ಮಂಗಳೂರು,ಮಾರ್ಚ್.20: ಕರಾವಳಿಯ ಜೀವನದಿ ನೇತ್ರಾವತಿ ನದಿ ತಿರುವು ಯೋಜನೆಯ ಬಗ್ಗೆ ಕಾನೂನು ವ್ಯವಸ್ಥೆಯನ್ನು ದಿಕ್ಕರಿಸಿ ಬಲಾತ್ಕಾರದಿಂದ ಎತ್ತಿನಹೊಳೆ ಯೋಜನೆಯ ಕಾಮಗಾರಿ ಆರಂಭಿಸಿರುವುದನ್ನು ವಿರೋಧಿಸಿ ಸಹ್ಯಾದ್ರಿ ಸಂರಕ್ಷಣಾ ಸಂಚಯ, ರಾಷ್ಟ್ರೀಯ ಪರಿಸರ ಸಂರಕ್ಷಣಾ ಒಕ್ಕೂಟ ಹಾಗೂ ಸಕಲೇಶಪುರ ಪರಿಸರ ಸಂಘಟನೆಗಳ ವತಿಯಿಂದ ಶುಕ್ರವಾರ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ’ ಜಲ ಜಾಗೃತಿಗಾಗಿ ಕೊಡಪಾನ ಚಳುವಳಿ’ ಎಂಬ ಪ್ರತಿಭಟನೆಯನ್ನು ನಡೆಸಲಾಯಿತು.
ಕೊಡಪಾನ ಚಳುವಳಿಯಲ್ಲಿ ದಿನೇಶ್ ಹೊಳ್ಳ ಅವರು ಮಾತನಾಡಿ ನೇತ್ರಾವತಿ ತಿರುವು ಯೋಜನೆ, ಎತ್ತ್ನಹೊಳೆ ಯೋಜನೆ ಯಾವುದೇ ಆದರೂ ಅತ್ಯಮ್ತ ಮಾರಕವಾದುದು. ಪಶ್ಚಿಮ ಘಟ್ಟ ಪ್ರದೇಶ ಅತ್ಯಂತ ಸೂಕ್ಷ್ಮವಾದುದ್ದು ಎನ್ನುವ ತಿಳುವಳಿಕೆಯೂ ಇಲ್ಲದೆ ಸರ್ಕಾರ ಈ ಯೋಜನೆಯನ್ನು ಜಾರಿಗೆ ತರಲು ಹೊರಟಿರುವುದು ಖಂಡನೀಯವೆಂದರು.
ಜಲ ಜಾಗೃತಿಯ ಪ್ರತೀಕಾವಾಗಿ ರೋಶನಿ ಸ್ಕೂಲ್ ಆಫ್ ಸೋಶಿಯಲ್ ವರ್ಕ್ಸ್ ನ ವಿದ್ಯಾರ್ಥಿಗಳಿಂದ ಬೀದಿ ನಾಟಕವನ್ನಾಡಿದರು. ಪ್ರತಿಭಟನೆಯಲ್ಲಿ ದಿನೇಶ್ ಹೊಳ್ಳ, ದಿನೇಶ್ ಪೈ, ಡಾ. ನಿರಂಜನ ರೈ, ಸೋಮಶೇಖರ್, ಶಶಿಧರ್ ಶೆಟ್ಟಿ, ಕಿಶೋರ್ , ಅವಿನಂದ್ , ಗಿರಿಧರ್ ಕಾಮತ್, ದಿನೇಶ್ ಕೊಡಿಯಲ್ ಬೈಲ್, ರಾಜೇಶ್ ದೇವಾಡಿಗ, ಮಾಧವ ಉಳ್ಳಾಲ್, ಹರೀಶ್ ಮಾಡ್ಯರ್ ಮೊದಲಾದವರು ಉಪಸ್ಥಿತರಿದ್ದರು.