ಕನ್ನಡ ವಾರ್ತೆಗಳು

ಮುಂಬಯಿ : ರೋನ್ಸ್ ಬಂಟ್ವಾಳ್ ಅವರ ಪರಿಕಲ್ಪನೆಯಲ್ಲಿ ವಿಶಿಷ್ಠವಾಗಿ ಮೂಡಿಬಂದ ಕನ್ನಡ ಪತ್ರಕರ್ತರ ಸಮಾವೇಶ – ಮೂರುದಿನಗಳ ಅದ್ಭುತ ಕ್ಷಣಗಳಿಗೆ ತೆರೆ

Pinterest LinkedIn Tumblr

Mumbai_Conference_1

ವರದಿ ಹಾಗೂ ಚಿತ್ರ : ಸತೀಶ್ ಕಾಪಿಕಾಡ್

ಮುಂಬಯಿ : ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಮತ್ತು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಸಂಸ್ಥೆಗಳ ಸಹಯೋಗದೊಂದಿಗೆ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ಕಪಸಮ) ಸಂಸ್ಥೆಯು ಆಯೋಜಿಸಿರುವ ರಾಷ್ಟ್ರದ ಪ್ರಪ್ರಥಮ “ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶ” ಕನ್ನಡಿಗ ಪತ್ರಕರ್ತರ ಸಂಘ, ಮಹಾರಾಷ್ಟ್ರ ಇದರ ಗೌರವ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ಮಾಧ್ಯಮ ಅಕಾಡೆಮಿ 2014ನೇ ವಾರ್ಷಿಕ ಪ್ರಶಸ್ತಿಗೆ ಭಾಜನರಾದ ಹಿರಿಯ ಪತ್ರಕರ್ತ ರೋನ್ಸ್ ಬಂಟ್ವಾಳ್‌ರವರ ನೇತ್ರತ್ವದಲ್ಲಿ ಇತ್ತೀಚಿಗೆ ಮುಂಬಯಿಯಲ್ಲಿ ನಡೆಯಿತು.

ಮುಂಬಯಿಯಲ್ಲಿ ಮೂರು ದಿನಗಳ ಕಾಲ ಹಮ್ಮಿಕೊಳ್ಳಲಾದ ಈ ಸಮಾವೇಶದ ಉದ್ಘಾಟನಾ ಸಮಾರಂಭ ಮುಂಬಯಿ ಉಪನಗರದ ಥಾಣೆ ಪಶ್ಚಿಮದ ಹೊಟೇಲ್ ಧೀರಜ್‌ನ ದಿ| ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ವೇದಿಕೆಯಲ್ಲಿ ನಡೆಯಿತು. ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಅವರ ಸಮ್ಮೇಳನಾಧ್ಯಕ್ಷತೆಯಲ್ಲಿ ನಡೆದ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶವನ್ನು ಥಾಣೆ ಶಾಸಕ ಪ್ರತಾಪ್ ಸರ್‌ನಾಯ್ಕ್ ಅವರು ದೀಪ ಪ್ರಜ್ವಲಿಸುವ ಮೂಲಕ ಉದ್ಘಾಟಿಸಿದರು. ಮುಖ್ಯ ಅತಿಥಿಯಾಗಿ ಮರಾಠಿ ಪತ್ರಕಾರ್ ಸಂಘ್, ಮುಂಬಯಿ ಇದರ ಅಧ್ಯಕ್ಷ ದೇವದಾಸ್ ಎಲ್.ಮಠಾಲೆ ಭಾಗವಹಿಸಿದ್ದರು.

Mumbai_Conference_2 Mumbai_Conference_3 Mumbai_Conference_4 Mumbai_Conference_5 Mumbai_Conference_6 Mumbai_Conference_7 Mumbai_Conference_8

ಗೌರವ ಅತಿಥಿಗಳಾಗಿ ರಿಪೋರ್ಟರ್‍ಸ್ ಗೀಲ್ಡ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ ಪ್ರಭಾಕರ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ನಿಕಟಪೂರ್ವ ಅಧ್ಯಕ್ಷ ಗಂಗಾಧರ ಮೊದಲಿಯಾರ್, ಕರ್ನಾಟಕ ಮಾಧ್ಯಮ ಅಕಾಡೆಮಿ ಅಧ್ಯಕ್ಷ ಶ್ರೀ ಪೊನ್ನಪ್ಪ, ಮಂತ್ರಾಲಯ ಮತ್ತು ವಿಧಿ ಮಂಡಳ್ ವಾರ್ತಾಹಾರ್ ಸಂಘದ ಕಾರ್ಯದರ್ಶಿ ಚಂದ್ರಕಾಂತ್ ಶಿಂಧೆ, ವಿಡಿಯಾ ಸ್ಪೋರ್ಟ್ಸ್ ಅಕಾಡೆಮಿ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ಕೆಲ್ವಿನ್ ಜೋಶ್ವಾ, ವಿಜಯ ಕರ್ನಾಟಕ ದೈನಿಕದ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ಯು.ಕೆ ಕುಮಾರನಾಥ್, ಉದಯವಾಣಿ ಮಂಗಳೂರು ಸುದ್ಧಿ ವಿಭಾಗದ ಮುಖ್ಯಸ್ಥ ಮನೋಹರ್ ಪ್ರಸಾದ್, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ, ಮುಂಬಯಿ ಪತ್ರಕರ್ತರ ಸಂಘದ ಡಾ| ಸುನೀತಾ ಎಂ.ಶೆಟ್ಟಿ, ಉದ್ಯಮಿಗಳಾದ ಬೊಳ್ಯಗುತ್ತು ವಿವೇಕ್ ಶೆಟ್ಟಿ, ಎಂ.ಬಿ ಕುಕ್ಯಾನ್, ಕೆ. ಭೋಜರಾಜ್ ಅತ್ತೂರು ಶಿವರಾಮ ಕೆ.ಭಂಡಾರಿ, ಎನ್.ಕೆ ಬಿಲ್ಲವ ನಾವುಂದ, ಕೆ.ಪಿ ಶೇಖರ್ ಎಲ್.ಶೆಟ್ಟಿ, ಶಿವ ಮೂಡಿಗೆರೆ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಡಾ| ಜಿ.ಎನ್ ಉಪಾಧ್ಯ, ಸುರೇಶ್ ಎಸ್.ಭಂಡಾರಿ ಕಡಂದಲೆ ಮತ್ತಿತರರು ಉಪಸ್ಥಿತರಿದ್ದರು.

