ಬೆಂಗಳೂರು, ಮಾರ್ಚ್ .26: ಮೈಕ್ರೊಸಾಫ್ಟ್ ಆಯೋಜಿಸಿದ್ದ ಭದ್ರತೆ ಮತ್ತು ಹ್ಯಾಕಿಂಗ್ ರಾಷ್ಟ್ರಮಟ್ಟದ ಸ್ಪರ್ಧೆಯಲ್ಲಿ ಬೆಂಗಳೂರಿನ ಅಮೃತ ಕಾಲೇಜ್ ಆಫ್ ಇಂಜಿನಿಯರಿಂಗ್ ತಂಡ ಜಂಟಿ ವಿಜೇತರಾಗಿ ಹೊರ ಹೊಮ್ಮಿದ್ದಾರೆ. ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(ಹೈದ್ರಾಬಾದ್) ಮತ್ತು ಇಂಡಿಯನ್ ಇನ್ಸ್‌ಟಿಟ್ಯೂಟ್ ಆಫ್ ಟೆಕ್ನಾಲಜಿ(ಮುಂಬೈ) ಹ್ಯಾಕಿಂಗ್ ಮತ್ತು ಬಿಲ್ಡ್ ದಿ ಶೀಲ್ಡ್ ರಾಷ್ಟ್ರಮಟ್ಟದ ಕಾಲೇಜು ಸ್ಪರ್ಧೆ ಜಂಟಿ ವಿಜೇತರಾಗಿದ್ದಾರೆ. ದೇಶದಲ್ಲೇ ಮೊದಲ ಈ ಅಪರೂಪದ ಮಾದರಿಯ ಸ್ಪರ್ಧೆಯನ್ನು ಮೈಕ್ರೊಸಾಫ್ಟ್ ಆಯೋಜಿಸಿತ್ತು. ಸ್ಪರ್ಧೆ ವಿದ್ಯಾರ್ಥಿಗಳಿಗೆ ಮಾಹಿತಿ ಭದ್ರತೆ ಮತ್ತು ರಿಸ್ಕ್ ನಿರ್ವಹಣೆ ಕುರಿತು ಸ್ಪರ್ಧಾತ್ಮಕ ಅನುಭವ ನೀಡಿತು.
ಈ ವರ್ಷ 290 ತಂಡಗಳು, 1000ಕ್ಕೂ ಅಧಿಕ ಸ್ಪರ್ಧಿಗಳು ಜನವರಿ.2015ರಲ್ಲಿ ನಡೆದ ಆನ್‍ಲೈನ್ ಅರ್ಹತ ಸುತ್ತಿನಲ್ಲಿ ಭಾಗವಹಿಸಿದ್ದರು. ಇದರಲ್ಲಿ 50 ತಂಡಗಳನ್ನು ರಾಷ್ಟ್ರೀಯ ಫೈನಲ್‍ಗೆ ಅಂತಿಮಗೊಳಿಸಲಾಗಿತ್ತು. ಇದರಲ್ಲಿ 3 ತಂಡಗಳು ಮೊದಲ 3 ಸ್ಥಾನಕ್ಕೆ ಸೆಣೆಸಿತ್ತು.
ಫೈನಲ್ ವಿಜೇತರಿಗೆ ಮೈಕ್ರೊಸಾಫ್ಟ್ ನಲ್ಲಿ ಉದ್ಯೋಗಾವಕಾಶದ ಪ್ರಿ ಇಂಟರ್ ವ್ಯೂ ಕೂಡ ನಡೆಯಿತು. ಎಕ್ಸ್‍ಬಾಕ್ಸ್ ಒನ್ ಮತ್ತು ಲುಮಿಯಾ ಫೋನ್ ಗಳಲ್ಲಿ ಕೆಲಸ ಮಾಡುವ ಅವಕಾಶ. ಸ್ಪರ್ಧೆ ಕುರಿತು ಮಾತನಾಡಿದ ಮೈಕ್ರೊಸಾಫ್ಟ್ ಐಟಿ ಇಂಡಿಯಾ ಪ್ರಿನ್ಸಿಪಲ್ ಸೆಕ್ಯುರಿಟಿ ಮ್ಯಾನೇಜರ್ ಸುವಬರ್ತ ಸಿನ್ಹ, ವಿದ್ಯಾರ್ಥಿಗಳ ತೋರಿಸಿದ ಆಸಕ್ತಿ ಮತ್ತು ಉತ್ಸಾಹ ಅತ್ಯದ್ಭುತವಾಗಿತ್ತು. ಈ ವರ್ಷದ ಪ್ರತಿಕ್ರಿಯೆಯಿಂದ ನಾವು ಹೆಮ್ಮೆಗೊಂಡಿದ್ದೇವೆ. ಕಳೆದ ವರ್ಷಕ್ಕೆ ಹೋಲಿಸಿದರೆ ಸ್ಪರ್ಧಿಗಳ ಪ್ರಮಾಣ ಶೇ.47ರಷ್ಟು ಹೆಚ್ಚಾಗಿದೆ. ಈ ವರ್ಷದ ವಿಜೇತ ತಂಡಗಳನ್ನು ಅಭಿನಂದಿಸುತ್ತೇನೆ. ಮೈಕ್ರೊಸಾಫ್ಟ್ ಕೇವಲ ಉತ್ಕೃಷ್ಟ ದರ್ಜೆಯ ಅನುಭವಗಳನ್ನು ಸೃಷ್ಟಿಸಲು ಮಾತ್ರ ಬದ್ಧವಾಗಿಲ್ಲ ಜೊತೆಗೆ ಉತ್ಕೃಷ್ಟ ಮಟ್ಟದ ಭದ್ರತೆ ಅಭಿವೃದ್ಧಿಗೂ ಬದ್ಧವಾಗಿದೆ. ಈ ಸ್ಪರ್ಧೆ ವಿದ್ಯಾರ್ಥಿಗಳ ಕೌಶಲ್ಯ ಪ್ರದರ್ಶನಕ್ಕೆ ಅತ್ಯುತ್ತಮ ವೇದಿಕೆ ಒದಗಿಸಿದೆ ಎಂದರು.
