ಕನ್ನಡ ವಾರ್ತೆಗಳು

ಐತಿಹಾಸಿಕ ಉಳ್ಳಾಲ ಉರೂಸ್‌ ಆರಂಭ : 423ನೆ ವಾರ್ಷಿಕ ಮತ್ತು 20ನೆ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಸಂಭ್ರಮದ ಚಾಲನೆ

Pinterest LinkedIn Tumblr

Ullala_Urus_Strat_1

ಉಳ್ಳಾಲ,(ಶೈಖುನಾ ತಾಜುಲ್ ಉಲಮಾ ವೇದಿಕೆ) ಎ.2: ದಕ್ಷಿಣ ಭಾರತದ ಅಜ್ಮೀರ್ ಎಂದೇ ಪ್ರಸಿದ್ಧಿ ಪಡೆದಿರುವ ಊರ ಹಾಗೂ ಪರವೂರ ಬಾಂಧವರ ಸಹಕಾರದೊಂದಿಗೆ ಪ್ರತೀ ಐದು ವರ್ಷಕ್ಕೊಮ್ಮೆ ನಡೆಯುವ ಖುತುಬುಝಮಾನ್ ಹಝ್ರತ್ ಅಸ್ಸೈಯದ್ ಮುಹಮ್ಮದ್ ಶರೀಫುಲ್ ಮದನಿ (ಖ.ಸಿ.) ತಂಙಳ್‌ರ 423ನೆ ವಾರ್ಷಿಕ ಮತ್ತು 20ನೆ ಪಂಚವಾರ್ಷಿಕ ಉರೂಸ್ ಕಾರ್ಯಕ್ರಮಕ್ಕೆ ಗುರುವಾರ ರಾತ್ರಿ ಸಂಭ್ರಮದ ಚಾಲನೆ ದೊರೆಯಿತು.

ಉಳ್ಳಾಲ ದರ್ಗಾ ವಠಾರದ ತಾಜುಲ್ ಉಲಮಾ ವೇದಿಕೆಯಲ್ಲಿ ನಡೆದ ಉರೂಸ್ ಸಮಾರಂಭದ ಅಧ್ಯಕ್ಷತೆ ವಹಿಸಿದ್ದ ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಅಲ್ ಬುಖಾರಿ ದುಆ ಮಾಡಿದರು. ಅಸ್ಸೈಯದ್ ಮುಹಮ್ಮದ್ ಉಮರುಲ್ ಫಾರೂಕ್ ತಂಙಳ್ ಪೊಸೋಟು ಉದ್ಘಾಟಿಸಿದರು.

Ullala_Urus_Strat_2 Ullala_Urus_Strat_5

Ullala_Urus_Strat_3 Ullala_Urus_Strat_4

ಅಖಿಲ ಭಾರತ ಸುನ್ನೀ ಜಂ ಇಯ್ಯತುಲ್ ಉಲಮಾದ ಪ್ರಧಾನ ಕಾರ್ಯದರ್ಶಿ ಎ.ಪಿ.ಅಬೂಬಕರ್ ಮುಸ್ಲಿಯಾರ್ ಮುಖ್ಯ ಭಾಷಣ ಮಾಡಿದರು. ರಾಜ್ಯ ಯೋಜನಾ ಆಯೋಗದ ಉಪಾಧ್ಯಕ್ಷ ಸಿ.ಎಂ. ಇಬ್ರಾಹೀಂ, ಆರೋಗ್ಯ ಸಚಿವ ಯು.ಟಿ. ಖಾದರ್ ಅತಿಥಿಗಳಾಗಿ ಭಾಗವಹಿಸಿದ್ದರು.

