ಅಂತರಾಷ್ಟ್ರೀಯ

ಮನೆಯೊಳಗೆ 5 ಶಿಶುಗಳ ಶವ ಪತ್ತೆ : ಕೊಲೆ ಶಂಕೆ.

Pinterest LinkedIn Tumblr

babys_dead_body

ಪ್ಯಾರಿಸ್,ಮಾರ್ಚ್.21: ಫ್ರಾನ್ಸ್‌ನ ಲೊಚಟ್ಸ್‌ನ ಮನೆಯೊಂದರಲ್ಲಿ ನಾಲ್ಕು ಶಿಶುಗಳ ಶವ ಪತ್ತೆಯಾಗಿದೆ. ಈ ಮನೆಯಲ್ಲಿ ವಾಸವಿದ್ದ ದಂಪತಿಯನ್ನು ಪೊಲೀಸರು ವಿಚಾರಣೆಗೊಳಪಡಿಸಿದ್ದಾರೆ. ದಂಪತಿ ಯಾವುದೇ ಅಪರಾಧ ಹಿನ್ನೆಲೆ ಹೊಂದಿಲ್ಲ. ಅವರಿಗೆ 13, 15 ವರ್ಷದ ಇಬ್ಬರು ಮಕ್ಕಳಿದ್ದು, ಅವು ಸುರಕ್ಷಿತವಾಗಿವೆ. ನವಜಾತ ಶಿಶುವಿನ ಶವವನ್ನು ಚೀಲದಲ್ಲಿ ಕಟ್ಟಿ ಫ್ರಿಡ್ಜ್‌ನಲ್ಲಿ ಇರಿಸಲಾಗಿತ್ತು. ಅನುಮಾನದ ಮೇಲೆ ಮನೆಯನ್ನು ಶೋಧಿಸಿದಾಗ ಇನ್ನೂ ಮೂರು ಶಿಶುಗಳ ಶವಗಳು ಪತ್ತೆಯಾಗಿವೆ.

ಈ ಶವಗಳು ಇದೇ ದಂಪತಿಯ ಮಕ್ಕಳದ್ದಿರಬೇಕು ಎಂದು ಪೊಲೀಸರು ಶಂಕಿಸಿದ್ದಾರೆ. ದಂಪತಿ ಪೈಕಿ 35 ವರ್ಷದ ಮಹಿಳೆ ಗರ್ಭ ಧರಿಸಿದ್ದು ಮತ್ತು ಹೆರಿಗೆಯಾಗಿರುವುದನ್ನು ಹೊರಗಿನವರಿಗೆ ಗೊತ್ತಾಗದಂತೆ ಮುಚ್ಚಿಟ್ಟಿದ್ದಾಳೆ. ಅವು ಸಹಜವಾಗಿ ಮರಣ ಹೊಂದಿದವೇ ಅಥವಾ ದಂಪತಿಯೇ ಕೊಂದರೇ ಎಂಬ ಕುರಿತು ತನಿಖೆ ನಡೆಯುತ್ತಿದೆ. ಮಹಿಳೆಯನ್ನು ಪರೀಕ್ಷೆಗಾಗಿ ಆಸ್ಪತ್ರೆಗೆ ಕರೆದೊಯ್ಯಲಾಗಿದೆ. ಡಿಎನ್‌ಎ ಮಾದರಿಗಳನ್ನು ಸಂಗ್ರಹಿಸಿದ್ದು, ಶಿಶುಗಳು ಮೃತಪಟ್ಟಿರುವುದೇ ಅಥವಾ ಹತ್ಯೆ ಮಾಡಲಾಗಿದೆಯೇ ಎಂಬ ಪರೀಕ್ಷೆಗಾಗಿ ಕಳಿಸಲಾಗಿದೆ ಎಂದು ಮಾಧ್ಯಮ ವರದಿ ಮಾಡಿದೆ.

2010ರಲ್ಲಿ ಮಹಿಳೆಯೊಬ್ಬರು ತನ್ನ 8 ನವಜಾತ ಶಿಶುಗಳನ್ನು ಉಸಿರುಗಟ್ಟಿಸಿ ಕೊಂದು ದಶಕಗಳ ಕಾಲ ಮುಚ್ಚಿಟ್ಟಿದ್ದರು.

Write A Comment