Mumbai_Conference_75 Mumbai_Conference_76 Mumbai_Conference_77 Mumbai_Conference_78 Mumbai_Conference_79 Mumbai_Conference_80 Mumbai_Conference_81 Mumbai_Conference_82 Mumbai_Conference_83 Mumbai_Conference_84 Mumbai_Conference_85 Mumbai_Conference_86 Mumbai_Conference_88 Mumbai_Conference_89 Mumbai_Conference_90 Mumbai_Conference_91 Mumbai_Conference_92 Mumbai_Conference_97 Mumbai_Conference_96 Mumbai_Conference_95 Mumbai_Conference_94 Mumbai_Conference_93 Mumbai_Conference_98 Mumbai_Conference_99 Mumbai_Conference_100 Mumbai_Conference_101 Mumbai_Conference_102 Mumbai_Conference_108 Mumbai_Conference_106 Mumbai_Conference_105 Mumbai_Conference_104 Mumbai_Conference_103 Mumbai_Conference_109 Mumbai_Conference_110 Mumbai_Conference_111 Mumbai_Conference_112 Mumbai_Conference_113 Mumbai_Conference_114 Mumbai_Conference_115 Mumbai_Conference_116 Mumbai_Conference_117 Mumbai_Conference_118

Mumbai_Conference_87 Mumbai_Conference_107

ಮಂಗಳೂರು ಪತ್ರಿಕಾ ಭವನ ಟ್ರಸ್ಟ್ ಅಧ್ಯಕ್ಷ ಬಿ.ರವೀಂದ್ರ ಶೆಟ್ಟಿ, ದ.ಕ.ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಯದರ್ಶಿ ಶ್ರೀನಿವಾಸ್ ಇಂದಾಜೆ, ಉಪಾಧ್ಯಕ್ಷ ವೆಂಕಟೇಶ್ ಬಂಟ್ವಾಳ್, ಉದಯವಾಣಿ ಪತ್ರಿಕೆಯ ಛಾಯಗ್ರಾಹಕ ಸತೀಶ್ ಇರಾ, ದೈಜಿವರ್ಲ್ಡ್ ಡಾಟ್ ಕಾಮ್ ನ ಛಾಯಗ್ರಾಹಕ ದಯಾ ಕುಕ್ಕಾಜೆ, ದೈಜಿವರ್ಲ್ಡ್ ವಾಹಿನಿಯ ಛಾಯಗ್ರಾಹಕ ಜೀವನ್, ಟಿ.ವಿ.9 ನ ವಿಲ್ಫ್ರೆಡ್ ಡಿ’ಸೋಜ, ನಮ್ಮ ಟಿ.ವಿ ವಾಹಿನಿಯ ಶಿವು, ಅರ್ ಎನ್ ಎನ್ ಲೈವ್ ನ ಪ್ರಜ್ನಾ ಶೆಟ್ಟಿ, ಕರಾವಳಿ ಅಲೆ ಪತ್ರಿಕೆಯ ಇಂದಿರಾ, ವಿಜಯವಾಣಿಯ ಹರೀಶ್ ಮೋಟುಕಾನ್, ಉದಯ ಟಿವಿಯ ಕ್ಯಾಮರ ಮ್ಯಾನ್ ಪ್ರಶಾಂತ್,  ಹಿರಿಯ ಪತ್ರಕರ್ತರಾದ ಶೇಖರ್ ಅಜೇಕರ್, ಛಾಯಗ್ರಾಹಕ ನಾಗೇಶ್ ಪೊಳಲಿ, ಉದಯವಾಣಿ ಬೆಳ್ತಂಗಡಿ ವರದಿಗಾರ ಲಕ್ಷ್ಮೀ ಮಚ್ಚಿನ, ಬಂಟ್ವಾಳ, ಪುತ್ತೂರು, ಸುಳ್ಯ ತಾಲೂಕುಗಳ ಪತ್ರಕರ್ತರಾದ ಮೌನೀಶ್ ವಿಶ್ವಕರ್ಮ, ಕಿಶೋರ್ ಪೆರಾಜೆ, ಹರಿಶ್, ದೇವಣ್ಣ ಹಾಗೂ ಕನ್ನಡಿಗ ವರ್ಲ್ಡ್ ಡಾಟ್ ಕಾಮ್ ನ ಮಂಗಳೂರು (ಕರಾವಳಿ) ವಿಭಾಗದ ಮುಖ್ಯಸ್ಥ ಹಾಗೂ ಕರ್ನಾಟಕ ಪತ್ರಕರ್ತರ ಸಂಘ (Karnataka Journalists Union (R)) ದ ದ.ಕ.ಜಿಲ್ಲಾ ಘಟಕದ ಪ್ರಧಾನ ಕಾರ್ಯದರ್ಶಿ ಸತೀಶ್ ಕಾಪಿಕಾಡ್ ಸೇರಿದಂತೆ ದ.ಕ.ಜಿಲ್ಲೆಯಿಂದ ಸುಮಾರು 30ಕ್ಕೂ ಹೆಚ್ಚು ಪತ್ರಕರ್ತರು ತಮ್ಮ ಕುಟುಂಬದವರೊಂದಿಗೆ ಈ ಸಮಾವೇಶದಲ್ಲಿ ಪಾಲ್ಗೊಂಡಿದ್ದರು.