ಅಖಿಲ ಭಾರತ ಸುನ್ನೀ ಜಂ ಇಯ್ಯತುಲ್ ಉಲಮಾದ ಉಪಾಧ್ಯಕ್ಷರಾದ ಶೈಖುನಾ ಹಂಝ ಮುಸ್ಲಿಯಾರ್ ಚಿತ್ತಾರಿ, ಶೈಖುನಾ ಅಲಿ ಕುಂಞಿ ಉಸ್ತಾದ್ ಶಿರಿಯ, ಅಸ್ಸೈಯದ್ ಹಾಮಿದ್ ಇಂಬಿಚ್ಚಿಕೋಯ ತಂಙಳ್ ಮದನಿ ಕೊಲಾಂಡಿ, ಸೈಯದ್ ಇಬ್ರಾಹೀಂ ಖಲೀಲ್ ಅಲ್‌ಬುಖಾರಿ ಕಡಲುಂಡಿ ತಂಙಳ್, ಅಸ್ಸೈಯದ್ ಅಥಾವುಲ್ಲಾ ತಂಙಳ್ ಉದ್ಯಾವರ, ಎಸ್‌ಎಂಎ ಕಾಲೇಜಿನ ಪ್ರೊಫೆಸರ್‌ಗಳಾದ ಶೈಖುನಾ ಚೆರುಕುಂಞಿ ಮುಸ್ಲಿಯಾರ್, ಶೈಖುನಾ ಅಹ್ಮದ್ ಬಾವ ಮುಸ್ಲಿಯಾರ್, ಮಂಜನಾಡಿ ಅಲ್ ಮದೀನಾ ಅಧ್ಯಕ್ಷ ಶೈಖುನಾ ಅಬ್ಬಾಸ್ ಮುಸ್ಲಿಯಾರ್, ದಾರುಲ್ ಇರ್ಶಾದ್‌ನ ಅಧ್ಯಕ್ಷ ಅಬ್ದುಲ್ ಹಮೀದ್ ಮುಸ್ಲಿಯಾರ್ ಮಾಣಿ, ಅಬ್ದುರ್ರಝಾಕ್ ಮದನಿ ಅಕ್ಕರಂಗಡಿ, ಇಬ್ರಾಹೀಂ ಮದನಿ ಮಂಚಿ, ಸೈಯದ್ ಜಮಾಲುಲ್ಲೈಲಿ ತಂಙಳ್ ಕಾಜೂರು, ಅಸ್ಸೈಯದ್ ಅಶ್ರಫ್ ತಂಙಳ್ ಆದೂರು, ಹಝ್ರತ್ ಮುಹಮ್ಮದ್ ಫಾಝಿಲ್ ರಝ್ವಿ ಕಾವಲ್‌ಕಟ್ಟೆ, ಹುಸೈನ್ ಸಅದಿ ಕೆ.ಸಿ.ರೋಡ್, ಅಬ್ದುಲ್ ಖಾದರ್ ಮದನಿ ಪಳ್ಳಂಗೋಡು, ಯೆನೆಪೊಯ ವಿ.ವಿ. ಕುಲಪತಿ ವೈ. ಅಬ್ದುಲ್ಲಾ ಕುಂಞಿ, ದ.ಕ.ಜಿಲ್ಲಾ ವಕ್ಫ್ ಸಲಹಾ ಸಮಿತಿ ಅಧ್ಯಕ್ಷ ಎಸ್.ಎಂ.ರಶೀದ್ ಹಾಜಿ, ಬಿ.ಎಂ.ಇಬ್ರಾಹೀಂ ಬಾವಾ ಹಾಜಿ, ಮುಡಾ ಅಧ್ಯಕ್ಷ ಹಾಜಿ ಇಬ್ರಾಹೀಂ ಕೋಡಿಜಾಲ್, ಮುಮ್ತಾಝ್ ಅಲಿ ಕೃಷ್ಣಾಪುರ, ಅಬೂಬಕರ್ ಹಾಜಿ ಕೂರತ್, ಹೈದರ್ ಪರ್ತಿಪ್ಪಾಡಿ, ಎಸ್.ಅಬ್ದುರ್ರಹ್ಮಾನ್ ಎಂಜಿನಿಯರ್, ಮುಹಿಯ್ಯುದ್ದೀನ್ ಕಾಮಿಲ್ ಸಖಾಫಿ ತೋಕೆ, ಹಾಜಿ ಸಿ. ಅಬ್ದುಲ್ ಮಜೀದ್, ಎಸ್‌ಕೆ ಅಬ್ದುಲ್ ಮಜೀದ್ ಹಾಜಿ, ಅಬೂಬಕರ್ ಸಜಿಪ, ಮನ್ಸೂರ್ ಹಾಜಿ ಆಝಾದ್ ಅತಿಥಿಗಳಾಗಿ ಪಾಲ್ಗೊಂಡಿದ್ದರು.

