ಬೆಂಗಳೂರು,ಮಾರ್ಚ್.23 : ಕನ್ನಡ ಚಿತ್ರೋದ್ಯಮಕ್ಕೆ ಹೊಸ ನಾಯಕಿಯ ಆಗಮನವಾಗಿದೆ. ನೈನಿತಾಲಿನ ಮಾಡೆಲ್ ಮತ್ತು ನಟಿ ಸೋನಂ ಬಾಜ್ವಾ ಈ ಹೊಸ ಎಂಟ್ರಿ. ಮೊದಲು ಎರಡು ಪಂಜಾಬಿ ಚಲನಚಿತ್ರಗಳಾದ ‘ಬೆಸ್ಟ್ ಆಫ್ ಲಕ್’ ಮತ್ತು ‘ಪಂಜಾಬ್ 1948 ಗಳಲ್ಲಿ ನಟಿಸಿದ್ದ ಸೋನಂ ತಮಿಳು ಚಿತ್ರವೊಂದರಲ್ಲಿ ನಟಿಸಿದ್ದಾರೆ ಕೂಡ.
ನೀಳಕಾಯದ ಈ ಪಂಜಾಬಿ ಚೆಲುವೆ ಎಂ ಸರವಣನ್ ಅವರ ಇನ್ನೂ ಹೆಸರಿಡದ ಚಿತ್ರಕ್ಕೆ ಆಯ್ಕೆಯಾಗುವ ಮೂಲಕ ಕನ್ನಡ ಚಿತ್ರೋದ್ಯಮಕ್ಕೆ ಎಂಟ್ರಿ ಪಡೆಯುತ್ತಿದ್ದಾರೆ. ಎನ್ ಕೆ ಲೋಹಿತ್ ಅವರು ನಿರ್ಮಿಸಿರುವ ಈ ಸಿನೆಮಾದಲ್ಲಿ ಪುನೀತ್ ರಾಜಕುಮಾರ್ ಪ್ರಮುಖ ನಟ. ಮೂಲಗಳ ಪ್ರಕಾರ 15 ದಿನಗಳ ಹಿಂದೆಯೆ ನಟಿಯ ಜೊತೆ ಒಪ್ಪಂದವಾಗಿದ್ದು, ಅಧಿಕೃತ ಘೋಷಣೆ ಶೀಘ್ರದಲ್ಲೇ ಆಗಲಿದೆ.
ಫೆಮಿನಾ ಮಿಸ್ ಇಂಡಿಯಾ 2012 ಸ್ಪರ್ಧೆಯಲ್ಲಿ ಭಾಗವಹಿಸಿದ್ದ ಸೋನಂ, ಫರಾ ಖಾನ್ ಅವರ ‘ಹ್ಯಾಪಿ ನ್ಯೂ ಯಿಯರ್’ ಗೆ ಕೂಡ ಆಯ್ಕೆಯಾಗಲಿದ್ದಾರೆ ಎಂಬ ಸುದ್ದಿಯಿತ್ತು ಆದರೆ ಅಂತಿಮ ಕ್ಷಣದಲ್ಲಿ ಹೊರಬಿದ್ದಿದ್ದರು. ಎಸ್ ಎಸ್ ತಮನ್ ಅವರ ಸಂಗೀತ ಇರುವ ಈ ಚಲನಚಿತ್ರಕ್ಕೆ ಶಣ್ಮುಗಸುಂದರಮ್ ಸಿನೆಮ್ಯಾಟೋಗ್ರಾಫರ್. ಶರವಣನ್ ಅವರ ಈ ಯೋಜನೆ ಏಪ್ರಿಲ್ ನಲ್ಲಿ ಪ್ರಾರಂಭವಾಗಲಿದೆ.


