ಕನ್ನಡ ವಾರ್ತೆಗಳು

ವಜ್ರದ ವ್ಯಾಪಾರಿ ರಘುನಾಥ್ ಶೇಟ್ ವಿಧಿವಶ.

Pinterest LinkedIn Tumblr

SL_ragunath_shet

ಮಂಗಳೂರು,ಎಪ್ರಿಲ್.07: ಕೊಂಕಣಿ ಭಾಷಾ ಮಂಡಲದ ಅಧ್ಯಕ್ಷ, ವಜ್ರ ವ್ಯಾಪಾರದಲ್ಲಿ ಹೆಸರುವಾಸಿಯಾಗಿದ್ದ ಎಸ್.ಎಲ್.ಶೇಟ್ ಡೈಮಂಡ್ ಹೌಸ್ ಮಾಲಕರಾಗಿದ್ದ ರಘುನಾಥ್ ಎಂ.ಶೇಟ್ (72 ) ಮಂಗಳವಾರ ತನ್ನ ಸ್ವಗೃಹದಲ್ಲಿ ವಿಧಿವಶವಾದರು.

Ragu_Shet_dead_2

Ragu_Shet_dead_1

ಉಸಿರಾಟದ ತೊಂದರೆಯಿಂದ ಬಳಲುತ್ತಿದ್ದ ಅವರು 3 ದಿನಗಳ ಹಿಂದೆ ನಗರದ ಕೆ.ಎಂ.ಸಿ ಆಸ್ಪತ್ರೆಗೆ ದಾಖಲಾಗಿದ್ದರು. ಆದರೆ ಇಂದು ಚಿಕಿತ್ಸೆ ಫಲಕಾರಿಯಾಗದೆ ಬೆಳಿಗ್ಗೆ 11.30 ರ ಸುಮಾರಿಗೆ ಮೃತಪಟ್ಟರು.  ಸಾಮಾಜಿಕ ಚಟುವಟಿಕೆಯಲ್ಲಿ ಅವರು ತನ್ನನ್ನು ತೊಡಗಿಸಿಕೊಂಡಿದ್ದರು. ಕ್ರೀಡಾ ಕ್ಷೇತ್ರದಲ್ಲೂ ವಿಶೇಷ ಆಸಕ್ತಿ ಹೊಂದಿದ್ದ ಅವರು, ಕೊಡುಗೈ ದಾನಿಯಾಗಿದ್ದರು. ಕಲೆ, ಸಾಹಿತ್ಯ, ಸಂಸ್ಕೃತಿ ವಿಚಾರಗಳಲಿ ಅಪಾರ ಆಸಕ್ತಿ ಹೊಂದಿದ್ದರಲ್ಲದೇ ಅಶಕ್ತರಿಗೆ ನೆರವಾಗುತ್ತಿದ್ದರು

Write A Comment