ಕನ್ನಡ ವಾರ್ತೆಗಳು

ಕೋಟದ ಕಾರಂತ ಭವನ ನಿಜಕ್ಕೂ ಸೂಪರ್: ಕಾರಂತರ ಆದರ್ಶ ಪಾಲನೆಯಾಗಬೇಕು; ಸಚಿವ ಆರ್.ವಿ. ದೇಶಪಾಂಡೆ

Pinterest LinkedIn Tumblr

ಕುಂದಾಪುರ: ಕೋಟದಲ್ಲಿ ಡಾ. ಶಿವರಾಂ ಕಾರಂತ ಅವರ ಹೆಸರಿನಲ್ಲಿ ನಿರ್ಮಾಣಗೊಂಡ ಡಾ. ಕೋಟ ಶಿವರಾಂ ಕಾರಂತ ಥೀಂ ಪಾರ್ಕ್ ಅಭೂತಪೂರ್ವ ಕಲ್ಪನೆಯಾಗಿದ್ದು, ಇದರ ನಿರ್ವಹಣೆ ಮಾಡುತ್ತಿರುವ ಸ್ಥಳಿಯ ಪಂಚಾಯತ್ ಕಾರ್ಯ ಅಭಿನಂದನಾರ್ಹ. ಕಾರಂತರ ಆದರ್ಶಗಳು ಎಲ್ಲೆಡೆ ಪಾಲನೆಯಾಗಬೇಕಾಗಿದ್ದು, ಕೋಟದ ಕಾರಂತ ಥೀಂ ಪಾರ್ಕಿಗೆ ಈ ಸಾಲಿನಲ್ಲಿ ಬಿಡುಗಡೆಯಾದ 1 ಕೋಟಿ ರೂ.ವನ್ನು ಶೀಘ್ರ ಬಿಡುಗಡೆಗೊಳಿಸುವ ಬಗ್ಗೆ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಉನ್ನತ ಶಿಕ್ಷಣ ಹಾಗೂ ಪ್ರವಾಸೋಧ್ಯಮ ಸಚಿವ ಆರ್.ವಿ. ದೇಶಪಾಂಡೆ ಹೇಳಿದ್ದಾರೆ.

ಅವರು ಬುಧವಾರ ಕೋಟದ ಕಾರಂತ ಥೀಂ ಪಾರ್ಕಿಗೆ ಭೇಟಿ ನೀಡಿದ ಸಂದರ್ಭ ಮಾತನಾಡಿದರು.

R.V. Deshapande_Kota_Karantha park (13) R.V. Deshapande_Kota_Karantha park (4) R.V. Deshapande_Kota_Karantha park (3) R.V. Deshapande_Kota_Karantha park (1) R.V. Deshapande_Kota_Karantha park (2) R.V. Deshapande_Kota_Karantha park (8) R.V. Deshapande_Kota_Karantha park (7) R.V. Deshapande_Kota_Karantha park (6) R.V. Deshapande_Kota_Karantha park (9) R.V. Deshapande_Kota_Karantha park (11) R.V. Deshapande_Kota_Karantha park (10) R.V. Deshapande_Kota_Karantha park (12) R.V. Deshapande_Kota_Karantha park (5) R.V. Deshapande_Kota_Karantha park R.V. Deshapande_Kota_Karantha park (14)

ಕಾರಂತ ಥೀಂ ಪಾರ್ಕಿನ ಮುಂಭಾಗದಲ್ಲಿರುವ ಡಾ. ಶಿವರಾಮ ಕಾರಂತರ ಪ್ರತಿಮೆಗೆ ಹೂ ಮಾಲೆ ಅರ್ಪಿಸಿದ ಅವರು ಥೀಂ ಪಾರ್ಕಿನ ಒಳಭಾಗದಲ್ಲಿರುವ ಗ್ರಂಥಾಲಯ, ಸಭಾಂಗಣವನ್ನು ಕಂಡು ಮೆಚ್ಚುಗೆ ವ್ಯಕ್ತಪಡಿಸಿದರು.

ಕೋಟ ಅಮ್ರಥೇಶ್ವರಿ ದೇವಳಕ್ಕೆ ಭೇಟಿ: ಹಲವು ಮಕ್ಕಳ ತಾಯಿ ಎಂದೇ ಕರೆಯಲ್ಪಡುವ ಕೋಟದ ಶ್ರೀ ಅಮ್ರಥೇಶ್ವರೀ ದೇವಳಕ್ಕೆ ಭೇಟಿ ನೀಡಿದ ಸಚಿವರು ದೇವಳದಲ್ಲಿ ವಿಶೇಷ ಪೂಜೆ ಸಲ್ಲಿಸಿದರು. ಈ ಸಂದರ್ಭ ದೇವಳದ ವ್ಯವಸ್ಥಾಪನ ಸಮಿತಿ ಅಧ್ಯಕ್ಷ ಆನಂದ ಸಿ. ಕುಂದರ್ ಸಚಿವರನ್ನು ಭರಮಾಡಿಕೊಂಡರು.

ಈ ಸಂದರ್ಭದಲ್ಲಿ ವಿಧಾನಪರಿಷತ್ ಸದಸ್ಯ ಕೋಟ ಶ್ರೀನಿವಾಸ ಪೂಜಾರಿ, ಕೋಟತಟ್ಟು ಗ್ರಾಮಪಂಚಾಯತ್ ಅಧ್ಯಕ್ಷೆ ಶೋಭಾ, ಕೋಟ ಗ್ರಾ.ಪಂ. ಅಧ್ಯಕ್ಷ ಶಿವ ಪೂಜಾರಿ, ಕಾಂಗ್ರೆಸ್ ಮುಖಂಡ ಮಲ್ಯಾಡಿ ಶಿವರಾಂ ಶೆಟ್ಟಿ ಮೊದಲಾದವರಿದ್ದರು.

Write A Comment