ಹೈದರಾಭಾದ್, ಮಾರ್ಚ್.26 : ಹೈದರಾಬಾದಿನಲ್ಲಿರುವ ತೆಲುಗು ನಟ ಅಕ್ಕಿನೇನಿ ನಾಗಾರ್ಜುನ ಕುಟುಂಬದ ಅನ್ನಪೂರ್ಣ ಸ್ಟುಡಿಯೋವನ್ನು ಬ್ಯಾಂಕ್ ಜಪ್ತಿ ಮಾಡಿದೆ. ರಾಷ್ಟೀಕೃತ ಬ್ಯಾಂಕಿನಲ್ಲಿ ತೆಗೆದುಕೊಂಡಿದ್ದ ಸಾಲವನ್ನು ವಾಯಿದೇ ಮೀರಿದ ನಂತರವೂ ಮರುಪಾವತಿಸದೇ ಇರುವು ಕಾರಣಕ್ಕಾಗಿ, ನಗರದ ಹೃದಯ ಭಾಗದ ಜ್ಯುಬಿಲಿ ಹಿಲ್ಸ್ ನಲ್ಲಿರುವ ಪ್ರಸಿದ್ದ ಅನ್ನಪೂರ್ಣ ಸ್ಟುಡಿಯೋವನ್ನು ಬ್ಯಾಂಕ್ ಜಪ್ತಿ ಮಾಡಿಕೊಂಡಿದೆ.
ಆಂಧ್ರ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಅನ್ನಪೂರ್ಣ ಸ್ಟುಡಿಯೋದ ದಾಖಲೆಗಳನ್ನು ಆಧಾರವಾಗಿಟ್ಟುಕೊಂಡು 62 ಕೋಟಿ ರೂಪಾಯಿ ಸಾಲ ನೀಡಿತ್ತು. ಆಂಧ್ರ ಬ್ಯಾಂಕ್ ಮತ್ತು ಇಂಡಿಯನ್ ಬ್ಯಾಂಕ್ ಕ್ರಮವಾಗಿ 32.3 ಮತ್ತು 29.7 ಕೋಟಿ ರೂಪಾಯಿ ಸಾಲ ನೀಡಿತ್ತು. ಜನವರಿ 2014ರಲ್ಲಿ ಸಾಲ ಮರು ಪಾವತಿಸುವಂತೆ ನೋಟಿಸ್ ಮೇಲೆ ನೋಟೀಸ್ ಜಾರಿ ಮಾಡಿದ್ದರೂ ನಾಗಾರ್ಜುನ ಕುಟುಂಬ ಇದಕ್ಕೆ ಸ್ಪಂದಿಸಿರಲಿಲ್ಲ. ರಜನಿಕಾಂತ್ ಒಡೆತನದ ಪ್ರಾಪರ್ಟಿಯೊಂದಕ್ಕೂ ಇದೇ ಪರಿಸ್ಥಿತಿಯಾಗಿತ್ತು.