ಕನ್ನಡ ವಾರ್ತೆಗಳು

ಎ.12 : ರೊಜಾರಿಯೊ ಕೆಥೆಡ್ರಲ್‌ಗೆ ಶತಮಾನೋತ್ಸವ ಸಂಭ್ರಮ

Pinterest LinkedIn Tumblr

rosario_churc_photo_1

ಮಂಗಳೂರು,ಎ.08  : ರೊಜಾರಿಯೊ ಚರ್ಚ್ ಕೆನರಾ ಕರಾವಳಿ ಕ್ರೈಸ್ತರ ಪರಂಪರೆಯಲ್ಲಿ ಅತೀ ಮಹತ್ವದ ಹಾಗೂ ಮೂಲ ಮಾತೆಯ ಸ್ವರೂಪ ಹಾಗೂ ಗೌರವ ಹೊಂದಿರುವ ದೇವಾಲಯ. ಕನ್ನಡ ಕರಾವಳಿಯ ಎಲ್ಲ ಕ್ಯಾಥೋಲಿಕರಿಂದ ‘ರುಜಾಯ್ ಮಾಂಯ್’ ಎಂದು ಕರೆಯಲ್ಪಡುತ್ತದೆ. 1568ರಲ್ಲಿ ಮಂಗಳೂರಿನಲ್ಲಿ ಕ್ರೈಸ್ತರ ಮೂಲ ಧಾರ್ಮಿಕ ಕೇಂದ್ರ ಸ್ಥಾಪನೆಗೊಂಡು, 1915ರಲ್ಲಿ ಸ್ಥಾಪನೆಯಾಗಿರುವ ಅದರ ಧಾರ್ಮಿಕ ಕಟ್ಟಡವಾಗಿರುವ ರೊಜಾರಿಯೊ ಕೆಥೆಡ್ರಲ್‌ನ ಶತಮಾನೋತ್ಸವ ಸಂಭ್ರಮ ಏ.12ರಂದು ನಡೆಯಲಿದೆ.

ಏ.9ರಿಂದ ಸಂಭ್ರಮ ಆರಂಭಗೊಳ್ಳಲಿದ್ದು, 12ರಂದು ಸಂಜೆ 4.30ಕ್ಕೆ ನಡೆಯುವ ಧಾರ್ಮಿಕ ಬಲಿಪೂಜೆಯಲ್ಲಿ ಮಂಗಳೂರು ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ, ಉಡುಪಿ ಬಿಷಪ್ ಡಾ.ಜೆರಾಲ್ಡ್ ಐಸಾಕ್ ಲೋಬೊ ಹಾಗೂ ಇತರ ಆರು ಬಿಷಪ್‌ಗಳು ಭಾಗವಹಿಸಲಿದ್ದಾರೆ ಎಂದು ಚರ್ಚ್ ಪಾಲನಾ ಸಮಿತಿ ಧರ್ಮಗುರು ಜೆ.ಬಿ. ಕ್ರಾಸ್ತ ಸುದ್ದಿಗೋಷ್ಠಿಯಲ್ಲಿ ತಿಳಿಸಿದರು.

12ರಂದು ಸಂಜೆ ಆರು ಗಂಟೆಗೆ ನಡೆಯುವ ಶತಮಾನೋತ್ಸವದ ಸಮಾರೋಪದಲ್ಲಿ ಬಿಷಪ್ ಡಾ.ಅಲೋಶಿಯಸ್ ಪೌಲ್ ಡಿಸೋಜ ಅಧ್ಯಕ್ಷತೆ ವಹಿಸಲಿದ್ದು, ಮಾಜಿ ಶಾಸಕಿ ಒಕ್ಟೋವಿಯಾ ಅಲ್ಬುಕರ್ಕ್ ಹಾಗೂ ಧರ್ಮ ಪ್ರಾಂತ್ಯದ ಪದಾಧಿಕಾರಿಗಳು ಮುಖ್ಯ ಅತಿಥಿಗಳಾಗಿ ಸಚಿವರಾದ ಬಿ. ರಮಾನಾಥ ರೈ, ಯು.ಟಿ.ಖಾದರ್, ಸಂಸದರಾದ ಆಸ್ಕರ್ ಫರ್ನಾಂಡಿಸ್, ನಳಿನ್ ಕುಮಾರ್ ಕಟೀಲ್ ಮತ್ತಿತರರು ಭಾಗವಹಿಸಲಿದ್ದಾರೆ ಎಂದರು.

rosario_churc_photo_2 rosario_churc_photo_3 rosario_churc_photo_4 rosario_churc_photo_5 rosario_churc_photo_6

ಸುಂದರ ಚರ್ಚ್: ರೊಸಾರಿಯೊ ಚರ್ಚ್, ಕರಾವಳಿ ಕರ್ನಾಟಕ ಅಲ್ಲದೇ, ದೇಶದ ಅತೀ ಸುಂದರ ಬೈಜಾಂಟಾಯ್ನ್ ಹಾಗೂ ರೋಮನ್ ವಾಸ್ತುಶಿಲ್ಪಗಳ ಸಂಗಮದ ಫಲ. ರೋಮ್‌ನ ಸೈಂಟ್ ಪೀಟರ್ ಬಾಸಿಲಿಕಾದ ಮಾದರಿಯಲ್ಲಿ ಇದನ್ನು ನಿರ್ಮಿಸಲಾಗಿದೆ. ಪರಮ ಪೀಠದ ಮೇಲೆ ಎದ್ದು ನಿಂತಿರುವ ಮಹಾಗುಮ್ಮಟ ತಾಯಿ ಮೈಲು ದೂರದಿಂದಲೇ ಭಕ್ತಾದಿಗಳನ್ನು ತನ್ನತ್ತ ಕೈಬೀಸಿ ಕರೆಯಲು ಎದ್ದು ನಿಂತಿರುವಂತಿದೆ.

