ಕನ್ನಡ ವಾರ್ತೆಗಳು

ಕನಕದಾಸರ ಸಮಗ್ರ ಸಾಹಿತ್ಯ ಅನುವಾದ ಕಮ್ಮಟಕ್ಕೆ ಪ್ರೊ.ವಿವೇಕ ರೈ ಚಾಲನೆ

Pinterest LinkedIn Tumblr

kanaka_dasa_kammata

ಮಂಗಳೂರು, ಎ. 16 : ಕನ್ನಡದ ಸಾಹಿತ್ಯ ಇತರ ಭಾಷೆಗೆ ಅನುವಾದ ಸವಾಲಿನ ಕೆಲಸವಾದರೂ, ಇಂತಹ ಕಾರ್ಯದಿಂದ ಇತರ ಭಾಷೆಗಳ ಜನರು ಕನ್ನಡ ಸಾಹಿತ್ಯ ಅರಿಯಲು ಸಾಧ್ಯವಾಗುತ್ತದೆ ಎಂದು ಹಿರಿಯ ವಿದ್ವಾಂಸ ಡಾ.ಬಿ.ಎ.ವಿವೇಕ ರೈ ಹೇಳಿದ್ದಾರೆ. ನಗರದ ಬಲ್ಮಠದಲ್ಲಿರುವ ಕರ್ನಾಟಕ ಥಿಯೋಲಾಜಿಕಲ್ ಕಾಲೇಜಿನ ಸಹೋದಯ ಸಭಾಭವನದಲ್ಲಿ ಬುಧವಾರ ನಡೆದ ಕನಕದಾಸರ ಸಮಗ್ರ ಸಾಹಿತ್ಯ ಅನುವಾದ ಕಮ್ಮಟಕ್ಕೆ ಚಾಲನೆ ನೀಡಿ ಅವರು ಮಾತನಾಡುತ್ತಿದ್ದರು.

ಬೇರೆ ಭಾಷೆಗಳಿಂದ ಬಹಳಷ್ಟು ಕೃತಿಗಳು ಕನ್ನಡಕ್ಕೆ ಅನುವಾದವಾಗುತ್ತಿವೆ. ಆದರೆ ಕನ್ನಡದಿಂದ ಬೇರೆ ಭಾಷೆಗಳಿಗೆ ಅನುವಾದ ನಡೆಸಲು ಸಾಧ್ಯವಾಗ ದಿರುವುದು ಕನ್ನಡ ಸಾಹಿತ್ಯ ವಲಯಕ್ಕೆ ಎದುರಾಗಿರುವ ಸವಾಲು ಎಂದವರು ಬೇಸರಿಸಿದರು. ಅನುವಾದಕರು, ಸಂಶೋಧಕರು ಜನಪ್ರಿಯತೆ ಯೆಡೆಗೆ ಮುಖಮಾಡದೆ ಸಂತರ ರೀತಿಯಲ್ಲಿ ಕೆಲಸ ಮಾಡಬೇಕು. ಕಾವ್ಯವನ್ನು ಓದಿ, ಗ್ರಹಿಸಿ ಅನುವಾದ ಮಾಡಬೇಕು. ಮಾತ್ರವಲ್ಲದೆ ನಿಘಂಟಿನ ಸಹಾಯವಿಲ್ಲದೆ ಭಾವಾರ್ಥವನ್ನು ಅರಿತು ಅನುವಾದ ಮಾಡಿದಾಗ ಓದುಗರಲ್ಲಿ ಸಾಹಿತ್ಯ ಸಂವಹನ ಸಾಧ್ಯವಾಗುತ್ತದೆ ಎಂದು ಡಾ.ರೈ ಹೇಳಿದರು.