Mumbai_Conference_119 Mumbai_Conference_120 Mumbai_Conference_121 Mumbai_Conference_122 Mumbai_Conference_123 Mumbai_Conference_124 Mumbai_Conference_125 Mumbai_Conference_126 Mumbai_Conference_127 Mumbai_Conference_128 Mumbai_Conference_129 Mumbai_Conference_130

ಸಂವಾದ – ಮಾತುಕತೆ – ಜೊತೆಗೆ ಮುಂಬಯಿಯ ಪ್ರಸಿದ್ಧ ಹಾಗೂ ವಿಶೇಷ ಸ್ಥಳಗಳ ಸಂದರ್ಶನ

ಸಮಾವೇಶದ ಮೊದಲನೇ ದಿನ ಉದ್ಘಾಟನೆ – ವೇದಿಕೆಯಲ್ಲಿದ್ದ ಅಧ್ಯಕ್ಷರ ಹಾಗೂ ಅತಿಥಿಗಳ ಭಾಷಣ – ಬಳಿಕ ಮಹಾ ಸಂವಾದ – ಮಾತುಕತೆ – ಈ ನಡುವೆ ಸಮಾವೇಶದಲ್ಲಿ ಭಾಗವಹಿಸಲು ಬಂದಂತಹ ಅತಿಥಿಗಣ್ಯರ ಪರಿಚಯ. ಸಂಜೆ ಥಾಣೆಯ ಹೋಟೆಲ್ ರತ್ನಾ ಪಾರ್ಕ್‌ನಲ್ಲಿ ಅತಿಥಿಗಣ್ಯರ ಜೊತೆ ಸ್ನೇಹ ಕೂಟ

ಸಮಾವೇಶದ ಎರಡನೇ ದಿನ ಬೆಳಿಗ್ಗೆ ಥಾಣೆಯಿಂದ ಗೇಟ್ ಆಪ್ ಇಂಡಿಯಾ (Gateway of India) ಕ್ಕೆ ಎರಡು ಗಂಟೆಗಳ ಪಯಣ – ಗೇಟ್ ಆಪ್ ಇಂಡಿಯಾ ಹಾಗೂ ತಾಜ್ ಹೊಟೇಲ್‌ (The Taj Mahal Palace Hotel) ನ ದರ್ಶನದ ಬಳಿಕ ಅಲ್ಲಿಂದ ಎಲಿಫೆಂಟಾ ಕೇವ್ಸ್ ದ್ವೀಪ (Elephanta Caves island) ಕ್ಕೆ ಸಮುದ್ರದಲ್ಲಿ ಲಾಂಚ್ ಮೂಲಕ ಎರಡು ಗಂಟೆಗಳ ಪಯಣ – ಮಧ್ಯಾಹ್ನ ಎಲಿಫೆಂಟಾ ಕೇವ್ಸ್ ದ್ವೀಪದಲ್ಲಿ ಅತೀ ಎತ್ತರದಲ್ಲಿರುವ ಶಿವನ ಗುಹೆಯ ಸಮೀಪದ ಬಯಲಿನಲ್ಲಿ ಮತ್ತೆ ಸಂವಾದ ಮತ್ತು ಮಾತುಕತೆ. – ಬಳಿಕ ಮಧ್ಯಾಹ್ನ ಭೋಜನ ಮುಗಿಸಿ ಶಿವನ ಗುಹೆಯ ದರ್ಶನ. – ಸಂಜೆ ಮತ್ತೆ ಲಾಂಚ್ ಮೂಲಕ ಗೇಟ್ ಆಪ್ ಇಂಡಿಯಾಕ್ಕೆ ಪಯಣ – ಅಲ್ಲಿಂದ ಥಾಣೆಯಲ್ಲಿ ನಾವು ಉಳಿದುಕೊಂಡಿದ್ದ ಹೊಟೇಲ್ ಧೀರಜ್‌ಗೆ ಪ್ರಯಾಣ. ರಾತ್ರಿ 8.30ಕ್ಕೆ ಧೀರಜ್‌ ಹೊಟೇಲ್ ತಲುಪಿದ ಬಳಿಕ 9 ಗಂಟೆಯಿಂದ ರಾತ್ರಿ 10.30ರ ತನಕ ರಾತ್ರಿ ಊಟ.‌

ಸಮಾವೇಶದ ಮೂರನೇ ದಿನ ಬೆಳಿಗ್ಗೆ 8.30ಕ್ಕೆ ಅತೀ ದೊಡ್ಡ ಥೀಮ್ ಪಾರ್ಕ್ ಇಮೇಜಿಕಾಕ್ಕೆ ಎರಡು ಗಂಟೆಗಳ ಪಯಣ – ವಿಳಾಸ : Adlabs Imagica Theme Park – 30/31, Sangdewadi, Khopoli-Pali Road, SH 92, Off Mumbai-Pune Express Way, Tal-Khalapur, Dist-Raigad, Khopoli, Maharashtra 410203) – ಕರಾವಳಿಯವರೇ ಆದ ಮನ್‌ಮೋಹನ್ ಶೆಟ್ಟಿಯವರ ಪರಿಕಲ್ಪನೆಯಲ್ಲಿ ಸುಮಾರು 200 ಎಕ್ರೆಗೂ ಹೆಚ್ಚು ಪ್ರದೇಶದಲ್ಲಿ ನಿರ್ಮಾಣಗೊಂಡಿರುವ ಇಮೇಜಿಕಾದಲ್ಲಿ ಸಂಪೂರ್ಣ ಮನೋರಂಜನೆ ಪಡೆಯಬೇಕಾದರೆ ಕಡಿಮೆಯೆಂದರೂ 10 ದಿನವಾದರೂ ಬೇಕು. ಆದರೆ ನಮಗೆ ಕೊಟ್ಟ ಒಂದು ದಿನದಲ್ಲಿ ನಾವು ನಮಗೆ ಸಾಧ್ಯವಾದಷ್ಟು ರೀತಿಯಲ್ಲಿ ಮನೋರಂಜನೆ ಪಡೆದೆವು.

