ಕನ್ನಡ ವಾರ್ತೆಗಳು

ಎಂಸಿಎಫ್ ಕಾರ್ಖಾನೆಯಲ್ಲಿ ಅನಿಲ ಸಂಪರ್ಕ ಜೋಡಣೆಯಾಗುವ ತನಕ ನಾಫ್ತಾ ಬಳಸಿಕೊಂಡು ಯೂರಿಯಾ ಉತ್ಪಾದನೆ : ಸಚಿವ ಅನಂತ್ ಕುಮಾರ್

Pinterest LinkedIn Tumblr
ananth_kum_1
 ಮಂಗಳೂರು,ಮಾರ್ಚ್.27:  ಮಂಗಳೂರು ಪಣಂಬೂರಿನಲ್ಲಿ ಕಾರ್ಯನಿರ್ವಹಿಸುತ್ತಿರುವ ರಾಸಾಯನಿಕ ಮತ್ತು ರಸಗೊಬ್ಬರ ಕಾರ್ಖಾನೆ (ಎಂಸಿಎಫ್) ಅನಿಲ ಸಂಪರ್ಕ ಜೋಡಣೆಯಾಗುವ ತನಕ ನಾಫ್ತಾ ಬಳಸಿಕೊಂಡು ಕಾರ್ಖಾನೆ ಯೂರಿಯಾ ಉತ್ಪಾದನೆ ಮಾಡಲಿದೆ ಎಂದು ಕೇಂದ್ರ ರಸಗೊಬ್ಬರ ಖಾತೆ ಸಚಿವ ಅನಂತ ಕುಮಾರ್ ಹೇಳಿದ್ದಾರೆ.
ಶುಕ್ರವಾರ ನಗರದ ಸರ್ಕ್ಯೂಟ್ ಹೌಸ್‌ನಲ್ಲಿ ಸುದ್ಧಿಗಾರರೊಂದಿಗೆ ಮಾತನಾಡಿದ ಅವರು, ಎಂಸಿಎಫ್ ಸಂಸ್ಥೆಯು ಅನಿಲ ಸಂಪರ್ಕ ಜೋಡಣೆಯಾಗುವ ತನಕ ನಾಫ್ತಾ ಬಳಕೆ ಮೂಲಕವೇ ಕಾರ್ಯಾಚರಿಸಲಿದೆ. ಅನಿಲ ಸಂಪರ್ಕ ಕಾಮಗಾರಿ ಮುಗಿಯುವ ತನಕ ಯಾವುದೇ ಆತಂಕವಿಲ್ಲದೆ ಕಾರ್ಖಾನೆ ಯೂರಿಯ ಉತ್ಪಾದಿಸಲಿದೆ ಎಂದರು.
ಮೋದಿ ಸರ್ಕಾರ ಎಂಸಿಎಫ್ ಗೆ ಎರಡನೇ ಬಾರಿಗೆ ಜೀವದಾನ ನೀಡಿದೆ.  2007 ರಲ್ಲಿ ಯುಪಿಎ ಸರ್ಕಾರ ಅನಿಲ ಸಂಪರ್ಕ ಜೋಡಣೆಗೆ ಅನುಮತಿ ನೀಡಿತ್ತು. ಅದು ಏಳು ವರ್ಷವಾದರೂ ಪೂರ್ಣಗೊಂಡಿಲ್ಲ. ಆಸ್ಕರ್ ಫೆರ್ನಾಂಡಿಸ್, ವೀರಪ್ಪ ಮೊಯ್ಲಿ ಅವರು ಈ ಭಾಗದವರೇ ಆಗಿದ್ದರೂ ಎಂಸಿಎಫ್ ಕಡೆಗೆ ಯಾವುದೇ ಗಮನ ಹರಿಸಿರಲಿಲ್ಲವೆಂದರು.
ananth_kum_2
ಎಂಸಿಎಫ್ ವಿಚಾರದಲ್ಲಿ ಸಂಸದ ನಳಿನ್ ಕುಮಾರ್ ಕಟೀಲ್ ಅವರ ಆಸಕ್ತಿಯನ್ನು ಪ್ರಶಂಸಿಸಿದ ಅನಂತ ಕುಮಾರ್ ನಳಿನ್ ಅವರು ಎಂಸಿಎಫ್ ಸಮಸ್ಯೆ ಕುರಿತು ನನ್ನ ಗಮನಕ್ಕೆ ತಂದು ಇಬ್ಬರೂ ವಿಚಾರ ಮಾಡಿ ಸಂಪುಟ ಸಭೆಯಲ್ಲಿ ಅನಿಲ ಸಂಪರ್ಕ ಜೋಡಣೆಯಾಗುವ ತನಕ ನಾಫ್ತಾ ಬಳಕೆ ಮುಂದುವರಿಸಲು ತೀರ್ಮಾನಿಸಿದ್ದಾಗಿ ನುಡಿದರು
 ಸಂಸದ ನಳಿನ್ ಕುಮಾರ್ ಕಟೀಲ್,   ಬಿಜೆಪಿ ಜಿಲ್ಲಾಧ್ಯಕ್ಷ ಪ್ರತಾಪ್ ಸಿಂಹ್ ನಾಯಕ್,  ಮಾಜಿ ಉಪ ಸಭಪತಿ ಎನ್.ಯೋಗೀಶ್ ಭಟ್, ಮುಂತಾದವರು ಈ ಸಂದರ್ಭದಲ್ಲಿ ಸಚಿವರ ಜತೆಗಿದ್ದರು.

 

Write A Comment