12 ಕೇಂದ್ರ ಕಮಾನುಗಳು, 50 ಕೂಟ ಕಮಾನುಗಳು, 48 ಬೃಹತ್ ಕಮಾನುಗಳು ಹಾಗೂ 45 ಕಿರು ಕಮಾನುಗಳಿಂದ ಶೋಭಿಸುತ್ತಿದೆ. ದೇವಾಲಯದ ಪಾದಬುಡದಲ್ಲಿ ಪೋರ್ಚುಗೀಸ್ ಅರಸ್ ಪಟ್ಟ ಸಂಕೇತ ಶಿಲೆ ಇದೆ. ರೊಜಾರಿಯೋದ ಗಂಟೆಗಳು ಲೋಕ ಪ್ರಸಿದ್ಧ. ಪ್ರತಿ ವರ್ಷದ ಮೊದಲನೇ ಭಾನುವಾರ ಮಿಲಾಗ್ರಿಸ್‌ನಿಂದ ರೊಜಾರಿಯೊ ತನಕ ಧರ್ಮಪ್ರಾಂತ್ಯದ ಪುನರ್‌ಸಮರ್ಪಣಾ ಪರಮಪ್ರಸಾದ ಯಾತ್ರೆ ಸಾಗುವಾಗ ಸುಮಾರು ಒಂದು ಗಂಟೆಗೂ ಹೆಚ್ಚು ಸಮಯ ವಿಶಿಷ್ಟ ರೀತಿಯಲ್ಲಿ ಇವುಗಳನ್ನು ಬಾರಿಸಲಾಗುತ್ತದೆ ಎಂದು ಅವರು ಮಾಹಿತಿ ನೀಡಿದರು.

ಚರ್ಚ್ ಸಹಾಯಕ ಧರ್ಮಗುರು ಫಾದರ್ ಅಮಿತ್ ರಾಡ್ರಿಗಸ್, ಪಾಲನಾ ಸಮಿತಿ ಉಪಾಧ್ಯಕ್ಷ ಡೋಲ್ಫಿ ಡಿಸೋಜ, ಕಾರ್ಯದರ್ಶಿ ಜೋನ್ ಡಿಸಿಲ್ವ, ಫೋರ್‌ವಿಂಡ್ಸ್ ಜಾಹೀರಾತು ಸಂಸ್ಥೆ ನಿರ್ದೇಶಕ ಇ.ಫರ್ನಾಂಡಿಸ್ ಸುದ್ದಿಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

ಕೆಥೆಡ್ರಲ್ ಅಂದರೆ ಪೀಠ :  ‘ಕೆಥೆಡ್ರಲ್’ ಎಂಬ ಇಂಗ್ಲಿಷ್ ಶಬ್ದ ‘ಕಾಥೆದ್ರಾ’ ಎಂಬ ಲ್ಯಾಟಿನ್ ಶಬ್ದದಿಂದ ಬಂದಿದೆ. ಕಾಥೆದ್ರಾ ಅಂದರೆ ಪೀಠ, ಸನ್ನಿಧಿ, ಕುರ್ಚಿ ಎಂಬ ಅರ್ಥ ಹೊಂದಿದೆ. ಒಂದು ಧರ್ಮಪ್ರಾಂತ್ಯದ ಅಧ್ಯಕ್ಷ ಮೇಷಪಾಲ (ಬಿಷಪ್ಪ) ಅವರ ಮೇತ್ರಾಣಿಯ ಸನ್ನಿಧಿ ಇರುವ ದೇವಾಲಯ ಕೆಥೆಡ್ರಲ್. ಮಂಗಳೂರು ಕ್ಯಾಥೋಲಿಕ್ ಧರ್ಮಪ್ರಾಂತ್ಯದ ಬಿಷಪ್ ಅವರ ಸನ್ನಿಧಿಯು ಬೋಳಾರ ರೊಜಾರಿಯೊ ಆವರ್ ಲೇಡಿ ಆಫ್ ಹೋಲಿ ರೋಜರಿ ಕೆಥೆಡ್ರಲ್‌ನಲ್ಲಿದೆ. ಈ ಪೀಠದಲ್ಲಿ ಬಿಷಪ್ ಬಿಟ್ಟರೆ ಬೇರಾರಿಗೂ ಕುಳಿತುಕೊಳ್ಳಲು ಅವಕಾಶವಿದೆ.

Write A Comment