ಸೀಟೆಲ್,ಮಾರ್ಚ್.18 : ವಿಂಡೋಸ್ 10 ಆಪರೇಟಿಂಗ್ ಸಿಸ್ಟಂನಲ್ಲಿ ಬಯೋವುಟ್ರಿಕ್ ಸೈನ್ ಇನ್ ಆಪ್ಶನ್ ತರುವ ಮೂಲಕ ಪ್ರಸ್ತುತ ಆಪರೇಟಿಂಗ್ ಸಿಸ್ಟಂನ್ನು ಪಾಸ್‌ವರ್ಡ್ ಮುಕ್ತಗೊಳಿಸಲು ಮೈಕ್ರೋಸಾಫ್ಟ್ ಸಂಸ್ಥೆ ತೀರ್ಮಾನಿಸಿದೆ. ಈ ಸೌಲಭ್ಯ 2015ರ ನಂತರ ಲಭ್ಯವಾಗಲಿದೆ. ವಿಂಡೋಸ್ 10ನ ಈ ವೈಶಿಷ್ಟ್ಯಕ್ಕೆ ವಿಂಡೋಸ್ ಹೆಲೋ ಎಂದು ಹೆಸರಿಡಲಾಗಿದ್ದು, ಲಾಗಿನ್ ಆಗಬೇಕಾದರೆ ಬಳಕೆದಾರರು ಅವರ ಮುಖ, ಕಣ್ಣಿನ ಪಾಪೆ ಅಥವಾ ಬೆರಳಚ್ಚು ನಮೂದಿಸುವ ಮೂಲಕ ವಿಂಡೋಸ್ ಫೋನ್, ಲ್ಯಾಪ್‌ಟಾಪ್ ಅಥವಾ ಪರ್ಸನಲ್ ಕಂಪ್ಯೂಟರ್‌ಗೆ ಲಾಗಿನ್ ಆಗಬಹುದಾಗಿದೆ.
ಈ ವೈಶಿಷ್ಟ್ಯದ ಬಗ್ಗೆ ಮೈಕ್ರೋಸಾಫ್ಟ್ ಗುರುವಾರ ಘೋಷಣೆ ಮಾಡಿದ್ದು, ಬಳಕೆದಾರರ ಬಯೋವುಟ್ರಿಕ್ ಡಾಟಾ ಡಿವೈಸ್‌ಗಳ ಲೋಕಲ್ ಡ್ರೈವ್‌ಗಳಲ್ಲಿ ಸೇವ್ ಆಗಲಿದ್ದು, ಹ್ಯಾಕರ್‌ಗಳಿಂದ ರಕ್ಷಣೆ ಒದಗಿಸುತ್ತದೆ. ವಿಂಡೋಸ್ 10 ಆಪರೇಟಿಂಗ್ ಸಿಸ್ಟಂ ಹೊಂದಿರುವ ಡಿವೈಸ್‌ಗಳಲ್ಲಿ ಮಾತ್ರ ಈ ವೈಶಿಷ್ಟ್ಯ ಕಾರ್ಯ ನಿರ್ವಹಿಸಲಿದೆ.