ಈ ಕಡಿಮೆ ಅವಧಿಯ ನಡುವೆಯೂ ನಮಗೆಲ್ಲಾ ಒಂದು ವಿಶಿಷ್ಟ ಹಾಗೂ ಅಶ್ಚರ್ಯಕರವಾದ ಕಾರ್ಯಕ್ರಮವೊಂದನ್ನು ರೋನ್ಸ್ ಬಂಟ್ವಾಳ್ ಅವರು ಅಯೋಜಿಸಿದ್ದರು. ಅದು ಮಧ್ಯಾಹ್ನ ಓರ್ವ ವಿಶೇಷ ವ್ಯಕ್ತಿಯ ಜೊತೆ ಸಂವಾದ ಕಾರ್ಯಕ್ರಮವನ್ನು ಏರ್ಪಡಿಸಿದ್ದರು. ಬಾಲಿವುಡ್ ನಲ್ಲಿ ತನ್ನದೇ ಆದ ವಿಶಿಷ್ಠ ವ್ಯಕ್ತಿತ್ವ ಹಾಗೂ ಸಾಧನೆಗಳ ಮೂಲಕ ಪ್ರಸಿದ್ಧಿ ಪಡೆದಿರುವ ಹಾಗೂ ಅದ್ಭುತ ಇಮೇಜಿಕದ ಚೆಯರ್‌ಮ್ಯಾನ್ ಆಗಿರುವ ಶ್ರೀ ಮನ್‌ಮೋಹನ್ ಶೆಟ್ಟಿಯವರ ಜೊತೆ ನೇರವಾಗಿ ಮಾತನಾಡಿಸುವ ಒಂದು ಅದ್ಭುತ ಅವಕಾಶವನ್ನು ರೋನ್ಸ್ ಅವರು ನಮಗೆ ಕಲ್ಪಿಸಿದ್ದರು. ತುಂಬಾ ಸರಳ ವ್ಯಕ್ತಿತ್ವದ ಮನ್‌ಮೋಹನ್ ಶೆಟ್ಟಿಯವರು ನಮ್ಮೆಲ್ಲರ ಜೊತೆ ಬೆರೆತು ತಮ್ಮ ಅನುಭವವನ್ನು ಹಂಚಿಕೊಂಡರು.ಮಾತ್ರವಲ್ಲದೇ ಇಂಥ ಓರ್ವ ವಿಶೇಷ ವ್ಯಕ್ತಿಯ ಜೊತೆ ನಿಂತು ಛಾಯಚಿತ್ರ ತೆಗೆಯುವ ಅವಕಾಶವನ್ನು ಕಲ್ಪಿಸಿದ್ದು ನಮ್ಮ ಅದೃಷ್ಟವೆಂದೇ ಹೇಳ ಬಹುದು.

ರಾತ್ರಿ 8.00 ಗಂಟೆಗೆ ಇಮೇಜಿಕದಿಂದ ಮತ್ತೆ ನಾವು ತಂಗಿದ್ದ ಹೊಟೇಲ್‌ಗೆ ಪಯಣ…. ಅಲ್ಲಿಗೆ ನಮ್ಮ ಮೂರುದಿನಗಳ ಅದ್ಭುತ ಕ್ಷಣಗಳಿಗೆ ತೆರೆ…. ಬಾರವಾದ ಮನಸ್ಸಿನಿಂದ ರಾತ್ರಿ 10.00 ಗಂಟೆಗೆ ಹೊಟೇಲ್ ಧೀರಜ್‌ ತಲುಪಿದೆವು…

ಮರುದಿನ ಬೆಳಿಗ್ಗೆ ಎಲ್ಲರಿಗೂ ಮುಂಬಾಯಿಯಲ್ಲಿ ಶಾಪಿಂಗ್ ಮಾಡುವ ಅವಕಾಶ ಕಲ್ಪಿಸಲಾಗಿತ್ತು… ಆದರೆ ಮಧ್ಯಾಹ್ನ 12 ಗಂಟೆಗೆ ಮಂಗಳೂರಿಗೆ ಹಿಂತಿರುಗಲು ಬಸ್ಸ್ ರೆಡಿ ಇತ್ತು.. ಈ ಹಿನ್ನೆಲೆಯಲ್ಲಿ ಮುಂಬಾಯಿಯಂತಹ ಮಹಾನಗರದಲ್ಲಿ ಶಾಪಿಂಗ್ ಮಾಡಲು ಸಿಕ್ಕಿರುವ ಸಮಯ ಬಹಳ ಕಡಿಮೆಯಾಯಿತು ಎನ್ನುವ ಗೊಣಗು ಪ್ರತಿಯೊಬ್ಬರಲ್ಲೂ… ಆದರೆ ಅದು ಪ್ರೀತಿಯ ಗೊಣಗು ಆಗಿತ್ತು..

ನಾಲ್ಕನೆ ದಿನ ಮಧ್ಯಾಹ್ನ 12 ಗಂಟೆಗೆ ಮತ್ತೆ ಮಂಗಳೂರಿಗೆ ಪಯಣ ಆರಂಭ… ಮನಸ್ಸಿಲ್ಲದಿದ್ದರೂ ಅನಿವಾರ್ಯವಾಗಿ ಹಿಂತಿರುಗಲೇ ಬೇಕು… ಐದನೇ ದಿನ ಬೆಳಿಗ್ಗೆ 7 ಗಂಟೆಗೆ ಮಂಗಳೂರು ತಲುಪಿದೆವು… ಬಸ್ಸಿನಿಂದ ಇಳಿದು ಅಲ್ಲಿಂದ ಭಾರವಾದ ಹೃದಯದೊಂದಿಗೆ ಭಾರವಾದ ಲಗೇಜ್ ಹಿಡಿದುಕೊಂಡು ಮನೆಯ ಕಡೆ ಪಯಣ… ಅಲ್ಲಿಗೆ ಮುಗಿಯಿತು ನಮ್ಮ ಮುಂಬಯಿ ಯಾನ… ಈ ಹಿಂದೆ ನಾವು ಅನೇಕ ಬಾರಿ ಮುಂಬಯಿಗೆ ಬೇಟಿ ನೀಡಿದ್ದರೂ… ಈ ಒಂದು ಸಮಾವೇಶದಲ್ಲಿ ಸಿಕ್ಕಿದಷ್ಟು ಖುಷಿ ಹಾಗೂ ಮನೋರಂಜನೆ ನಮಗೆ ಯಾವತ್ತೂ ಸಿಕ್ಕಿರಲಿಲ್ಲ.

ಈ ಎಲ್ಲಾ ಸಡಗರದ ಮಧ್ಯೆ ಮುಂಬಯಿ ಸಮಾವೇಶದಲ್ಲಿ ನಮಗೆ ಹಾಗೂ  ನಮ್ಮ  (ಪತ್ರಕರ್ತರ) ಫ್ಯಾಮಿಲಿಗೂ ಭಾಗವಹಿಸಲು ಅವಕಾಶ ಕಲ್ಪಿಸಿದಂತಹ ಈ ವಿಶೇಷ ಸಮಾವೇಶದ ರೂವಾರಿ ರೋನ್ಸ್ ಬಂಟ್ವಾಳ್ ಅವರಿಗೆ ಕೃತಜ್ಞತೆ ಸಲ್ಲಿಸಲು ನಾವು ಮರೆಯಲಿಲ್ಲ.

