ಕುಂದಾಪುರ/ಭಟ್ಕಳ: ತೆಂಗಿನ ಮರದಿಂದ ಬಿದ್ದು ಎರಡು ಕೈ ಹಾಗೂ ಕಾಲಿಗೆ ಗಾಯಗೊಂಡು ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಾಗಿದ್ದ ವ್ಯಕ್ತಿಯೋರ್ವರು ಒಂದು ವಾರಗಳ ಬಳಿಕ ಆಸ್ಪತ್ರೆಯಲ್ಲಿಯೇ ಸಾವನಪ್ಪಿದ ಘಟನೆ ನಡೆದಿದೆ.
ಭಟ್ಕಳದ ಸರ್ಪನಕಟ್ಟೆ ನಿವಾಸಿ ದುರ್ಗಯ್ಯ ಮಾಸ್ತಯ್ಯ ನಾಯ್ಕ್ (30) ಸಾವನ್ನಪ್ಪಿದ ವ್ಯಕ್ತಿಯಾಗಿದ್ದಾರೆ.
ಘಟನೆ ವಿವರ: ಮಾ.23 ರಂದು ಮನೆ ಸಮೀಪದ ತೆಂಗಿನ ಮರದಲ್ಲಿನ ಕಾಯಿ ಕೀಳಲು ಮರವೇರಿದ್ದಾಗ ಆಯ ತಪ್ಪಿ ಕೆಳಗಡೆ ಬಿದ್ದ ಅವರನ್ನು ಕೂಡಲೇ ಕುಂದಾಪುರದ ಚಿನ್ಮಯಿ ಆಸ್ಪತ್ರೆಗೆ ದಾಖಲಿಸಲಾಗಿತ್ತು. ಈ ವೇಳೆ ದುರ್ಗಯ್ಯ ಅವರ ಎರಡು ಕೈ ಹಾಗೂ ಒಂದು ಕಾಲಿಗೆ ಗಾಯ ಹಾಗೂ ಮೂಳೆ ಮುರಿತ ಉಂಟಾಗಿದ್ದು ಚಿಕಿತ್ಸೆಯನು ನೀಡಲಾಗಿತ್ತು. ಚಿಕಿತ್ಸೆಗೆ ಸ್ಪಂದಿಸಿದ ಅವರ ಆರೋಗ್ಯ ಸಹಜ ಸ್ಥಿತಿಯತ್ತ ಬರುತ್ತಿತ್ತು. ಬುಧವಾರ ಮಧ್ಯಾಹ್ನದ ಸುಮಾರಿಗೆ ಇವರು ಆಸ್ಪತ್ರೆಯಲ್ಲಿಯೇ ಮ್ರತಪಟ್ಟಿದ್ದಾರೆ.
ವಿವಾಹಿತರಾಗಿರುವ ಇವರಿಗೆ 6 ತಿಂಗಳ ಗಂಡು ಮಗುವಿದೆ. ಕೂಲಿ ಕೆಲಸ ಮಾಡಿಕೊಂಡಿದ್ದ ಇವರ ಸಹೋದರ ಮದುವೆ ಮುಂದಿನ ತಿಂಗಳು ನಡೆಯುವುದರಲ್ಲಿತ್ತು.