ಹುಬ್ಬಳ್ಳಿ,ಮಾರ್ಚ್.31: ಹುಬ್ಬಳ್ಳಿ ಹೊಟೇಲ್ ಸಂಘದ ವತಿಯಿಂದ ಹುಬ್ಬಳ್ಳಿ ಕರ್ನಾಟಕ ವಾಣಿಜ್ಯೋದ್ಯಮ ಸಂಸ್ಥೆಯ ಸಭಾ ಭವನದಲ್ಲಿ ನಡೆದ ಹಿರಿಯ ಹೊಟೇಲ್ ಉದ್ದಿಮೆದಾರರ ಸನ್ಮಾನ ಸಮಾರಂಭದಲ್ಲಿ ಕೆ.ಪುಟ್ಟಣ್ಣ ಗೌಡ ದುರ್ಗಾಭವನ ಅವರನ್ನು ಸನ್ಮಾನಿಸಲಾಯಿತು.
ಈ ಸಮಾರಂಭದಲ್ಲಿ ಹುಬ್ಬಳ್ಳಿ ಹೊಟೇಲ್ ಸಂಘದ ಮಾಜಿ ಅಧ್ಯಕ್ಷ ಹಾಗೂ ಕೆಪಿಹೆಚ್ ಆರ್ ಎ ಉಪಾಧ್ಯಕ್ಷ ಶ್ರೀಕಾಂತ ಜಿ.ಕೆಮ್ತೂರ ಮುಖ್ಯ ಅತಿಥಿಯಾಗಿ ಭಾಗವಹಿಸದ್ದರು. ಸಂಘದ ಪ್ರಧಾನ ಕಾರ್ಯದರ್ಶಿ ವೆಂಕಟನರಸಿಂಹ ಎಸ್ ಅಲೆವೂರ. ಸಂಘದ ಅಧ್ಯಕ್ಷ ಸರ್ವೋತ್ತಮ ಎಸ್ ಶೆಟ್ಟಿ ಉಪಸ್ಥಿತರಿದ್ದರು.
ಇದೇ ಸಂದರ್ಭದಲ್ಲಿ ರಾಮಚಂದ್ರ ಎಮ್ ರಾಯ್ಕರ, ಬಿ.ಶ್ಯಾಮ್ ಶೆಟ್ಟಿ, ಶಿರೂರ ರಘುರಾಮ ಶೆಟ್ಟಿ ಅವರನ್ನೂ ಸನ್ಮಾನಿಸಿ ಗೌರವಿಸಲಾಯಿತು.