ಸಮಾವೇಶದ ಅನುಭವದ ಬಗ್ಗೆ ಬರೆಯಲು ಇನ್ನೂ ತುಂಬಾ ವಿಷಯವಿದೆ. ಆದರೆ ಸಮಯಾವಕಾಶ ತುಂಬ ಕಡಿಮೆ ಇರುವುದರಿಂದ ಹೆಚ್ಚಿನ ವಿಷಯವನ್ನು ಈ ಮೂಲಕ ಹಂಚಿಕೊಳ್ಳಲು ಸಾದ್ಯವಾಗುತಿಲ್ಲ. ಓದುಗರಿಗೆ ಧನ್ಯವಾದಗಳು.

ಸಮಾವೇಶದ ಸಂದರ್ಭದಲ್ಲಿ ರೋನ್ಸ್ ಬಂಟ್ವಾಳ್ ಅವರು ನಮಗಾಗಿ ಅಯೋಜಿಸಿದ ಐತಿಹಾಸಿಕ ಹಾಗೂ ವಿಶೇಷ ಸ್ಥಳ ಸ್ಥಳಗಳ ಬೇಟಿ ಸಂದರ್ಭ ನಮ್ಮ ಮನೋರಂಜನೆಯ ಕ್ಷಣಗಳ ಕೆಲವೊಂದು ಚಿತ್ರಗಳು ಇಲ್ಲಿವೆ.

Mumbai_Conference_9 Mumbai_Conference_10 Mumbai_Conference_11 Mumbai_Conference_13 Mumbai_Conference_13` Mumbai_Conference_14 Mumbai_Conference_15 Mumbai_Conference_16 Mumbai_Conference_17 Mumbai_Conference_19 Mumbai_Conference_20 Mumbai_Conference_21 Mumbai_Conference_22 Mumbai_Conference_23 Mumbai_Conference_24 Mumbai_Conference_25 Mumbai_Conference_26 Mumbai_Conference_36 Mumbai_Conference_35 Mumbai_Conference_34 Mumbai_Conference_30 Mumbai_Conference_27 Mumbai_Conference_37 Mumbai_Conference_38 Mumbai_Conference_39 Mumbai_Conference_40 Mumbai_Conference_41 Mumbai_Conference_48 Mumbai_Conference_47

Mumbai_Conference_12 Mumbai_Conference_18 Mumbai_Conference_44 Mumbai_Conference_46

Mumbai_Conference_45 Mumbai_Conference_43 Mumbai_Conference_42 Mumbai_Conference_49 Mumbai_Conference_50 Mumbai_Conference_51 Mumbai_Conference_52 Mumbai_Conference_53 Mumbai_Conference_58 Mumbai_Conference_57 Mumbai_Conference_56 Mumbai_Conference_55 Mumbai_Conference_54 Mumbai_Conference_59 Mumbai_Conference_60 Mumbai_Conference_61 Mumbai_Conference_62 Mumbai_Conference_63 Mumbai_Conference_68 Mumbai_Conference_67 Mumbai_Conference_66 Mumbai_Conference_65 Mumbai_Conference_64 Mumbai_Conference_69 Mumbai_Conference_70 Mumbai_Conference_71 Mumbai_Conference_72 Mumbai_Conference_73 Mumbai_Conference_74

Mumbai_Conference_131 Mumbai_Conference_132 Mumbai_Conference_133 Mumbai_Conference_134 Mumbai_Conference_135 Mumbai_Conference_137 Mumbai_Conference_138 Mumbai_Conference_139 Mumbai_Conference_140 Mumbai_Conference_141 Mumbai_Conference_142 Mumbai_Conference_143 Mumbai_Conference_145 Mumbai_Conference_146 Mumbai_Conference_147 Mumbai_Conference_148 Mumbai_Conference_149

Mumbai_Conference_28 Mumbai_Conference_29

Mumbai_Conference_155 Mumbai_Conference_159 Mumbai_Conference_163

Mumbai_Conference_31 Mumbai_Conference_32 Mumbai_Conference_33

Mumbai_Conference_144

Mumbai_Conference_154 Mumbai_Conference_156 Mumbai_Conference_157 Mumbai_Conference_158 Mumbai_Conference_161 Mumbai_Conference_162 Mumbai_Conference_164 Mumbai_Conference_166 Mumbai_Conference_167

Mumbai_Conference_160

Mumbai_Conference_168 Mumbai_Conference_169 Mumbai_Conference_170 Mumbai_Conference_171 Mumbai_Conference_172 Mumbai_Conference_173 Mumbai_Conference_177 Mumbai_Conference_178 Mumbai_Conference_179 Mumbai_Conference_180 Mumbai_Conference_181 Mumbai_Conference_182 Mumbai_Conference_183 Mumbai_Conference_184 Mumbai_Conference_189 Mumbai_Conference_190 Mumbai_Conference_191 Mumbai_Conference_192 Mumbai_Conference_193 Mumbai_Conference_194 Mumbai_Conference_195 Mumbai_Conference_196 Mumbai_Conference_197 Mumbai_Conference_198 Mumbai_Conference_199 Mumbai_Conference_200 Mumbai_Conference_201 Mumbai_Conference_202 Mumbai_Conference_203 Mumbai_Conference_204 Mumbai_Conference_205 Mumbai_Conference_206 Mumbai_Conference_207 Mumbai_Conference_208 Mumbai_Conference_209 Mumbai_Conference_215 Mumbai_Conference_216 Mumbai_Conference_219 Mumbai_Conference_220 Mumbai_Conference_225 Mumbai_Conference_226 Mumbai_Conference_227 Mumbai_Conference_229 Mumbai_Conference_230 Mumbai_Conference_231 Mumbai_Conference_232 Mumbai_Conference_233 Mumbai_Conference_234 Mumbai_Conference_235 Mumbai_Conference_236 Mumbai_Conference_237 Mumbai_Conference_238 Mumbai_Conference_239 Mumbai_Conference_240 Mumbai_Conference_241 Mumbai_Conference_242 Mumbai_Conference_243 Mumbai_Conference_244 Mumbai_Conference_245 Mumbai_Conference_246 Mumbai_Conference_247 Mumbai_Conference_248 Mumbai_Conference_249 Mumbai_Conference_250 Mumbai_Conference_251 Mumbai_Conference_253 Mumbai_Conference_254 Mumbai_Conference_255 Mumbai_Conference_256 Mumbai_Conference_257 Mumbai_Conference_258 Mumbai_Conference_259 Mumbai_Conference_261 Mumbai_Conference_271 Mumbai_Conference_273 Mumbai_Conference_274 Mumbai_Conference_275 Mumbai_Conference_276 Mumbai_Conference_277 Mumbai_Conference_278 Mumbai_Conference_279 Mumbai_Conference_280 Mumbai_Conference_281 Mumbai_Conference_282 Mumbai_Conference_283 Mumbai_Conference_284 Mumbai_Conference_285 Mumbai_Conference_286 Mumbai_Conference_287 Mumbai_Conference_288 Mumbai_Conference_289 Mumbai_Conference_290 Mumbai_Conference_291