ಕನ್ನಡದಲ್ಲಿ ಪಂಪನಿಂದ ಆರಂಭವಾಗಿ ಇಲ್ಲಿಯವರೆಗೆ ಹಲವಾರು ಶ್ರೇಷ್ಠ ಸಾಹಿತ್ಯ ಪ್ರಕಾರಗಳು ಬಂದಿವೆ. ಆದರೆ ಬೇರೆ ಭಾಷೆಗೆ ನಮ್ಮತನವನ್ನು ಕೆೊಂಡೊಯ್ಯುವ ಸಂಕಲ್ಪ ನಮ್ಮಿಂದ ಸಾಕಷ್ಟು ಮಟ್ಟ ದಲ್ಲಿ ಆಗಿಲ್ಲ. ಈ ಬಗ್ಗೆ ಚಿಂತನೆಯ ಅಗತ್ಯವಿದೆ. ಒಂದು ಭಾಷೆಯಿಂದ ಇನ್ನೊಂದು ಭಾಷೆಗೆ ಅಕ್ಷರಗಳ ನೆಲೆಯಲ್ಲಿ ಭಾಷಾಂತರ ಮಾಡುವ ಸಂದರ್ಭ ಜಾಗರೂಕತೆ ಅಗತ್ಯ. ಭಾಷೆಯ ಜತೆಗೆ ಅಲ್ಲಿನ ಸಮಗ್ರತೆಯನ್ನು ಕೃತಿಯಲ್ಲಿ ಕಾಣುವಂತಹ ಅನುವಾದದ ವ್ಯವಸ್ಥೆಯನ್ನು ಹೊಂದಿರಬೇಕು ಎಂದು ಅವರು ವಿಶ್ಲೇಷಿದರು. ಅಧ್ಯಕ್ಷತೆ ವಹಿಸಿದ್ದ ಥಿಯೋ ಲಾಜಿಕಲ್ ಕಾಲೇಜಿನ ಪ್ರಾಂಶುಪಾಲ ಡಾ.ಹನಿ ಕಬ್ರಾಲ್ ಮಾತನಾಡಿ, ಪುರಂದರದಾಸ ಮತ್ತು ಕನಕದಾಸರ ತ್ರಿಪದಿಗಳನ್ನು ನೋಡಿ ಬಹಳಷ್ಟು ಕೀರ್ತನೆಗಳ ರಚನೆಗೆ ಪ್ರೇರಣೆ ದೊರಕಿವೆ. ಮೊಗ್ಲಿಂಗ್ ಕೂಡಾ ಕನಕದಾಸರ ಗೀತೆಗಳನ್ನು ಜರ್ಮನ್ ಭಾಷೆಗೆ ಭಾಷಾಂತರಿಸಿದ್ದಾರೆ ಎಂಬುದನ್ನು ಈ ವೇಳೆ ನೆನಪಿಸಿಕೊಂಡರು. ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ಸಮನ್ವ ಯಾಧಿಕಾರಿ ಕಾ.ತ.ಚಿಕ್ಕಣ್ಣ ಪ್ರಾಸ್ತಾವಿಕವಾಗಿ ಮಾತ ನಾಡಿದರು. ತುಳು ಭಾಷಾ ಸಂಪಾದಕ ಡಾ.ಎ.ವಿ. ನಾವಡ ಕಾರ್ಯಕ್ರಮ ನಿರೂಪಿಸಿದರು.

ಬೆಂಗಳೂರಿನ ರಾಷ್ಟ್ರೀಯ ಸಂತಕವಿ ಕನಕದಾಸ ಅಧ್ಯಯನ ಮತ್ತು ಸಂಶೋಧನಾ ಕೇಂದ್ರ ವತಿಯಿಂದ ತುಳು, ಕೊಂಕಣಿ, ಬ್ಯಾರಿ, ಮಲೆಯಾಳಂ ಭಾಷೆಗಳ ಅನುವಾದ ಕುರಿತು ಕಮ್ಮಟ ಆಯೋಜಿಸಲಾಗಿತ್ತು.

Write A Comment