ಉಡುಪಿ: ಕೊಳಂಬೆ ಸಾಯಿ ಆಶ್ರಮ್ ಅಪಾರ್ಟ್‌ಮೆಂಟ್‌ನ 104ನೇ ಫ್ಲಾಟ್ ನಿವಾಸಿ ಸುಕೇಶ್ ರಾವ್, ಅಪಾರ್ಟ್‌ಮೆಂಟ್‌ನಲ್ಲಿದ್ದುಕೊಂಡು ಬೆಟ್ಟಿಂಗ್ ನಡೆಸುತ್ತಿರುವ ಬಗ್ಗೆ ಮಾಹಿತಿ ಬಂದ ಹಿನ್ನೆಲೆಯಲ್ಲಿ ಉಡುಪಿ ಇನ್‌ಸ್ಪೆಕ್ಟರ್ ಶ್ರೀಕಾಂತ್ ಕೆ. ಮತ್ತು ಸಿಬ್ಬಂದಿಗಳು ಗುರುವಾರ ದಾಳಿ ನಡೆಸಿ ಆತನನ್ನು ಬಂಧಿಸಿದ್ದಾರೆ.
ಬಂಧಿತನಿಂದ 4 ಮೊಬೈಲ್, 1 ಟಿವಿ, ಒಂದು ಟ್ಯಾಬ್ 1 ಡೈರಿ ಮತ್ತು 3.88 ಲಕ್ಷ ರೂ. ವಶಪಡಿಸಿಕೊಂಡಿದ್ದಾರೆ. ಬಳಿಕ ಆತನನ್ನು ವಿಚಾರಣೆ ನಡೆಸಿದಾಗ ಆತನಿಗೆ ಸಹಕಾರ ನೀಡುತ್ತಿದ್ದ ಬೈಲೂರು ಆನಂದ ಪೂಜಾರಿ ಮತ್ತು ಮೂಡನಿಡಂಬೂರು ರಮೇಶ ಪೂಜಾರಿ ಮಾಹಿತಿ ಸಿಕ್ಕಿದೆ ಎನ್ನಲಾಗಿದೆ. ಅವರನ್ನು ಬಂಧಿಸಿರುವ ಬಗ್ಗೆ ಮಾಹಿತಿಯಿದ್ದು ಆರೋಪಿಗಳಿಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.