Mumbai_Conference_136 Mumbai_Conference_165 Mumbai_Conference_174 Mumbai_Conference_175 Mumbai_Conference_176 Mumbai_Conference_185 Mumbai_Conference_186 Mumbai_Conference_187 Mumbai_Conference_188 Mumbai_Conference_210 Mumbai_Conference_211 Mumbai_Conference_212 Mumbai_Conference_213 Mumbai_Conference_214 Mumbai_Conference_217 Mumbai_Conference_218 Mumbai_Conference_221 Mumbai_Conference_222 Mumbai_Conference_223 Mumbai_Conference_224 Mumbai_Conference_228 Mumbai_Conference_252 Mumbai_Conference_260 Mumbai_Conference_272

ವಾಣಿಜ್ಯ ನಗರಿಯಲ್ಲಿ ರಾಷ್ಟ್ರದ ಪ್ರಥಮ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶ : ಮರಾಠಿ-ಕನ್ನಡಿಗರು ಸಹೋದರರಂತೆ ಬಾಳೋಣ: ಶಾಸಕ ಸರ್‌ನಾಯ್ಕ್

ಮುಂಬಯಿ :(ದಿ| ಕರ್ಕಿ ವೆಂಕಟರಮಣ ಶಾಸ್ತ್ರಿ ಸೂರಿ ವೇದಿಕೆ) ಮಹಾರಾಷ್ಟ್ರದ ಶಾಸಕನಾದರೂ ಮುಂಬಯಿ ಕನ್ನಡಿಗರ ಸಮುದಾಯದ ಜೊತೆ ನಿಕಟ ಸಂಪರ್ಕ ಇಟ್ಟು ಕೊಂಡವ ನಾನು. ಇಂದು ನನ್ನದೇ ಕ್ಷೇತ್ರದಲ್ಲಿ ಅಖಿಲಭಾರತ ಕನ್ನಡಿಗ ಪತ್ರಿಕಾ ಸಮಾವೇಶವನ್ನು ಉದ್ಘಾಟಿಸುವ ಅವಕಾಶಸಿಕ್ಕಿದ್ದು ಅಪೂರ್ವ ಭಾಗ್ಯ. ನಿಮ್ಮ ಸಂಘಟನೆಗೆ ಭವಿಷ್ಯದ ಎಲ್ಲಾ ಯೋಜನೆಗಳಿಗೆ ನೆರವಾಗಲು ಒಬ್ಬ ಮರಾಠಿಸೋದರನಾಗಿ ನಾನಿದ್ದೇನೆ. ಭವಿಷ್ಯತ್ತಿನ್ನುದ್ದಕ್ಕೂ ನಾವೆಲ್ಲರೂ ಮರಾಠಿ-ಕನ್ನಡಿಗರು ಸಹೋದರರಂತೆ ಬಾಳೋಣ ಎಂದು ಥಾಣೆ ಶಾಸಕ ಪ್ರತಾಪ್ ಸರ್‌ನಾಯ್ಕ್ ನುಡಿದರು.

ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ (ಕಪಸಮ) ಸಂಸ್ಥೆಯು ಆಯೋಜಿಸಿರುವ ರಾಷ್ಟ್ರದ ಪ್ರಪ್ರಥಮ ಅಖಿಲ ಭಾರತ ಕನ್ನಡ ಪತ್ರಕರ್ತರ ಸಮಾವೇಶವನ್ನು ದೀಪ ಪ್ರಜ್ವಲಿಸಿ ಉದ್ಘಾಟಿಸಿ ಸರ್‌ನಾಯ್ಕ್ ಮಾತನಾಡಿದರು.

Mumbai_Conference_262 Mumbai_Conference_263 Mumbai_Conference_264 Mumbai_Conference_266 Mumbai_Conference_268 Mumbai_Conference_269 Mumbai_Conference_270

ಕರ್ನಾಟಕ ಮಾಧ್ಯಮ ಅಕಾಡೆಮಿ ಬೆಂಗಳೂರು, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ಮತ್ತು ಕನ್ನಡ ವಿಭಾಗ ಮುಂಬಯಿ ವಿಶ್ವವಿದ್ಯಾಲಯ ಸಂಸ್ಥೆಗಳ ಸಹಯೋಗದೊಂದಿಗೆ ಮುಂಬಯಿ ಉಪನಗರದ ಥಾಣೆ ಪಶ್ಚಿಮದ ಹೊಟೇಲ್ ಧೀರಜ್‌ನಲ್ಲಿ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಸಂಸ್ಥೆಯ ಅಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ಸಮ್ಮೇಳನಾಧ್ಯಕ್ಷತೆಯಲ್ಲಿ ಆಯೋಜಿಸಲಾಗಿರುವ ತ್ರಿದಿನಗಳ ಪತ್ರಕರ್ತರ ಸಮಾವೇಶದಲ್ಲಿ ಮುಖ್ಯ ಅತಿಥಿಯಾಗಿ ಮರಾಠಿ ಪತ್ರಕಾರ್ ಸಂಘ್ ಮುಂಬಯಿ ಅಧ್ಯಕ್ಷ ದೇವದಾಸ್ ಎಲ್.ಮಠಾಲೆ ಉಪಸ್ಥಿತರಿದ್ದರು.

