ಕನ್ನಡ ವಾರ್ತೆಗಳು

ಬ್ಯಾಂಕ್ ಖಾತೆಯಿಂದ ಹಣ ಎಗರಿಸಿದ ಇಂಟರ್ ನೆಟ್ ಹ್ಯಾಕರ್ ಗಳು.

Pinterest LinkedIn Tumblr

bank_hac_ker_1

ಮಂಗಳೂರು, ಏ.16:  ನಗರದ ವೈದ್ಯಕೀಯ ವಿದ್ಯಾರ್ಥಿಯೋರ್ವರ ಬ್ಯಾಂಕ್ ಖಾತೆಯಿಂದ 14000 ರೂ. ಗಳನ್ನು ಲಂಡನ್ ನಿಂದ ಇಂಟರ್ ನೆಟ್ ಕಳ್ಳರು ಎಗರಿಸಿದ್ದಾರೆ.

ಕೇರಳ ಮೂಲದ ನೈಮನ್ ಸಾಜನ್ ಇಲ್ಲಿಯ ಫಾ. ಮುಲ್ಲರ್ ಮೆಡಿಕಲ್ ಕಾಲೇಜಿನಲ್ಲಿ ದ್ವಿತೀಯ ವರ್ಷದ ಎಂಬಿಬಿಎಸ್ ವಿದ್ಯಾರ್ಥಿಯಾಗಿದ್ದಾರೆ. ಅವರು ಬೆಂಗಳೂರಿನಲ್ಲಿ ಬ್ಯಾಂಕ್ ಖಾತೆಯೊಂದನ್ನು ಹೊಂದಿದ್ದು, ಇಂಟರ್ ನೆಟ್ ಬ್ಯಾಂಕಿಂಗ್ ನಡೆಸುತ್ತಿದ್ದರು. ಏ.14ರಂದು ಲಂಡನ್ ಮೂಲದ ಹ್ಯಾಕರ್ ಗಳು ಅವರ ಬ್ಯಾಂಕ್ ಖಾತೆಗೆ ಕನ್ನ ಹಾಕಿ 14000 ರೂ.ಗಳನ್ನು ಡ್ರಾ ಮಾಡಿದ್ದಾರೆ. ಈ ಬಗ್ಗೆ ನಗರದ ಪಾಂಡೇಶ್ವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Write A Comment