ಉಡುಪಿ: ಕಾರ್ಕಳ ತಾಲೂಕಿನ ಪಳ್ಳಿ ನಿಂಜೂರು ಎಂಬಲ್ಲಿ ಅಪ್ರಾಪ್ತ ಬಾಲಕಿಯನ್ನು ಪುಸಲಾಯಿಸಿ ಆಕೆಯ ಮೇಲೆ ಅತ್ಯಾಚಾರಕ್ಕೆ ಯತ್ನಿಸಿ ಸಿಕ್ಕಿಬಿದ್ದ ಮೀನು ವ್ಯಾಪಾರಿಯನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ನಡೆದಿದೆ.
ಮೀನು ವ್ಯಾಪಾರಿ ಸುರೇಂದ್ರ ಯಾನೆ ಸೂರಿ ಬಂಧಿತ ಆರೋಪಿ.
ಮೂಲತಃ ಚಿಕ್ಕಮಗಳೂರಿನ ಶಿವಾಜಿನಗರದವಳಾದ ಬಾಲಕಿ ಕೆಲ ದಿನಗಳ ಹಿಂದೆ ತನ್ನ ಸಂಬಂಧಿಕರ ಮನೆಯಾದ ನಿಂಜೂರಿಗೆ ಬಂದಿದ್ದಳು.ಇದೇ ಮಾರ್ಗವಾಗಿ ದಿನಾ ಮೀನು ವ್ಯಾಪಾರಕ್ಕೆ ಬರುತ್ತಿದ್ದ ಸುರೇಂದ್ರ ಈ ಬಾಲಕಿಯನ್ನು ಪುಸಲಾಯಿಸಿ ಬಳಿಕ ಅವಕಾಶಕ್ಕೆ ಕಾದು ಆಕೆಯನ್ನು ಕರೆದೊಯ್ದು ಮಾನಭಂಗಕ್ಕೆ ಯತ್ನಿಸುವಾಗ ಸ್ಥಳೀಯರ ಕೈಗೆ ಸಿಕ್ಕಿಬಿದ್ದು, ಆತನನ್ನು ಪೊಲೀಸರ ವಶಕ್ಕೆ ಒಪ್ಪಿಸಲಾಗಿದೆ.
ಈತನ ವಿರುದ್ಧ ಕಾರ್ಕಳ ನಗರ ಠಾಣಾ ಪೊಲೀಸರು ಪೋಕ್ಸೋ ಕಾಯಿದೆಯಡಿ ಪ್ರಕರಣ ದಾಖಲಿಸಿದ್ದಾರೆ.