ಕನ್ನಡ ವಾರ್ತೆಗಳು

ಕ. ಸಾ. ಪ. ಮಹಾರಾಷ್ಟ್ರ ಘಟಕದ ಹತ್ತನೆಯ ಸಾಹಿತ್ಯ ಸಮ್ಮೇಳನ, ಸನ್ಮಾನ, ಸಮಾರೋಪ

Pinterest LinkedIn Tumblr

mumbai_news_photo_1

ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್

ಮುಂಬಯಿ : ಕರ್ನಾಟಕ ಸಂಘದ ವಿಶ್ವೇಶ್ವರಯ್ಯ ಸಭಾಗೃಹದ ಕೆ. ಟಿ. ವೇಣುಗೋಪಾಲ ವೇದಿಕೆಯಲ್ಲಿ ಜರಗಿದ ಮಹಾರಾಷ್ಟ್ರ ರಾಜ್ಯ ಕನ್ನಡಿಗರ ಹತ್ತನೆಯ ಸಾಹಿತ್ಯ ಸಮ್ಮೇಳನದ ಮೂರನೆಯ ದಿನವಾದ ಎ. 5ರಂದು ದ. ಕ. ಜಿಲ್ಲಾ ಕ. ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಪ್ರದೀಪ ಕುಮಾರ್ ಕಲ್ಕೂರ ಅವರು ಮಾತನಾಡುತ್ತಾ ಈ ಹತ್ತನೆಯ ಸಮ್ಮೇಳನದಲ್ಲಿ ಸಾಹಿತ್ಯ ಮಾತ್ರವಲ್ಲ, ಇತರ ಕಲೆಗಳಿಗೂ ಆದ್ಯತೆ ನೀಡಲಾಗಿದ್ದು ನಾಗಮಂಡಲದಂತಹ ಅಪರೂಪದ ಸಂಸ್ಕೃತಿಯನ್ನೂ ಪ್ರದರ್ಶಿಸಲಾಯಿತು. ನೂರು ವರ್ಷಗಳ ಹಿಂದೆ ಸ್ಥಾಪನೆಗೊಂಡ ಈ ಕ.ಸಾ.ಪ. ಸಾದನೆಗಳು ಸಾರ್ಥಕವಾಗಿದೆ ಎಂದರು.

mumbai_news_photo_2 mumbai_news_photo_3 mumbai_news_photo_4 mumbai_news_photo_5 mumbai_news_photo_6 mumbai_news_photo_7 mumbai_news_photo_9 mumbai_news_photo_10 mumbai_news_photo_11 mumbai_news_photo_12 mumbai_news_photo_13 mumbai_news_photo_14

ಮಂಗಳೂರಿನ ಶ್ರೀನಿವಾಸ ವಿ. ವಿ. ಯ ಕುಲಪತಿ ಸಿಎ. ಎ. ರಾಘವೇಂದ್ರ ರಾವ್ ಅವರು ಸ್ಮರಣ ಸಂಚಿಕೆಯನ್ನು ಬಿಡುಗಡೆಗೊಳಿಸಿದರು. ಕೆಲವು ಗಣ್ಯರನ್ನು ಹಾಗೂ ಸಾಧಕರನ್ನು ಸನ್ಮಾನಿಸಲಾಯಿತು.

ಕ. ಸಾ. ಪ. ಮಹಾರಾಷ್ಟ್ರ ಘಟಕದ ಅಧ್ಯಕ್ಷ ಎಚ್. ಬಿ. ಎಲ್. ರಾವ್, ಸ್ವಾಗತಿಸಿದರು. ಸುರೇಂದ್ರ ಕುಮಾರ್ ಹೆಗ್ಡೆ ಮತ್ತು ಅಮಿತ್ ಭಾಗವತ್ ಕಾರ್ಯಕ್ರಮವನ್ನು ನಿರೂಪಿಸಿದರು.

ಅತಿಥಿಗಳು ಎಚ್. ಬಿ. ಎಲ್. ರಾವ್ ಅವರಿಗೆ ಕಲ್ಕೂರ ಪ್ರಶಸ್ತಿ ನೀಡಿ ಅಬಿನಂದಿಸಿದರು. ವೇದಿಕೆಯಲ್ಲಿ ಡಾ. ವ್ಯಾಸರಾವ್ ನಿಂಜೂರ್, ಶತವದಾನಿ ಆರ್. ಗಣೇಶ್ ವಿಶೇಷ ಅತಿಥಿಗಳಾಗಿ ಉಪಸ್ಥಿತರಿದ್ದರು.

Write A Comment