ಅಂತರಾಷ್ಟ್ರೀಯ

ಮಂಗಳೂರು : ಪ್ರತಿಷ್ಠಿತ ಇನ್‌ಲ್ಯಾಂಡ್ ಗ್ರೂಪ್‌ನ ಇನ್‌ಲ್ಯಾಂಡ್ ವಿಂಡ್ಸರ್ಸ್‌ ವಸತಿ ಸಮುಚ್ಚಯಕ್ಕೆ ಕ್ರೆಡೈ ಪ್ರಶಸ್ತಿ

Pinterest LinkedIn Tumblr

INLAND_CREDAI_AWARD_1

ಮಂಗಳೂರು, ಮಾ.30: ಮಂಗಳೂರು ಹಾಗೂ ಬೆಂಗಳೂರಿನ ಪ್ರತಿಷ್ಠಿತ ರಿಯಲ್ ಎಸ್ಟೇಟ್ ಸಂಸ್ಥೆ ಇನ್‌ಲ್ಯಾಂಡ್ ಗ್ರೂಪ್ ಮಂಗಳೂರಿನ ಮೇರಿಹಿಲ್‌ನಲ್ಲಿ ನಿರ್ಮಿಸಿರುವ ವಿಲಾಸಿ ವಸತಿ ಸಮುಚ್ಚಯ ಇನ್‌ಲ್ಯಾಂಡ್ ವಿಂಡ್ಸರ್ಸ್ 2015ನೆ ಸಾಲಿನ ‘ಕ್ರೆಡೈ ಅವರ್ಡ್ ಫಾರ್ ರಿಯಲ್ ಎಸ್ಟೇಟ್’ ಪ್ರಶಸ್ತಿಗೆ ಪಾತ್ರವಾಗಿದೆ. 1,500 ಚದರ ಅಡಿ ಹಾಗೂ ಅದಕ್ಕಿಂತ ಹೆಚ್ಚಿನ ವಿಭಾಗದಲ್ಲಿ ‘ದಕ್ಷಿಣ ಕರ್ನಾಟಕದ ಅತ್ಯುತ್ತಮ ವಸತಿ ಯೋಜನೆ’ ಎಂಬ ಪ್ರಶಸ್ತಿಯನ್ನು ಇನ್‌ಲ್ಯಾಂಡ್ ವಿಂಡ್ಸರ್ಸ್ ಪಡೆದು ಕೊಂಡಿದೆ.

INLAND_CREDAI_AWARD_2 INLAND_CREDAI_AWARD_3

26 ಮಹಡಿಗಳ ಈ ಆಕರ್ಷಕ ವಿನ್ಯಾಸದ ವಸತಿ ಸಮುಚ್ಚಯ ಕಳೆದ ವರ್ಷ ಮೂರು ಪ್ರಶಸ್ತಿಗಳನ್ನು ಗಳಿಸಿತ್ತು. ಇದೀಗ ಈ ಪ್ರತಿಷ್ಠಿತ ಪ್ರಶಸ್ತಿಯೂ ಇನ್‌ಲ್ಯಾಂಡ್ ವಿಂಡ್ಸರ್ಸ್ ಪಾಲಾಗಿದೆ. ಇತ್ತೀಚೆಗೆ ಬೆಂಗಳೂರಿನ ಐಟಿಸಿ ಗಾರ್ಡೇನಿಯಾದಲ್ಲಿ ನಡೆದ ವರ್ಣರಂಜಿತ ಸಮಾರಂಭದಲ್ಲಿ ಇನ್‌ಲ್ಯಾಂಡ್ ಗ್ರೂಪ್‌ನ ಅಧ್ಯಕ್ಷ ಹಾಗೂ ಆಡಳಿತ ನಿರ್ದೇಶಕ ಸಿರಾಜ್ ಅಹ್ಮದ್‌ರಿಗೆ ಕ್ರೆಡೈ ಕರ್ನಾಟಕದ ಅಧ್ಯಕ್ಷ ನಾಗರಾಜ ರೆಡ್ಡಿ ಪ್ರಶಸ್ತಿಯನ್ನು ಪ್ರದಾನ ಮಾಡಿದರು.

INLAND_CREDAI_AWARD_4 INLAND_CREDAI_AWARD_5

ಈ ಸಂದರ್ಭ ಮಾತನಾಡಿದ ಸಿರಾಜ್ ಅಹ್ಮದ್, ನಮ್ಮ ಸಂಸ್ಥೆ ಯೋಜನೆಗಾಗಿ ಹಾಕಿದ ಕಠಿಣ ಪರಿಶ್ರಮ ಹಾಗೂ ಸತತ ಪ್ರಯತ್ನಗಳಿಗೆ ಇಂದು ಮನ್ನಣೆ ಸಿಕ್ಕಿದೆ. ಈ ಪ್ರತಿಷ್ಠಿತ ಯೋಜನೆಗೆ ಸಿಕ್ಕಿರುವ ಗೌರವವು ನಮ್ಮ ಸಂಸ್ಥೆಯ ಪ್ರತಿಯೊಬ್ಬನಿಗೂ ತೃಪ್ತಿ ನೀಡಿದೆ ಎಂದು ತಿಳಿಸಿದರು.

Write A Comment