ಉಡುಪಿ: ಸಂಬಂಧಿಯಿಂದ ದೈಹಿಕ ಹಿಂಸೆಗೆ ಒಳಗಾದ 10 ವರ್ಷದ ಬಾಲಕಿಯನ್ನು ಜಿಲ್ಲಾ ಮಕ್ಕಳ ರಕ್ಷಣಾ ಘಟಕವು ರಕ್ಷಿಸಿದ ಘಟನೆ ಆರೂರಿನಲ್ಲಿ ಶುಕ್ರವಾರ ನqದಿದೆ.
ತೋಟದಲ್ಲಿ ಕೆಲಸ ನಿರ್ವಹಿಸುತ್ತಿದ್ದ ಮೂಲತಃ ಬಿಜಾಪುರ ಜಿಲ್ಲೆಯ ಬಡೇಸಾಬ್ ಬಾಲಕಿ ಸಂಬಂಧಿ ಬಾಲಕಿಗೆ ಅಮಾನುಷ ರೀತಿಯಲ್ಲಿ ಕಿರುಕುಳ ನೀಡುತ್ತಿದ್ದ ಎನ್ನಲಾಗಿದೆ. ಆತನ ದೌರ್ಜನ್ಯಕ್ಕೆ ಹೆದರಿ ಬಾಲಕಿ ಹಾಡಿಯಲ್ಲಿ ಅಡಗಿ ಕುಳಿತಿರುವುದನ್ನು ಸ್ಥಳೀಯರು ಗಮನಿಸಿದ್ದಾರೆ. ಅದರಂತೆ ಪಂಚಾಯತ್ ಸದಸ್ಯರೋರ್ವರು ನೀಡಿದ ಮಾಹಿತಿಯಂತೆ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯ ಮಕ್ಕಳ ರಕ್ಷಣಾ ಘಟಕದಿಂದ ಕಾರ್‍ಯಾಚರಣೆ ನಡೆಸಿ ಬಾಲಕಿಯನ್ನು ರಕ್ಷಿಸಲಾಗಿದೆ.
ಜಿಲ್ಲಾ ಮಕ್ಕಳ ರಕ್ಷಣಾಧಿಕಾರಿ ರಾಜೇಂದ್ರ ಬೇಕಲ್ ಅವರ ನಿರ್ದೇಶನದಂತೆ ರಕ್ಷಣಾಧಿಕಾರಿ ಕಿರಣ್‌ಬಾಬು ಅವರು ಬ್ರಹ್ಮಾವರ ಪೊಲೀಸರ ಸಹಕಾರದಿಂದ ಕಾರ್‍ಯಾಚರಣೆ ನಡೆಸಿದರು.