ಸ್ಪರ್ಧೆಯ ವಿಜೇತ ಬೆಂಗಳೂರಿನ ಫ್ಲೈಯಿಂಗ್ ಡಚ್‍ಮನ್ ತಂಡದ ಅನಿರುದ್ಧ್ ರಾಯಭಾರಮ್ ಮಾತನಾಡಿ, ಬಿಲ್ಡ್ ದಿ ಶೀಲ್ಡ್ ಅಚ್ಚರಿಯ ಮತ್ತು ಅತ್ಯದ್ಭುತ ಅನುಭವದ ಸ್ಪರ್ಧೆ. ಈ ಸ್ಪರ್ಧೆಯಲ್ಲಿ ವಿಜಯಶಾಲಿಯಾಗಿದ್ದು ರೋಮಾಂಚನ ಮೂಡಿಸಿದೆ. ನಾವು ಭಾರತದ ಅತ್ಯುತ್ತಮ ತಂಡಗಳ ವಿರುದ್ಧ ಸೆಣೆಸಾಟ ನಡೆಸಿದವು. ಮೈಕ್ರೊಸಾಫ್ಟ್ ಕ್ಯಾಂಪ್‍ಸ್‍ನಲ್ಲಿ ಸಾಫ್ಟ್‍ವೇರ್ ಸೆಕ್ಯುರಿಟಿ ನಾಯಕರೊಂದಿಗೆ ಸಂವಾದ ನಡೆಸುವ ಅವಕಾಶ ನೀಡಿತು ಎಂದರು.
ಬಿಲ್ಡ್ ದಿ ಶೀಲ್ಡ್ ಸ್ಪರ್ಧೆ ಯುವ ಉತ್ಸಾಹಿಗಳಲ್ಲಿ ತನ್ನ ಆಸಕ್ತಿ ಹಂಚಿಕೊಳ್ಳುವ ಮೈಕ್ರೊಸಾಫ್ಟ್‌ನ ಪರಿಶ್ರಮವಾಗಿದೆ. ಈ ಮೂಲಕ ಸಾಫ್ಟ್‍ವೇರ್ ಭದ್ರತೆಗೆ ಸಹಾಯ ಮಾಡುತ್ತದೆ. ಫೈನಲ್ ಪ್ರವೇಶಿಸಿದ ಸ್ಪರ್ಧಿಗಳಿಗೆ ಮೈಕ್ರೊಸಾಫ್ಟ್ ಐಟಿ ಇಂಡಿಯಾ ತಂಡದೊಂದಿಗೆ ಆನ್ ಲೈನ್ ಕಲಿಕೆ ಅವಧಿ ಕೂಡ ಇತ್ತು. ಬೇರೆ, ಬೇರೆ ಕಾಲೇಜಿನ ವಿದ್ಯಾರ್ಥಿಗಳನ್ನು ಭೇಟಿ ಮಾಡುವ ಅವಕಾಶವಿತ್ತು.
ಮೈಕ್ರೊಸಾಫ್ಟ್ ಇಂಡಿಯಾ ಕುರಿತು : 1975ರಲ್ಲಿ ಆರಂಭಗೊಂಡ ಮೈಕ್ರೊಸಾಫ್ಟ್ ಸಾಫ್ಟ್‍ವೇರ್, ಸೇವೆ, ಉತ್ಪನ್ನ ಮತ್ತು ಪರಿಹಾರಗಳಲ್ಲಿ ಜಾಗತಿಕ ನಾಯಕ. ಭಾರತದಲ್ಲಿ 1990ರಿಂದ ವಹಿವಾಟು ನಡೆಸುತ್ತಿದೆ. ಇಂದು ಭಾರತದಲ್ಲಿ 6000 ನೌಕರರನ್ನು ಹೊಂದಿದೆ. ಭಾರತದ 9 ನಗರಗಳಾದ ಅಹಮದಾಬಾದ್, ಬೆಂಗಳೂರು,ಚೆನ್ನೈ, ದಿಲ್ಲಿ ಎನ್ಸಿಆರ್,ಹೈದ್ರಾಬಾದ್,ಕೊಚ್ಚಿ,ಕೊಲ್ಕತಾ,ಮುಂಬೈ ಮತ್ತು ಪುಣೆಯಲ್ಲಿ ತನ್ನ ನಾನಾ ಕಚೇರಿಗಳನ್ನು ಹೊಂದಿದೆ