ಮಂಗಳೂರು,ಎ.06 : ಕಾಶೀಮಠಾಧೀಶ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿ ಅವರ 90ನೇ ಜನ್ಮ ದಿನಾಚರಣೆ (ನವತಿ ಮಹೋತ್ಸವ) ಹರಿದ್ವಾರದ ಶ್ರೀ ವ್ಯಾಸಾಶ್ರಮದಲ್ಲಿ ಆದಿತ್ಯವಾರ ಬೆಳಿಗ್ಗೆ ಶ್ರೀ ಗಳವರ ಪಟ್ಟ ಶಿಷ್ಯರಾದ ಶ್ರೀಮದ್ ಸಂಯ್ಯಮೀಂದ್ರತೀರ್ಥ ಸ್ವಾಮೀಜಿ ಯವರ ದಿವ್ಯ ಹಸ್ತಗಳಿಂದ ಗಾಯತ್ರಿ ಹವನ ದೀಪ ಬೆಳಗಿಸುವ ಮೂಲಕ ಪ್ರಾರಂಭವಾಯಿತು.
ಕುಂದಾಪುರ ಶ್ರೀಮದ್ ಭುವನೇಂದ್ರತೀರ್ಥ ಸ್ವಾಮಿ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಆಯುರ್ವೇದ ಉಚಿತ ಆರೋಗ್ಯ ತಪಾಸಣೆ ಶಿಬಿರದ ಉದ್ಘಾಟನೆ ನಡೆಯಿತು. ತದ ನಂತರ ಶ್ರೀದೇವರಿಗೆ ತ್ರಿಕಾಲ ಪೂಜೆ ನೆರವೇರಿಸಲಾಯಿತು. 90 ನೇ ವರ್ಷದ ಸವಿನೆನಪಿಗಾಗಿ ಪ್ರಯುಕ್ತ ನೂತನವಾಗಿ ನಿರ್ಮಿಸಲಾದ ರಜತ ಸಿಂಹಾಸನವನ್ನು ಕಾಶೀಮಠಾಧೀಶ ಶ್ರೀಮದ್ ಸುಧೀಂದ್ರತೀರ್ಥ ಸ್ವಾಮೀಜಿ ಸಮರ್ಪಿಸಲಾಯಿತು.