ಕನ್ನಡ ವಾರ್ತೆಗಳು

ಗಣತಿದಾರರಿಗೆ ಸಮರ್ಪಕ ಹಾಗೂ ಸಂಪೂರ್ಣ ಮಾಹಿತಿ ನೀಡುವ ಮೂಲಕ ಸಹಕರಿಸಿ : ಜಿಲ್ಲಾಧಿಕಾರಿ ಕರೆ

Pinterest LinkedIn Tumblr

DC_Press_Club_5

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲೆಯಲ್ಲಿ ಏ.11ರಿಂದ 30ರ ನಡುವೆ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆಗೆ ಗಣತಿದಾರರು ಮನೆಗಳಿಗೆ ಭೇಟಿ ನೀಡಲಿದ್ದು, ನಾಗರಿಕರು 55 ಅಂಶಗಳ ಕುರಿತು ಸಮರ್ಪಕ ಹಾಗೂ ಸಂಪೂರ್ಣ ಮಾಹಿತಿ ನೀಡಿ ಸಹಕರಿಸಿ ಗಣತಿಯನ್ನು ಯಶಸ್ವಿ ಗೊಳಿಸಬೇಕು ಎಂದು ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಎ.ಬಿ. ಇಬ್ರಾಹಿಂ ಹೇಳಿದರು.

ಪ್ರೆಸ್‌ಕ್ಲಬ್‌ನಲ್ಲಿ ಗುರುವಾರ ಪತ್ರಕರ್ತರ ಜತೆ ಸಂವಾದ ಕಾರ್ಯಕ್ರಮದಲ್ಲಿ ಈ ಸಮೀಕ್ಷೆ ಬಗ್ಗೆ ಮಾಹಿತಿ ನೀಡಿದ ಜಿಲ್ಲಾಧಿಕಾರಿ, ಸಾಮಾಜಿಕ ಭದ್ರತೆ ಯನ್ನು ಒದಗಿಸುವ ನಿಟ್ಟಿನಲ್ಲಿ ಹಾಗೂ ಸರಕಾರದ ಸೌಲಭ್ಯಗಳು ಅರ್ಹರಿಗೆ ತಲುಪಿಸುವ ಉದ್ದೇಶದಿಂದ ಇದೊಂದು ಪ್ರಮುಖ ಗಣತಿಯಾಗಿದೆ ಎಂದರು.

DC_Press_Club_1

DC_Press_Club_4 DC_Press_Club_3 DC_Press_Club_2

ಗಣತಿದಾರ ಭೇಟಿ ಸಂದರ್ಭ ಮಾಹಿತಿ ನೀಡುವ ಸೂಕ್ತ ವ್ಯಕ್ತಿ ಮನೆಯಲ್ಲಿ ಇಲ್ಲದಿದ್ದರೆ ಮರು ಭೇಟಿ ಮಾಡಲಿದ್ದಾರೆ. ಈ ಮೂಲಕ ಮಾಹಿತಿ ಲಭ್ಯವಾಗು ವವರೆಗೆ ಗಣತಿದಾರರು ಮನೆ ಭೇಟಿ ಮುಂದುವರಿ ಸಲಿದ್ದಾರೆ. ಇದಕ್ಕಾಗಿ ಜಿಲ್ಲೆಯಲ್ಲಿ ಒಟ್ಟು 4125 ಗಣತಿದಾರರು ಕಾರ್ಯ ನಿರ್ವಹಿಸಲಿದ್ದಾರೆ ಎಂದರು.