ಗೌರವ ಅತಿಥಿಗಳಾಗಿ ರಿಪೋರ್ಟರ್‍ಸ್ ಗೀಲ್ಡ್ ಅಧ್ಯಕ್ಷ ಹಾಗೂ ಕರ್ನಾಟಕ ರಾಜ್ಯದ ಮುಖ್ಯಮಂತ್ರಿಗಳ ಮಾಧ್ಯಮ ಸಮನ್ವಯಾಧಿಕಾರಿ ಕೆ.ವಿ ಪ್ರಭಾಕರ್, ಕರ್ನಾಟಕ ರಾಜ್ಯ ಕಾರ್ಯನಿರತ ಪತ್ರಕರ್ತರ ಸಂಘ ಬೆಂಗಳೂರು ನಿಕಟಪೂರ್ವ ಅಧ್ಯಕ್ಷ ಗಂಗಾಧರ ಮೊದಲಿಯಾರ್, ಮಂತ್ರಾಲಯ ಮತ್ತು ವಿಧಿ ಮಂಡಳ್ ವಾರ್ತಾಹಾರ್ ಸಂಘದ ಕಾರ್ಯದರ್ಶಿ ಚಂದ್ರಕಾಂತ್ ಶಿಂಧೆ, ವಿಡಿಯಾ ಸ್ಪೋರ್ಟ್ಸ್ ಅಕಾಡೆಮಿ ಮಹಾರಾಷ್ಟ್ರ ಇದರ ಗೌ| ಪ್ರ| ಕಾರ್ಯದರ್ಶಿ ಕೆಲ್ವಿನ್ ಜೋಶ್ವಾ, ವಿಜಯ ಕರ್ನಾಟಕ ದೈನಿಕದ ಮಂಗಳೂರು ಆವೃತ್ತಿಯ ಸ್ಥಾನೀಯ ಸಂಪಾದಕ ಯು.ಕೆ ಕುಮಾರನಾಥ್, ಉದ್ಯಮಿಗಳಾದ ವಿಜಯ ಕರ್ನಾಟಕ ದೈನಿಕದ ಮಂಗಳೂರು ಆವೃತ್ತಿ ಸ್ಥಾನೀಯ ಸಂಪಾದಕ ಯು.ಕೆ ಕುಮಾರನಾಥ್, ಉದ್ಯಮಿಗಳಾದ ಬೊಳ್ಯಗುತ್ತು ವಿವೇಕ್ ಶೆಟ್ಟಿ, ಎಂ.ಬಿ ಕುಕ್ಯಾನ್, ಕೆ. ಭೋಜರಾಜ್ ಅತ್ತೂರು ಶಿವರಾಮ ಕೆ.ಭಂಡಾರಿ, ಎನ್.ಕೆ ಬಿಲ್ಲವ ನಾವುಂದ, ಕೆ.ಪಿ ಶೇಖರ್ ಎಲ್.ಶೆಟ್ಟಿ, ಶಿವ ಮೂಡಿಗೆರೆ, ಪತ್ರಕರ್ತರ ಸಂಘದ ಡಾ| ಸುನೀತಾ ಎಂ.ಶೆಟ್ಟಿ, ನ್ಯಾ| ಬಿ.ಮೋಹಿದ್ಧೀನ್ ಮುಂಡ್ಕೂರು, ಡಾ| ಜಿ.ಎನ್ ಉಪಾಧ್ಯ, ಸುರೇಶ್ ಎಸ್.ಭಂಡಾರಿ ಕಡಂದಲೆ, ಜಗನ್ನಾಥ ಶೆಟ್ಟಿ ಬಾಳ ಮತ್ತಿತರರು ಉಪಸ್ಥಿತರಿದ್ದರು.

Mumbai_Conference_150 Mumbai_Conference_151 Mumbai_Conference_153

Mumbai_Conference_152

ಪೊನ್ನಪ್ಪ ಮಾತನಾಡಿ ರಾಜ್ಯ ರಾಜ್ಯಗಳ ಪತ್ರಕರ್ತರ ನಡುವೆ ಸೇತುವೆಯಾಗಿ ದುಡಿಯುವ ಕನ್ನಡಿಗ ಪತ್ರಕರ್ತರ ಸಂಘ ಮಹಾರಾಷ್ಟ್ರ ಬಗ್ಗೆ ಅಭಿಮಾನ ಹೆಮ್ಮೆ ಎನ್ನಿಸುತ್ತಿದೆ. ಮಾಧ್ಯಮ ಅಕಾಡೆಮಿ ಕರ್ನಾಟಕ ಸರಕಾರಕ್ಕೆ ಸೇರಿದ್ದಾದರೂ ಪತ್ರಕರ್ತರ ಶ್ರೇಯೋಭಿವೃದ್ಧಿಗಾಗಿ ಕೆಲಸ ಮಾಡುತ್ತಿದೆ. ಪತ್ರಕರ್ತರ ಮಧ್ಯೆ ಸಹಕಾರ ವಿಚಾರ ವಿನಿಮಯ ಗುರುತಿಸುವಿಕೆ ಇದರ ಉದ್ದೇಶ. ಈಗಾಗಲೇ ಹೊರನಾಡ ಕನ್ನಡಿಗ ಪತ್ರಕರ್ತರನ್ನು ಗುರುತಿಸಿ ಗೌರವಿಸುವ ಕೆಲಸ ಮಾಡಿದ್ದೇವೆ, ಇದು ಮುಂದುವರಿಯಲಿದೆ ಎಂದು ಕರೆಯಿತ್ತರು.

ಸ್ವಂತ ನೆಲದಲ್ಲೂ ಇರುವ ಮರಾಠಿ ಪತ್ರಕರ್ತರಿಗಿಂತಲೂ ನಾವು ಕನ್ನಡಿಗ ಪತ್ರಕರ್ತರು ಹೆಚ್ಚು ಸಾಧನಶೀಲರು ಮತ್ತು ಪ್ರಭಾವಿಗಳು ಎಂದು ದೇವದಾಸ್ ಮಠಾಲೆ ನುಡಿದರು.