Ullala_Urus_Strat_6 Ullala_Urus_Strat_7

Ullala_Urus_Strat_8

ದಅ್ವಾ ಕಾಲೇಜಿನ ವಿದ್ಯಾರ್ಥಿ ಮುದಸ್ಸಿರ್ ಕೆ.ಸಿ.ರೋಡ್ ಕಿರಾಅತ್ ಪಠಿಸಿದರು. ದರ್ಗಾ ಅಧ್ಯಕ್ಷ ಹಾಜಿ ಯು.ಎಸ್. ಹಂಝ ಸ್ವಾಗತಿಸಿದರು. ಪ್ರಧಾನ ಕಾರ್ಯದರ್ಶಿ ಯು.ಟಿ. ಇಲ್ಯಾಸ್ ವಂದಿಸಿದರು.

ವೇದಿಕೆಯಲ್ಲಿ ದರ್ಗಾ ಉಪಾಧ್ಯಕ್ಷ ಅಶ್ರಫ್ ಅಹ್ಮದ್ ರೈಟ್‌ವೇ, ಜೊತೆ ಕಾರ್ಯದರ್ಶಿ ಹಾಜಿ ಮುಹಮ್ಮದ್ ಅಶ್ರಫ್, ಫಾರೂಕ್ ಮಾರ್ಗತಲೆ, ಕೋಶಾಧಿಕಾರಿ ಮುಹಮ್ಮದ್ ಹಾಜಿ, ಲೆಕ್ಕಪರಿಶೋಧಕ ಜೆ. ಅಬ್ದುಲ್ ಹಮೀದ್ ಮತ್ತಿತರರು ಉಪಸ್ಥಿತರಿದ್ದರು.

ಸೈಯದ್ ಮದನಿ ಅರಬಿಕ್ ಕಾಲೇಜಿನ ಪ್ರೊಫೆಸರ್ ಶೈಖುನಾ ಅಹ್ಮದ್ ಬಾವಾ ಮುಸ್ಲಿಯಾರ್ ಮತ್ತು ಯೆನೆಪೊಯ ವಿವಿ ಕುಲಪತಿ ವೈ. ಅಬ್ದುಲ್ಲಾ ಕುಂಞಿ ರವರಿಗೆ ‘ತಾಜುಲ್ ಉಲಮಾ ಪ್ರಶಸ್ತಿ’ಯನ್ನು ಪ್ರದಾನ ಮಾಡಲಾಯಿತು.

Ullala_Urus_Strat_9 Ullala_Urus_Strat_10

ಸಂಜೆ ನಡೆದ ದರ್ಗಾ ಝಿಯಾರತ್, ತಾಜುಲ್ ಉಲಮಾ ಅನುಸ್ಮರಣೆ, ತಹ್ಲೀಲ್ ಮತ್ತು ಖತಮುಲ್ ಕುರ್‌ಆನ್ ಸಮರ್ಪಣೆ, ದ್ಸಿಕ್ರ್ ಮಜ್ಲಿಸ್ ಕಾರ್ಯಕ್ರಮವನ್ನು ಸೈಯದ್ ಕೆ.ಎಸ್. ಆಟಕೋಯ ತಂಙಳ್ ಕುಂಬೋಳ್ ಉದ್ಘಾಟಿಸಿದರು. ಸೈಯದ್ ಇಂಬಿಚ್ಚಿಕೋಯ ತಂಙಳ್ ದುಆ ಮಾಡಿದರು. ಉಳ್ಳಾಲ ಖಾಝಿ ಅಸ್ಸೈಯದ್ ಫಝಲ್ ಕೋಯಮ್ಮ ತಂಙಳ್ ಕೂರತ್ ನೇತೃತ್ವ ವಹಿಸಿದ್ದರು.

ಐದು ವರ್ಷಕ್ಕೊಮ್ಮೆ ನಡೆಯುವ ಐತಿಹಾಸಿಕ ಉರೂಸ್ ಕಾರ್ಯಕ್ರಮಕ್ಕೆ ಇದೇ ಮೊದಲ ಬಾರಿಗೆ ಪ್ರಥಮ ದಿನದಂದು ನಿರೀಕ್ಷೆಗೂ ಮೀರಿದ ಜನಸ್ತೋಮ ಕಂಡು ಬಂತು.

Pics By : M.Arif Kalkatta

Write A Comment