ಗಣತಿದಾರರಾಗಿ ಶಿಕ್ಷಕರನ್ನೇ (ಎಸೆಸೆಲ್ಸಿ ಶಿಕ್ಷಕರನ್ನು ಹೊರತುಪಡಿಸಿ) ನಿಯೋಜಿಸಲಾಗಿದೆ. ಈಗಾಗಲೇ ಗಣತಿ ಕಾರ್ಯದ ಬಗ್ಗೆ ತರಬೇತಿ ಕಾರ್ಯಾಗಾರ ನಡೆಸಲಾಗಿದೆ. ಒಟ್ಟು 3930 ಗಣತಿ ಬ್ಲಾಕ್‌ಗಳಲ್ಲಿ 4,60,000 ಕುಟುಂಬಗಳಿವೆ. ಒಂದು ಬ್ಲಾಕ್‌ನಲ್ಲಿ 120ರಿಂದ 150 ಮನೆಗಳಿರುತ್ತವೆ. ರಾಜ್ಯದಲ್ಲಿ ಒಟ್ಟು 190 ಕೋಟಿ ರೂ.ಗಳನ್ನು ಈ ಸಮೀಕ್ಷೆಗೆ ವೆಚ್ಚ ಮಾಡ ಲಾಗುತ್ತಿದೆ. ಪ್ರಚಾರ, ಭತ್ತೆ ಹಾಗೂ ವೇತನಕ್ಕಾಗಿ ದಕ್ಷಿಣ ಕನ್ನಡ ಜಿಲ್ಲೆಗೆ 6ರಿಂದ 7 ಕೋಟಿ ರೂ ಖರ್ಚಾಗ ಲಿದೆ ಎಂದು ಜಿಲ್ಲಾಧಿಕಾರಿ ವಿವರಿಸಿದರು.

ತಪ್ಪು ಮಾಹಿತಿ ನೀಡುವುದು ಕಾನೂನಿನ ಪ್ರಕಾರ ಅಪರಾಧ. ಸಾರ್ವಜನಿಕರು ತಪ್ಪು ಮಾಹಿತಿ ನೀಡ ಬಾರದು ಎಂದರು. ಗಣತಿಗಾಗಿ ಈಗಾಗಲೇ ಜಿಲ್ಲೆಗೆ 50 ಲಕ್ಷ ರೂ. ಬಿಡುಗಡೆಯಾಗಿದೆ ಎಂದರು.

DC_Press_Club_6 DC_Press_Club_7

ಸಮೀಕ್ಷೆ ಬಗ್ಗೆ ಜನಸಾಮಾನ್ಯರಿಗೆ ಮಾಹಿತಿ ಒದಗಿಸುವ ನಿಟ್ಟಿನಲ್ಲಿ ದ.ಕ. ಜಿಲ್ಲೆಯಾದ್ಯಂತ ವಾಹನ ಪ್ರಚಾರ ಜಾಥಾ ಏ. 6ರಂದು ಹೊರಡಲಿದೆ. ಇದಲ್ಲದೆ ಕರಪತ್ರ, ಸ್ಥಳೀಯ ಪತ್ರಿಕೆ ಹಾಗೂ ದೃಶ್ಯ ಮಾಧ್ಯಮದಲ್ಲಿ ಜಾಹೀರಾತು, ಫ್ಲೆಕ್ಸ್‌ಗಳ ಮೂಲಕ ಜಾಗೃತಿ ಮೂಡಿಸಲಾಗುವುದು ಎಂದು ಡೀಸಿ ತಿಳಿಸಿದರು.

ರಾಜ್ಯ ಸರಕಾರ ಹೊರತಂದಿರುವ ಸಾಮಾಜಿಕ ಮತ್ತು ಶೈಕ್ಷಣಿಕ ಸಮೀಕ್ಷೆ ಕರಪತ್ರವನ್ನು ಜಿಲ್ಲಾಧಿಕಾರಿ ಬಿಡುಗಡೆಗೊಳಿಸಿದರು. ಜಿಲ್ಲಾ ಸಮಾಜ ಕಲ್ಯಾಣ ಅಧಿಕಾರಿ ಸಂತೋಷ್ ಕುಮಾರ್, ಜಿಲ್ಲಾ ಸಾಂಖ್ಯಿಕ ಅಧಿಕಾರಿ ಪ್ರದೀಪ್ ಡಿಸೋಜ, ವಾರ್ತಾಧಿಕಾರಿ ಖಾದರ್ ಷಾ ಉಪಸ್ಥಿತರಿದ್ದರು. ಜಿಲ್ಲಾ ಪತ್ರಕರ್ತರ ಸಂಘದ ಅಧ್ಯಕ್ಷ ಜಗನ್ನಾಥ ಶೆಟ್ಟಿ ಬಾಳ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಶ್ರೀನಿವಾಸ್ ವಂದಿಸಿದರು.

Write A Comment