ವರದಿ : ಈಶ್ವರ ಎಂ. ಐಲ್
ಚಿತ್ರ,: ದಿನೇಶ್ ಕುಲಾಲ್
ಮುಂಬಯಿ : ವೀರ ಕೇಸರಿ ಕಲಾವೃಂದ ಮುಂಬಯಿ ಇದರ 36 ನೇ ವಾರ್ಷಿಕೋತ್ಸವವು ಮಾ. 28 ರಂದು ಮಾಟುಂಗ ಪಶ್ಚಿಮದ ಡಾ| ವಿಶ್ವೇಶ್ವರಯ್ಯ ಸಭಾಗೃಹದಲ್ಲಿ ಅಧ್ಯಕ್ಷರಾದ ರಮೇಶ್ ಶೆಟ್ಟಿ ಪಯ್ಯಾರ್ ಅವರ ಅಧ್ಯಕ್ಷತೆಯಲ್ಲಿ ಜರಗಿತು. ಪ್ರಚಾರವನ್ನು ಬಯಸದೇ ಸಾಂಸ್ಕೃತಿಕ, ಶೈಕ್ಷಣಿಕ ಹಾಗೂ ಧಾರ್ಮಿಕ ಕಾರ್ಯವನ್ನು ಕಳೆದ ಮೂರುವರೆ ದಶಕಗಳಿಂದ ಮಾಡುತ್ತಾ ಬಂದಿರುವ ವೀರ ಕೇಸರಿ ಕಲಾವೃಂದದ ಸೇವೆಯ ಬಗ್ಗೆ ರಮೇಶ್ ಶೆಟ್ಟಿ ಪಯ್ಯಾರ್ ಅವರು ಮಾತನಾಡಿದರು.
ಮುಖ್ಯ ಅತಿಥಿಯಾಗಿ ಉಪಸ್ಥಿತರಿದ್ದ ಕನ್ನಡಿಗ ಕಲಾವಿದರ ಉಪಾಧ್ಯಕ್ಷ ನ್ಯಾ. ಸುಭಾಷ್ ಶೆಟ್ಟಿ ಯವರು ಮಾತನಾಡುತ್ತ ನಗರದ ಕಲಾವಿದರಿಗೆ ತವರೂರಲ್ಲಿ ಗೌರವ ಸಿಗದ ಬಗ್ಗೆ ಚಿಂತಿಸಬೇಕಾಗಿದೆ ಎಂದರು. ಅತಿಥಿಯಾಗಿ ಆಗಮಿಸಿದ ಖ್ಯಾತ ಕೊಂಕಣಿ ನಟ ಕಮಲಾಕ್ಷ ಸರಾಫ್ ಮಾತನಾಡುತ್ತಾ ಕಲಾವೃಂದದ ಸಾಧನೆಯನ್ನು ಪ್ರಶಂಸಿಸಿದರು. ಓಂ ಶಕ್ತಿ ಮಹಿಳಾ ಸಂಸ್ಥೆಯ ಅಧ್ಯಕ್ಷೆ ಚಿತ್ರಾ ಆರ್. ಶೆಟ್ಟಿ, ತುಳು-ಕನ್ನಡ ವೆಲ್ಫೇರ್ ಅಸೋಷಿಯೇಶನಿನ ಅಧ್ಯಕ್ಷ ಎ. ಕೆ. ಹರೀಶ್, ಉದ್ಯಮಿ ದಯಾನಂದ ಪೂಜಾರಿ ಮೊದಲಾದವರು ಉಪಸ್ಥಿತರಿದ್ದು ಮಾತನಾಡಿದರು.
ವೇದಿಕೆಯಲ್ಲಿ ಕಲಾವೃಂದದ ಉಪಾಧ್ಯಕ್ಷ ನ್ಯಾ. ಗುಣಕರ ಶೆಟ್ಟಿ, ಗೌ. ಪ್ರ. ಕಾರ್ಯದರ್ಶಿ ರಮೇಶ ಶಿವಪುರ, ಗೌ. ಕೋಶಾಧಿಕಾರಿ ನವೀನ್ ಗುಳಿಬೆಟ್ಟು, ಶ್ಯಾಮರಾಜ್ ಟಿ. ಶಟ್ಟಿ, ಉಷಾ ಸುವರ್ಣ ಉಪಸ್ಥಿತರಿದ್ದರು.
ಖ್ಯಾತ ಉದ್ಯಮಿ ಪದ್ಮನಾಭ ಪಯ್ಯಡೆ ಕುಲಾಲ ಸಂಘದ ಗೌರವ ಅಧ್ಯಕ್ಷ ಪಿ. ಕೆ. ಸಾಲ್ಯಾನ್, ರಂಗಭೂಮಿ ಫೈನ್ ಆರ್ಟ್ಸ್ ನ ಸಂಸ್ಥಾಪಕ ವಿ. ಕೆ. ಸುವರ್ಣ, ಸಾಹಿತಿ ಮೀನಾ ಕಾಳಾವರ್ ಅವರನ್ನು ಸನ್ಮಾನಿಸಲಾಯಿತು. ಕು. ಪ್ರತೀಕ್ಷಾ ಪೂಜಾರಿ, ಕು. ಅಶ್ವಿನಿ ಪೂಜಾರಿ, ಮಾ. ಪೃಥ್ವಿ ಹೆಗ್ಡೆ, ಮಾ. ಹರ್ಷ ಹೆಗ್ಡೆ, ಅವರನ್ನು ಗೌರವಿಸಲಾಯಿತು.
ನವೀನ ಕರ್ಕೆರ ಸಭಾ ಕಾರ್ಯಕ್ರಮವನ್ನು ನಿರೂಪಿಸಿದರು. ನ್ಯಾ. ಗುಣಕರ ಶೆಟ್ಟಿ ಸ್ವಾಗತಿಸಿದರು. ಗಂಗಾಧರ ಕಲ್ಲಾಡಿ, ರತ್ನಾಕರ ಪೂಜಾರಿ, ಉಷಾ ಅವರು ಸನ್ಮಾನ ಪತ್ರ ವಾಚಿಸಿದರು. ಸಾಂಸ್ಕೃತಿಕ ಕಾರ್ಯಕ್ರಮವನ್ನು ವೈಷ್ಣವಿ ಶೆಟ್ಟಿ ನಿರೂಪಿಸಿದರು. ರಮೇಶ್ ಶಿವಪುರ ವಂದಿಸಿದರು. ರಮೇಶ್ ಶಿವಪುರ ರಚಿಸಿ ನಿರ್ದೇಶಿಸಿದ ’ಎರೆಗಾದ್’ ತುಳು ನಾಟಕ ಪ್ರದರ್ಶನಗೊಂಡಿತು.