ಮಂಗಳೂರು ; ತೊಕ್ಕೊಟ್ಟು ಬಳಿಯ ಶಾಲಾ ವಿಧ್ಯಾರ್ಥಿನಿ ನಾಲ್ಕು ವರ್ಷದ ಬಾಲೆಯ ಮೇಲೆ ನಡೆದಿದೆ ಎನ್ನಲಾದ ಲೈಂಗಿಕ ದೌರ್ಜನ್ಯವನ್ನು ಖಂಡಿಸಿ ಹಾಗೂ ಆರೋಪಿ ವಿರುದ್ಧ ಕಠಿಣ ಕಾನೂನು ಕ್ರಮಕ್ಕೆ ಆಗ್ರಹಿಸಿ ಜಸ್ಟಿಸ್ ಪೋರ್ ಬೇಬಿ ನಿರ್ಭಯಾ ಮಂಗಳೂರು ವತಿಯಿಂದ ಶನಿವಾರ ಸಂಜೆ ನಗರದ ಪೊಲೀಸ್ ಆಯುಕ್ತರ ಕಚೇರಿ ಬಳಿಯಿಂದ ಜಿಲ್ಲಾಧಿಕಾರಿ ಕಚೇರಿ ತನಕ ಮೊಂಬತ್ತಿ ಬೆಳಕಿನ ಮೌನ ಮೆರೆವಣಿಗೆ ನಡೆಯಿತು.
ಯುವಕರು, ಯುವತಿಯರು, ಮಹಿಳೆಯರು, ಪುರುಷರು, ಮಕ್ಕಳು ಸಾವಿರಾರು ಸಂಖ್ಯೆಯಲ್ಲಿ ಜಾತಿ, ಮತ, ಭಾಷೆ ಬೇಧವಿಲ್ಲದೆ ಮೇಣದ ಬತ್ತಿ ಹಿಡಿದುಕೊಂಡು ಈ ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.
ಪ್ರತಿಭಟನಾಕಾರನ್ನುದ್ದೇಶಿಸಿ ಜಸ್ಟಿಸ್ ಪೋರ್ ಭೇಬಿ ನಿರ್ಭಯಾ ಪರವಾಗಿ ಸಿಟಿಝನ್ಸ್ ಪೋರಂ ಪೋರ್ ಮಂಗಳೂರು ಡೆವಲಪ್ ಮೆಂಟ್ ಇದರ ಸಂಯೋಜಕರಾದ ವಿದ್ಯಾ ದಿನಕರ್ ಅವರು ಮಾತನಾಡಿ, ಜಿಲ್ಲೆಯ ಹೆಸರಿಗೆ ಕಳಂಕ ತರುವಹ ಇಂತಹ ಅಮಾನವೀಯ ಘಟನೆ ನಡೆದಿರುವುದು ಖಂಡನೀಯ, ದೊಡ್ಡ ದೊಡ್ಡ ನಗರಗಳಾದ ದೆಹಲಿ, ಬೆಂಗಳೂರು ನಂತರ ನಮ್ಮ ಪರಿಸರದಲ್ಲೇ ಲೈಂಗಿಕ ಕಿರುಕುಳದಂಥ ಅಮಾನವೀಯ ಘಟನೆಗಳು ನಡೆಯುತ್ತಿರುವುದು ನಾಚಿಕೆಗೇಡು,ಇಂತಹ ಮಾನವೀಯತೆಯಿರುವವರು ತಲೆತಗ್ಗಿಸುವಂತ ಕೃತ್ಯ ನಡೆದಿದ್ದರೂ ಲೈಂಗಿಕ ಕಿರುಕುಳ ನಡೆದಿದೆ ಎನ್ನಲಾಗಿರುವ ಶಾಲೆಯ ವಿರುದ್ಧ ಯಾವುದೇ ಕಾನೂನು ಕ್ರಮ ಜರಗದಿರುವುದು ಅಶ್ಚರ್ಯವನ್ನುಂಟು ಮಾಡಿದೆ. ಈ ಪ್ರಕರಣದ ಆರೋಪಿ ಹಾಗೂ ಶಾಲೆಯ ವಿರುದ್ಧ ಜಿಲ್ಲಾಡಳಿತ ಮತ್ತು ಪೊಲೀಸ್ ಇಲಾಖೆ ಕಠಿಣ ಕ್ರಮ ಕೈಗೊಳದಿದ್ದರೆ ಉಗ್ರ ಹೋರಾಟ ಮಾಡಲಾಗುವುದು ಎಂದೂ ಎಚ್ಚರಿಸಿದರು.
ಸೆಂಟರ್ ಇಟೆಗ್ರೇಟೆಡ್ ಲರ್ನಿಂಗ್ ನ ನಿರ್ದೇಶಕರಾದ ಸಚಿತಾನಂದ ಗೋಪಾಲ್, ಸಹನಾ ವಿವೆನ್ಸ್ ಕೌನ್ಸೆಲಿಂಗ್ ಪ್ರಧಾನ ಕಾರ್ಯದರ್ಶಿ ಖ್ರೈರುನ್ನೀಸಾ ಸೈಯದ್, ಸಿ.ಎ.ಸಿ.ಎಲ್ ರಾಜ್ಯ ಸಂಚಾಲಕ ರೆನ್ನಿ ಡಿಸೋಜಾ ಕೆರಿಯರ್ ಗೈಡೆನ್ಸ್ ಆಂಡ್ ಇನ್ ಫರ್ಮೇಶನ ಸೆಂಟರ್ ನ ಅಧ್ಯಕ್ಷ ಉಮರ್ ಯು.ಎಚ್.ಮತ್ತಿತರರು ಪ್ರತಿಭಟನೆಯ ನೇತ್ರತ್ವ ವಹಿಸಿದ್ದರು.