ಪ್ರಥಮ ಬಾರಿಗೆ ಒಳನಾಡು ಹೊರನಾಡು ಪತ್ರಕರ್ತರ ನಡುವಣ ಸಂವಹನಕ್ಕೆ ನಿಮ್ಮ ಈ ಪತ್ರಕರ್ತರ ಸಂಘಟನೆ ಹೇತುವಾಯಿತು. ನಿಮ್ಮಿಂದ ಸ್ಫೂರ್ತಿ ಪಡೆದು ನಾವೂ ಮಂಗಳೂರಿನಲ್ಲಿ ಸಮಾವೇಶ ಸಮ್ಮೇಳನ ಅಯೋಜಿಸುತ್ತೇವೆ, ನಿಮಗೆಲ್ಲ ಆಮಂತ್ರಿಸುತ್ತೇವೆ. ಅವಸರದ ಪತ್ರಿಕೋಧ್ಯಮ ವೃತ್ತಿಯ ಗುಣಮಟ್ಟವನ್ನು ಹಾಳುಗೆಡುತ್ತಿದೆ ಎಂದು ಮನೋಹರ್ ಪ್ರಸಾದ್ ನುಡಿಸಿದರು.

ದೇವರು ಕೊಟ್ಟ ಬುದ್ಧಿಮತೆ ಮತ್ತು ಸಂವಹನವನ್ನು ಪತ್ರಕರ್ತರು ಬಹಳ ವಿವೇಚನೆಯಿಂದ ಬಳಸಬೇಕು ಎಂದು ಬಿ.ವಿವೇಕ್ ಶೆಟ್ಟಿ ಆಶಯ ವ್ಯಕ್ತ ಪಡಿಸಿದರು.

ಪತ್ರಕರ್ತರು ಸದಾ ವಿದ್ಯಾರ್ಥಿಗಳಾಗಿರಬೇಕು. ಆದೇಶ ನೀಡುವವರಾಗಬಾರದು. ಸಮ್ಮೇಳನದ ಅಂದೋಲನೆಯ ಹಿಂದೆ ಶ್ರಮ ಇದೆ ಆದುದರಿಂದ ಸಂತೋಷವೂ ಆಗಿದೆ ಎಂದು ಸಮ್ಮೇಳನಾಧ್ಯಕ್ಷ ಚಂದ್ರಶೇಖರ ಪಾಲೆತ್ತಾಡಿ ತಿಳಿಸಿದರು.

Mumbai_Conference_265 Mumbai_Conference_267

ಕಪಸಮ ಗೌರವ ಪ್ರಧಾನ ಕಾರ್ಯದರ್ಶಿ ರೋನ್ಸ್ ಬಂಟ್ವಾಳ್ ಪ್ರಾಸ್ತವಿಕ ನುಡಿಗಳನ್ನಾಡಿ ಪತ್ರಿಕೋದ್ಯಮ ಒಂದು ಸಶಕ್ತ ಮಾಧ್ಯಮ. ದೇಶವನ್ನು ಕಟ್ಟುವ ಕಾಯಕದಲ್ಲಿ ಪತ್ರಕರ್ತರು ನಿರತರಾಗಿದ್ದಾರೆ. ಪ್ರಜೆಗಳ ನೋವು ನಲಿವುಗಳಿಗೆ ಸ್ಪಂದಿಸುವ ಪತ್ರಕರ್ತರು ಒಂದೆಡೆ ಸೇರಿ ಚಿಂತನ-ಮಂಥನ, ಆದಾನ ಪ್ರದಾನ ನಡೆಸುವಂತಾಗಲು ಈ ಸಮಾವೇಶದ ಉದ್ದೇಶವಾಗಿದೆ. ಕರ್ನಾಟಕ-ಮಹಾರಾಷ್ಟ್ರದ ನಡುವಿನ ಬಾಂದವ್ಯ ಹೆಚ್ಚಿಸುವ ನಿಟ್ಟಿನಿಂದಲೂ ಮುಖ್ಯಮಂತ್ರಿಗಳೊಂದಿ ಗೆ, ರಾಜ್ಯಪಾಲರೊಂದಿಗೆ ಮುಖಾಮುಖಿ ಕಾರ್ಯಕ್ರಮಗಳನ್ನು ಆಯೋಜಿಸಿದ್ದೇವೆ. ಭಾವೈಕ್ಯವನ್ನು ಬೆಸೆಯುವ ನಿಟ್ಟಿನಿಂದ ಈ ಸಮಾವೇಶ ಮಹತ್ವದ್ದಾಗಿದೆ. ಕನ್ನಡಿಗ ಪತ್ರಕರ್ತರ ಸಂಘ ಹೊರನಾಡಿನಲ್ಲಿ ಕನ್ನಡಿಗರ ಹಿತಕಾಯುವ ಕಾಯದಲ್ಲಿ ನಿರತವಾಗಿದೆ ಎಂದರು.

ಕಪಸಮ ಕಾರ್ಯಕಾರಿ ಸಮಿತಿ ಸದಸ್ಯ ಶ್ಯಾಮ್ ಎಂ.ಹಂಧೆ ಸ್ವಾಗತಿಸಿದರು. ಉಪಾಧ್ಯಕ್ಷ ದಯಾ ಸಾಗರ್ ಚೌಟ ಆಶಯ ಭಾಷಣಗೈದರು. ಗೌ| ಕಾರ್ಯದರ್ಶಿ ಹರೀಶ್ ಕೆ.ಹೆಜ್ಮಾಡಿ ಕಾರ್ಯಕ್ರಮ ನಿರೂಪಿಸಿದರು. ಜತೆ ಕಾರ್ಯದರ್ಶಿ ಪ್ರೇಮನಾಥ್ ಶೆಟ್ಟಿ ಮುಂಡ್ಕೂರು ವಂದಿಸಿದರು. ಸಮಾವೇಶದಲ್ಲಿ ಭಾರತ ರಾಷ್ಟ್ರದಾದ್ಯಂತದ ಇನ್ನೂರಕ್ಕೂ ಅಧಿಕ ಪತ್ರಕರ್ತರು, ಡಾ| ಪಿ.ಕೆ ಖಂಡೋಭ, ಪ್ರೊ| ಕೆ. ಚನ್ನಬಸವಪ್ಪ, ಲಕ್ಷಿ ಮಚ್ಚಿನ, ಬೆಳ್ತಂಗಡಿ, ಬಿ.ರವೀ೦ದ್ರ ಶೆಟ್ಟಿ ಮತ್ತು ಶ್ರೀನಿವಾಸ್ ನಾಯಕ್ ಇ೦ದಾಜೆ, ನ್ಯಾ| ವಸಂತ ಎಸ್.ಕಲಕೋಟಿ ಮತ್ತಿತರರು ಉಪಸ್ಥಿತರಿದ್ದರು.

1 Comment

Write A Comment