೇರಿಸಿದ ರು. ಕೇಂದ್ರ ಜುಮಾ ಮಸೀದಿ ಖತೀಬ್ ಅಬ್ದುಲ್ ರವೂಫ್, ಮೂಸಲ್ ಮದನಿ, ಬಿ.ಎಸ್. ಹಾಶಿರ್ ಮದನಿನಗರ, ಮದನಿ ನಗರ ಮಸೀದಿ ಅಧ್ಯಕ್ಷ ಮಹಮ್ಮದ್, ಉಪಾಧ್ಯಕ್ಷ ಅಶ್ರಫ್ ಮದನಿನಗರ ಕಾರ್ಯದರ್ಶಿ ಎಂ.ಎಚ್.ಮಲಾರ್, ಅಬ್ದುಲ್ ಅಝೀಝ್ ಮದನಿನಗರ, ಸಲಾಹುದ್ದೀನ್ ಸಖಾಫಿ ಮಾಡನ್ನೂರು, ಅಬ್ದುಲ್ ಖಾದರ್ ಸಖಾಫಿ ಮಂಜನಾಡಿ, ಪಟ್ಟಾಂಬಿ ಮಹಮ್ಮದ್ ಮದನಿ,ರಶೀದ್ ಮದನಿ, ಸುಲೈಮಾನ್ ಸಖಾಫಿ ಮೊದಲಾದವರು ಉಪಸ್ಥಿತರಿದ್ದರು.

Write A Comment