ಕನ್ನಡ ವಾರ್ತೆಗಳು

ಬೀಜಾಡಿಯಲ್ಲಿ ಕೊರಗ ಕಾಲನಿಯ ಮನೆ ಮೇಲೆ ಬಿದ್ದ ಮರ; ಎರಡು ದಿನವಾದ್ರೂ ತೆರೆವು ಮಾಡಿಲ್ಲ..!

Pinterest LinkedIn Tumblr

ಕುಂದಾಪುರ: ತಾಲೂಕಿನ ಬೀಜಾಡಿ ಗ್ರಾಮಪಂಚಾಯತ್ ವ್ಯಾಪ್ತಿಗೆ ಬರುವ ರೋಷನಿಧಾಮ ಕೊರಗ ಕಾಲನಿಯಲ್ಲಿರುವ ಮನೆಯೊಂದರ ಮೇಲೆ ತೆಂಗಿನ ಮರವು ಶನಿವಾರ ಮಧ್ಯಾಹ್ನ ಉರುಳಿ ಬಿದ್ದಿದೆ.

ಘಟನೆ ನಡೆದು ಎರಡು ದಿನ ಕಳೆದರೂ ಕೂಡ ಸಂಬಂದಪಟ್ಟವರ್ಯಾರು ಈ ಮರವನ್ನು ಕಡಿದು ತೆರವು ಗೊಳಿಸುವ ಕಾರ್ಯ ಮಾಡಿಲ್ಲ. ಈಗಾಗಲೇ ಮನೆ ಮೇಲ್ಮಾಡು ಹಾನಿಯಾಗಿದ್ದು, ಹೆಂಚು, ರೀಪುಗಳು ಹಾನಿಯಾಗಿದೆ.

beejadi_Tree_home (1) beejadi_Tree_home (2) beejadi_Tree_home (2)

ಹಳೆಯ ಕಟ್ಟಡವಾದ ಕಾರಣ ಯಾವುದೇ ಸಮಯದಲ್ಲೂ ಮರದ ಒತ್ತಡಕ್ಕೆ ಮನೆಯ ಗೋಡೆಯೂ ಕುಸಿಯುವ ಭೀತಿ ಸ್ಥಳೀಯ ಕೊರಗ ನಿವಾಸಿಗಳದ್ದಾಗಿದ್ದು, ಮರ ಕಡಿಯುವವರು ಸಿಗದ ಕಾರಣ ಮಂಗಳವಾರ ತೆರವು ಗೊಳಿಸುವ ಭರವಸೆಯನ್ನು ಸ್ಥಳಿಯ ಪಂಚಾಯತ್ ತಿಳಿಸಿದೆ ಎನ್ನಲಾಗಿದೆ.

Write A Comment